ನವದೆಹಲಿ: ಸಚಿನ್ ತೆಂಡೂಲ್ಕರ್ ತಮ್ಮ 50ನೇ ಹುಟ್ಟುಹಬ್ಬಕ್ಕೂ ಮುನ್ನ ವಿಶೇಷ ಹಾರೈಕೆ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳು ಸಮಾನ ಅವಕಾಶಗಳನ್ನು ಪಡೆಯಬೇಕು ಎಂದು ಸಚಿನ್ ಬಯಸುತ್ತಾರೆ. ಬ್ಯಾಟ್ ಮತ್ತು ಬಾಲ್ ನಡುವಿನ ಸಮತೋಲನ ಮಾಡಲು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನ ನಿಯಮಗಳನ್ನು ಬದಲಾಯಿಸುವ ಬಗ್ಗೆಯೂ ಸಚಿನ್ ಮಾತನಾಡಿದ್ದಾರೆ. ನಿಯಮ ಬದಲಾವಣೆ ಆಟವನ್ನು ಇನ್ನಷ್ಟು ರೋಮಾಂಚನಗೊಳಿಸಬಹುದು. ಕ್ರಿಕೆಟ್ ಬ್ಯಾಟರ್ಗಳಿಗೆ ಹೆಚ್ಚು ಅನುಕೂಲಕರವಾಗಿದ್ದು, ಬೌಲರ್‌ಗಳಿಗೆ ಹೆಚ್ಚಿನ ಅವಕಾಶಗಳು ಸಿಗುತ್ತಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ತನ್ನ 50 ನೇ ಹುಟ್ಟುಹಬ್ಬದ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಲಿಟಲ್ ಮಾಸ್ಟರ್, ಎರಡು ಹೊಸ ಚೆಂಡುಗಳ ಬಳಕೆಯು ಕ್ರಿಕೆಟ್ ಆಟದಲ್ಲಿ ರಿವರ್ಸ್ ಸ್ವಿಂಗ್ ಇಲ್ಲದಂತೆ ಮಾಡಿದೆ. ಚೆಂಡುಗಳು ಮೃದುವಾಗುವುದನ್ನು ಅಥವಾ ಬಣ್ಣ ಕಳೆದುಕೊಳ್ಳುವುದನ್ನು ತಡೆಯಲಾಗುತ್ತಿದೆ. ಪವರ್ ಪ್ಲೇಯಲ್ಲಿ ಬ್ಯಾಟರ್ ಪರ ಫೀಲ್ಡಿಂಗ್ ಸೆಟ್ ಮಾಡಲಾಗುತ್ತದೆ. ಅದೇ ರೀತಿ ಬೌಲರ್ ಸಹಕಾರಿ ಕ್ಷೇತ್ರ ರಕ್ಷಣೆ ನಿಯಮ ಬರಬೇಕು. ಐವರು ಫೀಲ್ಡರ್‌ಗಳು 30 ಯಾರ್ಡ್ ವೃತ್ತದಲ್ಲಿ ಉಳಿದುಕೊಂಡರೂ, ಸ್ಪಿನ್ ಬೌಲರ್‌ಗಳು ರಿವರ್ಸ್ ಸ್ವಿಂಗ್ ಬೌಲಿಂಗ್ ಮಾಡಲು ಒತ್ತಾಯಿಸುತ್ತಾರೆ ಎಂದಿದ್ದಾರೆ.
ಕ್ರೀಡಾ ವೆಬ್‌ಸೈಟ್‌ನೊಂದಿಗಿನ ಸಂಭಾಷಣೆ ಸಂದರ್ಭದಲ್ಲಿ ಸಚಿನ್, ಏಕದಿನ ಪಂದ್ಯಗಳಲ್ಲಿ ಟಾಸ್‌ನ ಅನುಕೂಲ ಮತ್ತು ಇಬ್ಬನಿ ಅಂಶವು ಆಟದ ಮೇಲೆ ಪರಿಣಾಮ ಬೀರುತ್ತದೆ. ಟಾಸ್ನಿಂದ ಆಟದ ಸೋಲು ಗೆಲುವು ನಿರ್ಣಯ ಮಾಡುವಂತಾಗುವುದು ಸರಿಯಲ್ಲ. ಈ ಬಗ್ಗೆಯೂ ಕೆಲ ನಿಯಮಗಳು ಬದಲಾವಣೆ ಆಗುವ ಅಗತ್ಯವಿದೆ ಎಂದು ಅಭಿಪ್ರಾಯ ತಿಳಿಸಿದ್ದಾರೆ.