ಜೈಪುರ : ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ನಾಲ್ಕು ವಿಕೆಟ್ಗಳ ರೋಚಕ ಜಯ ಗಳಿಸಿತು. ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಸಂಜು ಸ್ಯಾಮ್ಸನ್ ನೇತೃತ್ವದ ಬಳಗ ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 214 ರನ್ ಕಲೆ ಹಾಕಿ ಹೈದರಾಬಾದ್‌ಗೆ 215 ರನ್‌ಗಳ ಬೃಹತ್ ಗುರಿ ನೀಡಿತು.
ರಾಜಸ್ಥಾನದ ಪರ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್(95), ಸಂಜು ಸ್ಯಾಮ್ಸನ್ (66 ಅಜೇಯ) ಉತ್ತಮ ಪ್ರದರ್ಶನ ತೋರಿ ತಂಡದ ಸ್ಕೋರ್ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸವಾಲಿನ ಗುರಿ ಬೆನ್ನಟ್ಟಿದ ಹೈದರಾಬಾದ್ ಕೊನೆಯ ಎಸೆತದವರೆಗೂ ಹೋರಾಡಿ 20 ಓವರ್ಗಳಲ್ಲಿ 6 ವಿಕೆಟ್ಗೆ 217 ರನ್ ಗಳಿಸಿ 4 ವಿಕೆಟ್ಗಳ ರೋಚಕ ಗೆಲುವು ಪಡೆಯಿತು. ಇನ್ನಿಂಗ್ಸ್ನ ಕೊನೆಯ ಎಸೆತದಲ್ಲಿ ಹೈದರಾಬಾದ್‌ಗೆ 5 ರನ್ ಅಗತ್ಯವಿತ್ತು. ಈ ಸಂದರ್ಭದಲ್ಲಿ ಸಂದೀಪ್ ಶರ್ಮಾ ಎಸೆದ ನೋಬಾಲ್ ಸನ್ರೈಸರ್ಸ್ಗೆ ವರದಾನವಾಯಿತು. ಕೊನೆಯ ಓವರ್ನಲ್ಲಿ ತಂಡಕ್ಕೆ ಒಟ್ಟು 17 ರನ್‌ಗಳ ಅವಶ್ಯಕತೆ ಇತ್ತು. ಅಬ್ದುಲ್ ಸಮದ್ ಬೌಂಡರಿಗಳನ್ನು ದಾಖಲಿಸುವ ಮೂಲಕ ತಂಡಕ್ಕೆ ಗೆಲುವು ತಂದು ಕೊಟ್ಟರು.
ಇದನ್ನೂ ಓದಿ:GT vs LSG: ಲಕ್ನೋ ವಿರುದ್ಧ ಗೆದ್ದು ಪ್ಲೇ ಆಫ್ ಸನಿಹ ತಲುಪಿದ ಗುಜರಾತ್
ಸ್ಕೋರ್ ವಿವರ, ರಾಜಸ್ಥಾನ :ಯಶಸ್ವಿ ಜೈಸ್ವಾಲ್ (35 ರನ್ 18 ಎಸೆತ), ಜೋಸ್ ಬಟ್ಲರ್ (95 ರನ್ 59 ಎಸೆತ), ಸಂಜು ಸ್ಯಾಮ್ಸನ್ (66 ರನ್ 38 ಎಸೆತ) ಹೆಟ್ಮೇಯರ್ (7).