ಅಹಮದಾಬಾದ್ (ಗುಜರಾತ್): ಶುಭ್‌ಮನ್ ಗಿಲ್ ಅವರ ಎಥಿಕ್ಸ್ ಮೇಲೆ ಕೆಲಸ ಮಾಡುತ್ತಾರೆ. ಗಿಲ್ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ ಎಂದು ಅವರ ಸಹ ಆಟಗಾರ ಮತ್ತು ಗುಜರಾತ್ ಟೈಟಾನ್ಸ್ ಆಲ್‌ರೌಂಡರ್ ವಿಜಯ್ ಶಂಕರ್ ಹೇಳಿದ್ದಾರೆ. ಶಮಕರ್ ಪವರ್‌ಪ್ಲೇಯಲ್ಲಿ ಅಂತರವನ್ನು ಕಂಡುಕೊಳ್ಳುವ ಆರಂಭಿಕರ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ. ಭಾರತ ಮತ್ತು ಗುಜರಾತ್ ಟೈಟಾನ್ಸ್‌ನ ಆರಂಭಿಕ ಆಟಗಾರ ಐಪಿಎಲ್‌ನಲ್ಲಿ ನಾಲ್ಕು ಪಂದ್ಯಗಳಲ್ಲಿ ಮೂರು ಶತಕಗಳೊಂದಿಗೆ ಈ ಋತುವಿನಲ್ಲಿ 851 ರನ್‌ಗಳೊಂದಿಗೆ 'ಆರೆಂಜ್ ಕ್ಯಾಪ್' ಪಡೆದುಕೊಂಡಿದ್ದಾರೆ.
ಗಿಲ್ 60 ಎಸೆತಗಳಲ್ಲಿ 10 ಸಿಕ್ಸರ್ ಮತ್ತು 7 ಬೌಂಡರಿಗಳ ಸಹಿತ 129 ರನ್ ಗಳಿಸಿ ಈ ಐಪಿಎಲ್‌ನ ಅತ್ಯಧಿಕ ಸ್ಕೋರ್ ಗಳಿಸಿದವರಾದರು. ಗಿಲ್ ಅವರ ಅಬ್ಬರದ ಶತಕದ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಟೈಟಾನ್ಸ್ ಮಳೆಯಿಂದ ತಡವಾಗಿ ಆಂಭವಾದ ಪಂದ್ಯದಲ್ಲಿ 234 ರನ್ ಬೃಹತ್ ಗುರಿಯನ್ನು ಮುಂಬೈ ಇಂಡಿಯನ್ಸ್ಗೆ ನೀಡಿದರು.
ಈ ಗುರಿಯನ್ನು ಬೆನ್ನು ಹತ್ತಿದ್ದ ಮುಂಬೈ ಇಂಡಿಯನ್ಸ್ಗೆ ಒಂದೆಡೆ ಇಂಜುರಿ ಕಾಡಿದರೆ, ಮತ್ತೊಂದೆಡೆ ಮೋಹಿತ್ ಶರ್ಮಾ ಬೌಲಿಂಗ್ ದಾಳಿ ದೊಡ್ಡ ಹೊಡೆತವನ್ನೇ ಉಂಟುಮಾಡಿತು. ಸೂರ್ಯ ಕುಮಾರ್ ಯಾದವ್ ತಿಲಕ್ ವರ್ಮಾ ಮತ್ತು ಗ್ರೀನ್ ಬಿಟ್ಟರೆ ಮತ್ತಾವ ಬ್ಯಾಟರ್ ಎರಡಂಕಿಯ ರನ್ ಮಾಡಲಿಲ್ಲ. ಮೋಹಿತ್ ಶರ್ಮಾ 5 ವಿಕೆಟ್ ಪಡೆದ ಕಾರಣ ಎಂಐ 18.2 ಓವರ್ಗೆ 171 ಕ್ಕೆ ಸರ್ವ ಪತನ ಕಂಡಿತು. ಇದರಿಂದ ನಾಳೆ ನಡೆಯಲಿರುವ ಫೈನಲ್ಗೆ ಗುಜರಾತ್ ಪ್ರವೇಶ ಪಡೆದುಕೊಂಡಿತು.
ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಜಯ ಶಂಕರ್,"ಗಿಲ್ ಅದ್ಭುತವಾದ ಬ್ಯಾಟಿಂಗ್ ಕೌಶಲ್ಯವನ್ನು ಹೊಂದಿದ್ದಾರೆ. ಅಕ್ಕಾಗಿಯೇ ಅವರು ಇದೀಗ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರು. ಗಿಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ರೀತಿಯಲ್ಲೇ ಆಡಿ ಸಿಕ್ಸರ್ಗಳನ್ನು ಗಳಿಸಿಕೊಳ್ಳುತ್ತಿದ್ದಾರೆ. ಅವರು ತುಂಬಾ ಚೆನ್ನಾಗಿ ಅಭ್ಯಾಸ ನಡೆಸುತ್ತಾರೆ. ಇದು ಅವರ ಯಶಸ್ಸಿನ ಗುಟ್ಟು, ಅಲ್ಲದೇ ಅವರು ಸಿಕ್ಸ್ಗಾಗಿ ಕನೆಕ್ಟ್ ಮಾಡಿದಾಗ ಅದನ್ನು ನೋಡಲು ಸಂತೋಷವಾಗುತ್ತದೆ" ಎಂದಿದ್ದಾರೆ.
ಈ ಆವೃತ್ತಿಯಲ್ಲಿ ಗಿಲ್ 33 ಸಿಕ್ಸ್ಗಳಿಸಿದ್ದು, ಅತಿ ಹೆಚ್ಚು ಸಿಕ್ಸ್ ಗಳಿಸಿದವರ ಪಟ್ಟಿಯಲ್ಲಿ ಜಂಟಿ ಎರಡನೇ ಸ್ಥಾನವನ್ನು ಪಡೆದಿದ್ದಾರೆ. ಒಂದೇ ಆವೃತ್ತಿಯಲ್ಲಿ 3ನೇ ಶತಕ ಗಳಿಸಿದರು. ವಿರಾಟ್ ಮತ್ತು ಬಟ್ಲರ್ ಒಂದೇ ಆವೃತ್ತಿಯಲ್ಲಿ ನಾಲ್ಕು ಶತಕ ಬಾರಿಸಿ ಮೊದಲ ಸ್ಥಾನವನ್ನು ಜಂಟಿಯಾಗಿ ಹಂಚಿಕೊಂಡಿದ್ದಾರೆ.
ಶಂಕರ್ ಗಿಲ್ ಅವರ ಪವರ್ ಪ್ಲೇಯನ್ನು ಬಳಸಿಕೊಳ್ಳುವ ವಿಧಾನವನ್ನು ಶ್ಲಾಘಿಸಿದ್ದಾರೆ. ಗಿಲ್ ಆಟಗಾರರ ನಡುವಿನ ಅಂತರ ಗಮನಿಸಿ ಬೌಂಡರಿಗಳನ್ನು ಪಡೆಯುವುದು ಗೊತ್ತು ಹಾಗೇ ಚೆಂಡನ್ನು ತೇಲಿಸಿ ಸಿಕ್ಸ್ಗೆ ಅಟ್ಟುವ ಕಲೆಯನ್ನೂ ಕರಗತ ಮಾಡಿಕೊಂಡಿದ್ದಾರೆ. ಪವರ್ ಪ್ಲೇಯಲ್ಲಿ 30 ಯಾರ್ಡ್ ಒಳಗೆ ಆಟಗಾರು ಇರುವುದನ್ನು ಸೂಕ್ತವಾಗಿ ಬಳಸಿಕೊಳ್ಳುವ ಅವರು ಹೆಚ್ಚು ರನ್ ಕದಿಯುತ್ತಾರೆ ಎಂದಿದ್ದಾರೆ.
ಇದನ್ನೂ ಓದಿ:IPL 2023 Qualifier 2: ಮೂರನೇ ಶತಕ ಗಳಿಸಿದ ಶುಭಮನ್ ಗಿಲ್: ಮುಂಬೈಗೆ 234 ರನ್ಗಳ ಬೃಹತ್ ಗುರಿ