ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ, ಅರ್ಧದಷ್ಟು ಪಂದ್ಯಗಳು ಮುಕ್ತಾಯವಾಗಿದೆ. ಮೈದಾನದಲ್ಲಿ ಆಟಗಾರರು ಹಲವಾರು ದಾಖಲೆಗಳನ್ನು ಈಗಾಗಲೇ ನಿರ್ಮಾಣ ಮಾಡಿದ್ದಾರೆ. ಇನ್ನುಳಿದ ಪಂದ್ಯಗಳಿಲ್ಲಿ ಫಾರ್ಮ್ನಲ್ಲಿರುವ ಬ್ಯಾಟರ್ಗಳಿಂದ ಭರ್ಜರಿ ರನ್ ಜೊತೆಗೆ ಹೊಸ ದಾಖಲೆಗಳು ಸೃಷ್ಠಿಯಾಗುವ ನಿರೀಕ್ಷೆಯೂ ಇದೆ. ಐಪಿಎಲ್ ಎಂದಾಕ್ಷಣ ನೆನಪಾಗುವುದು ಸ್ಪೋಟಕ ಬ್ಯಾಟಿಂಗ್. ಮೈದಾನದಲ್ಲಿ ಬ್ಯಾಟರ್ಗಳು ಚೆಂಡನ್ನು ಗ್ರೌಂಡ್ನ ಮೂಲೆ ಮೂಲೆಗೂ ಅಟ್ಟುತ್ತಿರುತ್ತಾರೆ. ಒಂದೇ ಓವರ್ನಲ್ಲಿ ಹಲವಾರು ಅವಿಸ್ಮರಣೀಯ ಕ್ಷಣಗಳು ಉಂಟಾಗುತ್ತದೆ.
ಐಪಿಎಲ್ನ ಈ ಸೀಸನ್ನಲ್ಲಿ ಬೌಂಡರಿಗಿಂತಲೂ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್ಗಳು ಯಾರು ಎಂಬುದರ ಅಂಕಿ - ಅಂಶ ಇಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟ್ಸ್‌ಮನ್ ಮತ್ತು ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರು ಇಲ್ಲಿಯವರೆಗೆ ಆಡಿದ ಎಂಟು ಪಂದ್ಯಗಳಲ್ಲಿ 23 ಸಿಕ್ಸರ್ ಮತ್ತು 14 ಬೌಂಡರಿಗಳನ್ನು ಬಾರಿಸಿದ್ದಾರೆ.
ಎರಡನೇ ಸ್ಥಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟರ್ ರಿಂಕು ಸಿಂಗ್ ಇದ್ದಾರೆ, ಅವರು ಇದುವರೆಗೆ ಆಡಿದ ಎಂಟು ಪಂದ್ಯಗಳಲ್ಲಿ 18 ಸಿಕ್ಸರ್ ಮತ್ತು 15 ಬೌಂಡರಿಗಳನ್ನು ಬಾರಿಸಿದ್ದಾರೆ. ಒಂದು ಪಾಂದ್ಯದಲ್ಲಿ ಅವರ ಕೊನೆಯ ಓವರ್ನ ಐದು ಸಿಕ್ಸ್ ಪಂದ್ಯದ ಗೆಲುವಿಗೆ ಕಾರಣವಾಯಿತು. ಚೆನ್ನೈ ಸೂಪರ್ ಕಿಂಗ್ಸ್ ಪರ ಬ್ಯಾಟಿಂಗ್ ಮಾಡುವ ಆಲ್‌ರೌಂಡರ್ ಶಿವಂ ದುಬೆ ಅವರು 8 ಪಂದ್ಯಗಳ 7 ಇನ್ನಿಂಗ್ಸ್‌ಗಳಲ್ಲಿ 19 ಸಿಕ್ಸರ್ ಮತ್ತು 10 ಬೌಂಡರಿಗಳನ್ನು ಬಾರಿಸಿದ್ದಾರೆ.