ಕರ್ನಾಟಕ

karnataka

ETV Bharat / sports

ತಂದೆ ಕ್ರಿಕೆಟ್‌ ಆಡುವುದನ್ನು ಟಿವಿಯಲ್ಲಿ ನೋಡಿ ಖುಷಿಪಟ್ಟ ಪುಟ್ಟ ಮಗಳು- ವಿಡಿಯೋ - ರಾಜಸ್ಥಾನ ರಾಯಲ್ಸ್ ಗೆಲುವು

ಚೆನ್ನೈ ಸೂಪರ್‌ಕಿಂಗ್ಸ್‌ ವಿರುದ್ಧ ನಿನ್ನೆ ನಡೆದ ಐಪಿಎಲ್‌ ಪಂದ್ಯದಲ್ಲಿ ರಾಜಸ್ತಾನ್‌ ರಾಯಲ್ಸ್‌ ತಂಡ ಅಮೋಘ ಗೆಲುವು ದಾಖಲಿಸಿತ್ತು. ಬೌಲರ್‌ ಸಂದೀಪ್ ಶರ್ಮಾ ಗೆಲುವಿನ ರುವಾರಿಯಾದರು.

Sandeep Sharma daughter video clip
ಸಂದೀಪ್ ಶರ್ಮಾ ಅಮೋಘ ಬೌಲಿಂಗ್​ಗೆ ಮಗಳು ಫುಲ್​ ಫಿದಾ

By

Published : Apr 13, 2023, 4:03 PM IST

ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಿನ್ನೆ(ಬುಧವಾರ) ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಣ ಪಂದ್ಯ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಪಂದ್ಯದ ಕೊನೆಯ ಎಸೆತದವರೆಗೂ ಕೋಟ್ಯಂತರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಅಂತಿಮವಾಗಿ ರಾಜಸ್ತಾನ ತಂಡ ಚೆನ್ನೈ ತಂಡವನ್ನು ಬಗ್ಗುಬಡಿಯಿತು. ಇದಕ್ಕೆ ಕಾರಣರಾದವರು ರಾಜಸ್ತಾನ್‌ ತಂಡದ ಬೌಲರ್ ಸಂದೀಪ್ ಶರ್ಮಾ.

ರಣರೋಚಕ ಪಂದ್ಯವನ್ನು ಸಂದೀಪ್‌ ಶರ್ಮಾ ಅವರ ಪತ್ನಿ ಮಗಳೊಂದಿಗೆ ವೀಕ್ಷಿಸಿ ಖುಷಿಪಟ್ಟಿದ್ದು, ಫೋಟೋ ಹಾಗು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಂದೀಪ್ ಶರ್ಮಾ ಅವರ ಮಗಳು ತಾಯಿಯ ಮಡಿಲಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿರುವುದನ್ನು ವಿಡಿಯೋ ಕ್ಲಿಪ್‌ನಲ್ಲಿ ನೋಡಬಹುದು.

ಇದನ್ನೂ ಓದಿ:ಚೆನ್ನೈ ಗೆಲುವು ತಡೆದ ಸಂದೀಪ್​ ಶರ್ಮಾ ಯಾರ್ಕರ್​: ರಾಜಸ್ಥಾನ ರಾಯಲ್ಸ್​ಗೆ 3 ರನ್​ ಜಯ

ಚೆನ್ನೈ ವಿರುದ್ಧ ಗೆಲುವಿನ ನಗಾರಿ ಬಾರಿಸಿದ ರಾಯಲ್ಸ್​: ಸಿಎಸ್​ಕೆ ಫ್ಯಾನ್ಸ್​ಗೆ ನಿರಾಸೆ

ಕೊನೆಯ ಓವರ್​ನ ಕೊನೆಯ ಎಸೆತದವರೆಗೂ ನಡೆದ ಪಂದ್ಯ ಕ್ರಿಕೆಟ್‌ ಅಭಿಮಾನಿಗಳು ತುದಿಗಾಲಲ್ಲಿ ನಿಂತು ನೋಡುವಂತೆ ಮಾಡಿತ್ತು. ಧೋನಿ ಬ್ಯಾಟ್‌ ಮಾಡುತ್ತಿದ್ದ ಸಂದರ್ಭದಲ್ಲಿ ಜಿಯೋಸಿನಿಮಾ ಆ್ಯಪ್‌ ಮೂಲಕ 2 ಕೋಟಿಗೂ ಅಧಿಕ ಜನರು ಪಂದ್ಯ ವೀಕ್ಷಿಸುತ್ತಿದ್ದರೆ. ಮ್ಯಾಚ್‌ ಫಿನಿಶರ್ ಖ್ಯಾತಿಯ ಧೋನಿ ನಿನ್ನೆಯ ಪಂದ್ಯದಲ್ಲಿ ಗೆಲುವಿನ ಸಿಕ್ಸರ್‌ ಬಾರಿಸುವಲ್ಲಿ ವಿಫಲರಾದರು. ಇದು ಚೆನ್ನೈ ಹಾಗು ಧೋನಿ ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿತು.

ಇದನ್ನೂ ಓದಿ:ಜಡೇಜಾ, ಧೋನಿಗೆ ಖೆಡ್ಡಾ ತೋಡಿದ್ದು ಸಂದೀಪ್​ ಶರ್ಮಾ ಅಲ್ಲ.. ಕೋಚ್​ ನೀಡಿದ ಸಲಹೆಗೆ ಒಲಿದ ಜಯ!

ABOUT THE AUTHOR

...view details