ಕರ್ನಾಟಕ

karnataka

ETV Bharat / sports

IPL 2021:​ ಚಾಂಪಿಯನ್ CSKಗೆ 20 ಕೋಟಿ... ವಿಶೇಷ ದಾಖಲೆ, ಪ್ರಶಸ್ತಿ ಗೆದ್ದ ಆಟಗಾರರ ವಿವರ ಹೀಗಿದೆ

2021ರ ಐಪಿಎಲ್​ನಲ್ಲಿ 32 ವಿಕೆಟ್ ಮೂಲಕ ಪರ್ಪಲ್​​ ಕ್ಯಾಪ್ ಪಡೆದ ಬೆಂಗಳೂರು ತಂಡದ ಬೌಲರ್​​ ಹರ್ಷಲ್ ಪಟೇಲ್ ಈ ಗೌರವ ಪಡೆದ ಎರಡನೇ ಅನ್​ಕ್ಯಾಪ್​ ಆಟಗಾರ ಎಂಬ ದಾಖಲೆ ಬರೆದರು. ಇದಕ್ಕೂ ಮುನ್ನ 2008ರಲ್ಲಿ ಪಂಜಾಬ್​ ತಂಡದಲ್ಲಿ ಆಡಿದ್ದ ಆಸ್ಟ್ರೇಲಿಯಾದ ಶಾನ್ ಮಾರ್ಷ್ ಗರಿಷ್ಠ ರನ್ ಗಳಿಕೆ​ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು.

Some records and awards winners of ipl 2021
IPL 2021:​ ಚಾಂಪಿಯನ್ CSKಗೆ 20 ಕೋಟಿ... ವಿಶೇಷ ದಾಖಲೆ, ಪ್ರಶಸ್ತಿ ಗೆದ್ದ ಆಟಗಾರರ ವಿವರ ಹೀಗಿದೆ

By

Published : Oct 16, 2021, 2:38 AM IST

Updated : Oct 16, 2021, 3:19 AM IST

ದುಬೈ:14ನೇ ಐಪಿಎಲ್​ ಚಾಂಪಿಯನ್​ ಆದ ಚೆನ್ನೈ ಸೂಪರ್​ ಕಿಂಗ್ಸ್ ತಂಡಕ್ಕೆ ಟ್ರೋಫಿ ಜೊತೆಗೆ 20 ಕೋಟಿ ರೂ. ಬಹುಮಾನದ ಚೆಕ್​ ಲಭಿಸಿದೆ. ಅಂತೆಯೇ ರನ್ನರ್​ ಅಪ್​ ಕೋಲ್ಕತ್ತಾ ನೈಟ್​ ರೈಡರ್ಸ್ 12.5 ಕೋಟಿ ರೂ.ಗಳನ್ನು ತನ್ನದಾಗಿಸಿಕೊಂಡಿದೆ.

ಈ ವರ್ಷ ಏಪ್ರಿಲ್​ 9ರಂದು ಆರಂಭಗೊಂಡಿದ್ದ 14ನೇ ಆವೃತ್ತಿಯ ಟೂರ್ನಿಯು ಕೋವಿಡ್​ ಹಿನ್ನೆಲೆಯಲ್ಲಿ ಮೇ 4ರಂದು ಮೊಟಕುಗೊಂಡಿತ್ತು. ಬಳಿಕ ಬಿಸಿಸಿಐ ಮುಂದಿನ ಹಂತದ ಪಂದ್ಯಗಳನ್ನು ದುಬೈನಲ್ಲಿ ಆಯೋಜಿಸಿತ್ತು. ಸೆ. 19ರಂದು ಐಪಿಎಲ್​-2021 ಪುನಾರಂಭಗೊಂಡಿತ್ತು. ನಿನ್ನೆ ಐಪಿಎಲ್​ಗೆ ಅದ್ಧೂರಿ ತೆರೆ ಬಿದ್ದಿದ್ದು, ಹಲವು ಯುವ ಆಟಗಾರರು ಆಕರ್ಷಕ ಆಟದ ಮೂಲಕ ಗಮನ ಸೆಳೆದಿದ್ದಾರೆ.

