ಮುಂಬೈ:ಕೊರೊನಾ ನಡುವೆಯೂ 14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳುತ್ತಿದ್ದು, ತಮ್ಮ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ ಮತ್ತು ಆಲ್ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಶುಕ್ರವಾರ ತಮ್ಮ ಮೊದಲ ಅಭ್ಯಾಸ ಪಂದ್ಯದಲ್ಲಿ ಕಾಣಿಸಿಕೊಂಡರು.
ದೆಹಲಿ ಕ್ಯಾಪಿಟಲ್ಸ್ಗೆ ಬಿಡ್ ಆಗಿರುವ ಸ್ಮಿತ್ ಮತ್ತು ಮಾರ್ಕಸ್ ಕಡ್ಡಾಯ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿ ಮೈದಾನದಲ್ಲಿಂದು ಬೆವರು ಹರಿಸಿದರು. ಕಳೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ರನ್ನರ್ ಅಪ್ ಸ್ಥಾನ ಪಡೆದ ಈ ಜೋಡಿ ಈ ಸಾರಿಯೂ ಹೊಸ ಉತ್ಸಾಹದಲ್ಲೇ ಕಣಕ್ಕಿಳಿಯಲಿದೆ.
ಇಂದು (ಏಪ್ರಿಲ್ 9) ವಾಂಖೆಡೆ ಮೈದಾನದಲ್ಲಿ ಮೊದಲ ಅಭ್ಯಾಸ ಪಂದ್ಯವನ್ನು ಪೂರ್ಣಗೊಳಿಸಿದ ದೆಹಲಿ ಕ್ಯಾಪಿಟಲ್ಸ್ ತಂಡ, ಈ ಸಾರಿ ಪ್ರಶಸ್ತಿಯನ್ನು ಗೆಲ್ಲಲೇಬೇಕು ಎಂಬ ಅತ್ಯುತ್ಸಾಹದಲ್ಲಿದೆ ಎಂದು ಮುಖ್ಯ ತರಬೇತುದಾರ ರಿಕಿ ಪಾಂಟಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚತುರ ಆಟಗಾರ, ವಿಕೆಟ್ ಕೀಪರ್ ಕಂ ಬ್ಯಾಟ್ಸ್ಮನ್ ರಿಷಭ್ ಪಂತ್ ತಂಡವನ್ನು ಮುನ್ನಡೆಸಲಿದ್ದಾರೆ. ತಂಡದ ಆಟಗಾರರೆಲ್ಲರೂ ಫಿಟ್ ಆಗಿದ್ದಾರೆ. ಎಲ್ಲ ರೀತಿಯ ತಯಾರಿ ಮಾಡಿಕೊಂಡಿದೆ. ಈ ಹಿಂದೆ ರನ್ನರ್ ಅಪ್ ಸ್ಥಾನ ಪಡೆದ ದೆಹಲಿ ಕ್ಯಾಪಿಟಲ್ಸ್ ತಂಡ ಈ ಸಾರಿ ಗೆಲ್ಲುವ ನಿರೀಕ್ಷೆಯಿದೆ ಎಂದು ಹೇಳಿದರು.
ಇಲ್ಲಿಯ ಆಟಗಾರರನ್ನು ನೋಡಿ ನಾನು ಚಕಿತನಾಗಿದ್ದೇನೆ. ದಾಖಲೆ ಮೇಲೆ ದಾಖಲೆ ಬರೆಯುವ ಆಟಗಾರರು ತಂಡಲ್ಲಿದ್ದಾರೆ. ಈ ಸೊಬಗನ್ನು ನಾನು ಕಣ್ತುಂಬಿಕೊಳ್ಳಬೇಕು. ಹಾಗಾಗಿಯೇ ನಾನು ನನ್ನ ಆಟಗಾರರೊಂದಿಗೆ ಆಗಮಿಸಿದ್ದೇನೆ. ಕಳೆದ ವರ್ಷಕ್ಕಿಂತ ಈ ವರ್ಷ ಒಂದು ಹೆಜ್ಜೆ ಮುಂದೆ ಹೋಗಬೇಕು. ಅದಕ್ಕಾಗಿ ಒಂದು ಚಾಟ್ ಮಾಡಿಕೊಂಡಿದ್ದೇವೆ. ಈ ಸಾರಿ ಹೊಸ ಹುಡುಗರ ಪ್ರವೇಶವಾಗಿದೆ. ಇದು ತಂಡಕ್ಕೆ ಮತ್ತಷ್ಟು ಬಲ ತಂದಿದೆ. ನಮಗೆ ಇದೊಂದು ಪ್ಲಸ್ ಆಗಬಹುದೇನೋ. ಹಾಗಾಗಿಯೇ ಗೆಲುವಿನ ಉತ್ಸಾಹ ಹೆಚ್ಚಾಗಿದೆ. ಆ ದಿನಕ್ಕಾಗಿ ನಾವು ಕಾತುರರಾಗಿದ್ದೇವೆ ಎಂದು ತಂಡ ಆಟಗಾರರ ಬಗ್ಗೆ ಹೊಗಳಿಕೆ ಮಾತುಗಳನ್ನಾಡಿದ್ದಾರೆ.