ಮುಂಬೈ :ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಂಜಾಬ್ ಕಿಂಗ್ಸ್ ಪ್ಲೇ-ಆಫ್ ರೇಸ್ನಿಂದ ಹೊರಬಿದ್ದ ಕಾರಣ ಎಲ್ಲ ಪ್ಲೇಯರ್ಸ್ ಈಗಾಗಲೇ ಮನೆ ತಲುಪಿದ್ದಾರೆ. ತಂಡದ ಆರಂಭಿಕ ಎಡಗೈ ಬ್ಯಾಟರ್ ಶಿಖರ್ ಧವನ್ ಕೂಡ ತಮ್ಮ ನಿವಾಸಕ್ಕೆ ತೆರಳಿದ್ದು, ಈ ವೇಳೆ ತಂದೆಯಿಂದ ಹಿಗ್ಗಾಮುಗ್ಗಾ ಒದೆ ತಿಂದಿದ್ದಾರೆ. ಇದರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಮನೆಗೆ ತೆರಳಿರುವ ಶಿಖರ್ ಧವನ್ಗೆ ಕಪಾಳಮೋಕ್ಷ ಮಾಡಿರುವ ತಂದೆ, ತದನಂತರ ನೆಲದ ಮೇಲೆ ಕೆಡವಿ ಕಾಲಿನಿಂದ ಒದ್ದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇದನ್ನ ಖುದ್ದಾಗಿ ಶಿಖರ್ ಧವನ್ ವಿಡಿಯೋ ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹೇಳಿಕೊಂಡಿದ್ದಾರೆ. ಶಿಖರ್ ಧವನ್ ಮೇಲೆ ಅವರ ತಂದೆ ಹಲ್ಲೆ ಮಾಡುತ್ತಿರುವ ಸಂದರ್ಭದಲ್ಲಿ ಓರ್ವ ಪೊಲೀಸ್ ಸೇರಿದಂತೆ ಅನೇಕರು ಉಪಸ್ಥಿತರಿದ್ದು, ಅವರನ್ನ ತಡೆಯುವ ಪ್ರಯತ್ನ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಎಲ್ಲವೂ ತಮಾಷೆಗಾಗಿ : ಇದೆಲ್ಲವೂ ನಡೆದಿರುವುದು ನಿಜವಾಗಿಲ್ಲ ಅಲ್ಲ. ಶಿಖರ್ ಧವನ್ ತಂದೆ ಇನ್ಸ್ಟಾ ರೀಲ್ ವಿಡಿಯೋ ಮಾಡುವ ಸಲುವಾಗಿ ಈ ರೀತಿಯಾಗಿ ನಡೆದುಕೊಂಡಿದ್ದಾರೆ. ಇದರ ವಿಡಿಯೋ ಹಂಚಿಕೊಂಡಿರುವ ಶಿಖರ್ ಧವನ್, ಐಪಿಎಲ್ನಲ್ಲಿ ನಾಕೌಟ್ ಹಂತಕ್ಕೆ ಅರ್ಹತೆ ಪಡೆದುಕೊಳ್ಳದ ಕಾರಣ ತಂದೆ ನನ್ನನ್ನ ಥಳಿಸಿದ್ದಾರೆಂದು ಗಬ್ಬರ್ ಸಿಂಗ್ ಹೇಳಿಕೊಂಡಿದ್ದಾರೆ.