2021ರ ಐಪಿಎಲ್​​ನಲ್ಲಿ ಅಮೋಘ ಪ್ರದರ್ಶನದ ಮೂಲಕ​ ವಿಶೇಷ ಗೌರವಗಳಿಗೆ ಪಾತ್ರರಾದ ಆಟಗಾರರ ಮಾಹಿತಿ ಇಲ್ಲಿದೆ.

  • ಋತುವಿನ ಅತ್ಯಮೂಲ್ಯ ಆಟಗಾರ: ಹರ್ಷಲ್ ಪಟೇಲ್ (32 ವಿಕೆಟ್​)
  • ಆರೆಂಜ್ ಕ್ಯಾಪ್ : ರುತುರಾಜ್ ಗಾಯಕ್ವಾಡ್, 16 ಪಂದ್ಯಗಳಲ್ಲಿ 635 ರನ್ (1 ಶತಕ, 4 ಅರ್ಧಶತಕಗಳು)
  • ಪರ್ಪಲ್ ಕ್ಯಾಪ್ : ಹರ್ಷಲ್ ಪಟೇಲ್-15 ಪಂದ್ಯಗಳಲ್ಲಿ 32 ವಿಕೆಟ್ (ಡ್ವೇನ್ ಬ್ರಾವೊ ಜೊತೆ ಐಪಿಎಲ್​ನಲ್ಲಿ ಜಂಟಿ ಗರಿಷ್ಠ ವಿಕೆಟ್​ ದಾಖಲೆ)
  • ಪವರ್ ಪ್ಲೇಯರ್ : ವೆಂಕಟೇಶ್ ಅಯ್ಯರ್ (KKR)
  • ಗರಿಷ್ಠ ಸಿಕ್ಸರ್‌ಗಳು : ಕೆ.ಎಲ್. ರಾಹುಲ್ (30 ಸಿಕ್ಸರ್‌)
  • ಗೇಮ್​ ಚೇಂಜರ್​​ : ಹರ್ಷಲ್ ಪಟೇಲ್
  • ಸೂಪರ್ ಸ್ಟ್ರೈಕರ್ : ಶಿಮ್ರಾನ್ ಹೆಟ್ಮಾಯರ್ (ಸ್ಟ್ರೈಕ್ ರೇಟ್ - 168)
  • ಕ್ಯಾಚ್ ಆಫ್​ ದಿ ಸೀಸನ್​: ರವಿ ಬಿಷ್ಣೋಯ್ (ಪಂಜಾಬ್​ ಕಿಂಗ್ಸ್​) - ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಸುನಿಲ್​ ನರೈನ್ ಬಾರಿಸಿದ್ದ ಎಸೆತವನ್ನು ಡೀಪ್ ಮಿಡ್ ವಿಕೆಟ್​​​ನಲ್ಲಿ ಅದ್ಭುತ ಡೈವ್​ ಮೂಲಕ ಹಿಡಿದಿದ್ದ ಬಿಷ್ಣೋಯ್)
  • ಫೇರ್‌ಪ್ಲೇ ಪ್ರಶಸ್ತಿ: ರಾಜಸ್ಥಾನ ರಾಯಲ್ಸ್
  • ಋತುವಿನ ಉದಯೋನ್ಮುಖ ಆಟಗಾರ: ರುತುರಾಜ್ ಗಾಯಕ್ವಾಡ್

2021ರ ಐಪಿಎಲ್​ನ ಕೆಲ ದಾಖಲೆಗಳು:

ಆರೆಂಜ್ ಕ್ಯಾಪ್ ಪಡೆದ ಅನ್​ಕ್ಯಾಪ್​ ಆಟಗಾರ:

ಬೆಂಗಳೂರು ತಂಡದ ಬೌಲರ್​​ ಹರ್ಷಲ್ ಪಟೇಲ್ ಪರ್ಪಲ್​ ಕ್ಯಾಪ್ ಪಡೆದ ಎರಡನೇ ಅನ್​ಕ್ಯಾಪ್​ ಆಟಗಾರ ಎಂಬ ದಾಖಲೆ ಬರೆದರು. ಇದಕ್ಕೂ ಮುನ್ನ 2008ರಲ್ಲಿ ಆಸ್ಟ್ರೇಲಿಯಾದ ಶಾನ್ ಮಾರ್ಷ್ ಗರಿಷ್ಠ ರನ್​ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು.

