ಚೆನ್ನೈ: ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ vs ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ, ಡೆಲ್ಲಿ ತಂಡ ಸೂಪರ್ ಓವರ್ನಲ್ಲಿ ಜಯ ಗಳಿಸುವ ಮೂಲಕ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.
ಪಂದ್ಯದ ನಂತರ ಮಾತನಾಡಿದ ಡೆಲ್ಲಿ ತಂಡದ ಆಟಗಾರ ಶಿಖರ್ ಧವನ್, ನಾವು ಈ ಪಂದ್ಯವನ್ನು ಸೂಪರ್ ಓವರ್ಗೆ ಹೋಗಲು ಬಿಡಬಾರದಿತ್ತು ಎಂದು ಹೇಳಿದ್ದಾರೆ.
"ಇಂದಿನ ಪಂದ್ಯ ಬಹಳ ರೋಮಾಂಚನಕಾರಿಯಾಗಿತ್ತು, ಆದರೆ ನಾವು ಪಂದ್ಯವನ್ನು ಸೂಪರ್ ಓವರ್ಗೆ ಹೋಗಲು ಬಿಡಬಾರದಿತ್ತು. ಸುಲಭವಾಗಿ ಪಂದ್ಯ ಗೆಲ್ಲಬಹುದಿತ್ತು. ತಂಡದಲ್ಲಿ ಆದ ಕೆಲವು ತಪ್ಪುಗಳು ಈ ಪಂದ್ಯ ಸೂಪರ್ ಓವರ್ಗೆ ಹೋಗುವಂತೆ ಮಾಡಿದವು. ಅವೀಶ್ ಖಾನ್ ಓವರ್ನಲ್ಲಿ ಎರಡು ಬೌಂಡರಿ ಬಂದಿದ್ದು ಸೂಪರ್ ಓವರ್ಗೆ ಕಾರಣವಾಯಿತು. ಆದರೆ, ಇದು ಆಟದ ಒಂದು ಭಾಗವಾಗಿದೆ " ಎಂದು ಧವನ್ ಹೇಳಿದರು.
"ಪವರ್ ಪ್ಲೇಯಲ್ಲಿ, ನಾವು ಎದುರಾಳಿ ತಂಡದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದೆವು. ಕೇನ್ ವಿಲಿಯಮ್ಸನ್ ಚಾಂಪಿಯನ್ ಆಟಗಾರ. ಅವರು ತಮ್ಮ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ಪಂದ್ಯದ ಗತಿಯನ್ನೇ ಬದಲಿಸಿದರು. ಕೊನೆಯಲ್ಲಿ ನಾವು ಪಂದ್ಯ ಗೆಲ್ಲುತ್ತೇವೆ ಅಂದುಕೊಂಡಿದ್ದೆವು. ಆದರೆ ಅದನ್ನು ಸೂಪರ್ ಓವರ್ಗೆ ತಂದು ನಿಲ್ಲಿಸಿದರು. ಆದರೂ ಕೊನೆಗೂ ನಾವೇ ಗೆದ್ದೆವು"ಎಂದು ಧವನ್ ಹೇಳಿದರು.
ಇದನ್ನೂ ಓದಿ : ವಿಲಿಯಮ್ಸನ್, ಸುಚಿತ್ ಹೋರಾಟ ವ್ಯರ್ಥ: ಡೆಲ್ಲಿಗೆ 'ಸೂಪರ್' ಜಯ