ಪ್ಲೇಯರ್ ಆಫ್ ದಿ ಮ್ಯಾಚ್ ಗೆದ್ದ ವಿದೇಶಿ ಆಟಗಾರ:

ಫೈನಲ್​ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಫಾಫ್ ಡು ಪ್ಲೆಸಿಸ್ 'ಪ್ಲೇಯರ್ ಆಫ್ ದಿ ಮ್ಯಾಚ್' ಗೌರವ ಪಡೆದರು. ಈ ಸಾಧನೆ ಮಾಡಿದ 5ನೇ ವಿದೇಶಿ ಆಟಗಾರನಾಗಿದ್ದಾರೆ. ಐಪಿಎಲ್ ಫೈನಲ್‌ನಲ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಗೆದ್ದ ವಿದೇಶಿ ಆಟಗಾರ ವಿವರ ಈ ಕೆಳಗಿನಂತಿದೆ.

  • 2013 - ಕೀರನ್ ಪೊಲಾರ್ಡ್
  • 2016 - ಬೆನ್ ಕಟಿಂಗ್
  • 2018 - ಶೇನ್ ವ್ಯಾಟ್ಸನ್
  • 2020 - ಟ್ರೆಂಟ್ ಬೌಲ್ಟ್
  • 2021 - ಫಾಫ್ ಡು ಪ್ಲೆಸಿಸ್

ಆರೆಂಜ್​ ಕ್ಯಾಪ್​ ಜೊತೆಗೆ ಚಾಂಪಿಯನ್​ ಪಟ್ಟ:

ಯುವ ಆಟಗಾರ ರುತುರಾಜ್​ ಗಾಯಕ್ವಾಡ್ ಅಧಿಕ ರನ್​ ಗಳಿಸಿ​ ಆರೆಂಜ್​ ಕ್ಯಾಪ್​ ಪಡೆಯುವುದರ ಜೊತೆಗೆ ಚಾಂಪಿಯನ್​ ತಂಡದ ಭಾಗವಾದ ಶ್ರೇಯಕ್ಕೆ ಪಾತ್ರರಾದರು. ಇದಕ್ಕೂ ಮುನ್ನ 2014ರಲ್ಲಿ ರಾಬಿನ್ ಉತ್ತಪ್ಪ ಆರೆಂಜ್​ ಕ್ಯಾಪ್ ಪಡೆದಿದ್ದು, ಆಗ ಅವರಿದ್ದ ಕೆಕೆಆರ್​ ಚಾಂಪಿಯನ್​ ಆಗಿತ್ತು.

ರಾಯುಡು ವಿಶೇಷ ದಾಖಲೆ:

ಸಿಎಸ್​ಕೆ ಆಟಗಾರ ಅಂಬಾಟಿ ರಾಯುಡುಗೆ ಐಪಿಎಲ್ ಫೈನಲ್‌ನಲ್ಲಿ ಇದು ಐದನೇ ಗೆಲುವಾಗಿದೆ (3 ಮುಂಬೈ, 2 ಚೆನ್ನೈ ತಂಡದಲ್ಲಿ). ವೆಸ್ಟ್​ ಇಂಡೀಸ್​ನ ಕೀರನ್ ಪೊಲಾರ್ಡ್ ಕೂಡ 5 ಬಾರಿ ಚಾಂಪಿಯನ್​ ಆದ ತಂಡದ ಭಾಗವಾಗಿದ್ದು, ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಮಾತ್ರ 6 ಫೈನಲ್​ ಗೆಲುವನ್ನು ಸಂಭ್ರಮಿಸಿದ ದಾಖಲೆ ಹೊಂದಿದ್ದಾರೆ.

ಇದನ್ನೂ ಓದಿ:ಈ ಬಾರಿ ಕೆಕೆಆರ್​​ ಐಪಿಎಲ್ ಗೆಲ್ಲುವ ಅರ್ಹ ತಂಡವಾಗಿತ್ತು: ಮಹೇಂದ್ರ ಸಿಂಗ್​ ಧೋನಿ

Last Updated : Oct 16, 2021, 3:19 AM IST

ABOUT THE AUTHOR

...view details