ಕರ್ನಾಟಕ

karnataka

ETV Bharat / sports

ಋತುರಾಜ್ ಬಳಿ ಧೋನಿ ನಿರೀಕ್ಷೆಯ ಎಲ್ಲ ಅರ್ಹತೆಯಿದೆ, CSK ನಾಯಕತ್ವಕ್ಕೆ ಆತನೇ ಸೂಕ್ತ: ಸೆಹ್ವಾಗ್​ - ಸಿಎಸ್​ಕೆ ನಾಯಕತ್ವ ಗಾಯಕ್ವಾಡ್​

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಋತುರಾಜ್ ಗಾಯಕ್ವಾಡ್​ ದೀರ್ಘಾವಧಿ ನಾಯಕನಾಗಿ ಸೇವೆ ಸಲ್ಲಿಸುವ ಎಲ್ಲ ಅರ್ಹತೆ ಹೊಂದಿದ್ದಾರೆಂದು ಟೀಂ ಇಂಡಿಯಾ ಮಾಜಿ ಬ್ಯಾಟರ್ ವಿರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

Ruturaj Gaikwad
Ruturaj Gaikwad

By

Published : May 14, 2022, 6:21 PM IST

ಹೈದರಾಬಾದ್​​: ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್ ಲೀಗ್​ನ ಪ್ಲೇ- ಆಫ್​ ರೇಸ್​​ನಿಂದ ಚೆನ್ನೈ ಸೂಪರ್ ಕಿಂಗ್ಸ್​ ಈಗಾಗಲೇ ಹೊರಬಿದ್ದಿದೆ. ಟೂರ್ನಿ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ನಾಯಕತ್ವ ಜವಾಬ್ದಾರಿ ವಹಿಸಿಕೊಂಡಿದ್ದ ರವೀಂದ್ರ ಜಡೇಜಾ, ಮಧ್ಯದಲ್ಲೇ ಧೋನಿ ಹೆಗಲಿಗೆ ತಮ್ಮ ಜವಾಬ್ದಾರಿ ಮರಳಿಸಿದ್ದರು. ಇದೀಗ ಮುಂದಿನ ವರ್ಷದ ಟೂರ್ನಿಗೋಸ್ಕರ ವಿರೇಂದ್ರ ಸೆಹ್ವಾಗ್ ಮಹತ್ವದ ಸಲಹೆ ನೀಡಿದ್ದಾರೆ.

ಟೀಂ ಇಂಡಿಯಾ ಮಾಜಿ ಬ್ಯಾಟರ್ ಸೆಹ್ವಾಗ್

ತಂಡದ ಆರಂಭಿಕ ಬ್ಯಾಟರ್​ ಋತುರಾಜ್ ಗಾಯಕ್ವಾಡ್ ಬಳಿ ಧೋನಿ ನಿರೀಕ್ಷೆಯ ಎಲ್ಲ ಅರ್ಹತೆಗಳಿದ್ದು, ಆತ ತಂಡಕ್ಕೆ ದೀರ್ಘಾವಧಿಯ ನಾಯಕನಾಗಬಹುದು ಎಂದು ವಿರೇಂದ್ರ ಸೆಹ್ವಾಗ್​ ಅಭಿಪ್ರಾಯಪಟ್ಟಿದ್ದಾರೆ. ಗಾಯಕ್ವಾಡ್​ ಚೆನ್ನೈ ತಂಡದ ದೀರ್ಘಾವಧಿ ನಾಯಕನಾಗಿ ಆಯ್ಕೆ ಮಾಡಬಹುದಾಗಿದೆ ಎಂದಿದ್ದಾರೆ. 2021ರಲ್ಲಿ ಆರೆಂಜ್​ ಕ್ಯಾಪ್​​ ಗೆದ್ದಿದ್ದ ಋತುರಾಜ್​ ಈ ಸಲದ ಟೂರ್ನಿಯ ಕೆಲವೊಂದು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ.

ಮುಂದಿನ 3-4 ಸೀಸನ್​​ಗಳನ್ನ ಋತುರಾಜ್ ಗಾಯಕ್ವಾಡ್​​ ಆಡಿದರೆ, ತಂಡಕ್ಕೆ ದೀರ್ಘಾವಧಿ ನಾಯಕನಾಗಬಲ್ಲರು. ಅವರಲ್ಲಿ ಒತ್ತಡ ನಿಭಾಯಿಸುವ ಗುಣವಿದ್ದು, ಕೂಲ್​​ ಆಗಿರುತ್ತಾರೆ ಎಂದಿದ್ದಾರೆ. ಈಗಾಗಲೇ ಮಹಾರಾಷ್ಟ್ರ ತಂಡ ಮುನ್ನಡೆಸಿರುವ ಅನುಭವ ಸಹ ಅವರಲ್ಲಿ ಇದೆ ಎಂದು ಸೆಹ್ವಾಗ್ ಹೇಳಿದ್ದಾರೆ. ಅತ್ಯಂತ ಯಶಸ್ವಿ ಐಪಿಎಲ್​​ ಫ್ರಾಂಚೈಸಿಗಳಲ್ಲಿ ಒಂದಾಗಿರುವ ಸಿಎಸ್​​ಕೆ ಈ ಸಲದ ಟೂರ್ನಿಯಲ್ಲಿ ಪ್ಲೇ-ಆಫ್​ ರೇಸ್​​​ನಿಂದ ಹೊರಬಿದ್ದಿದೆ.

ABOUT THE AUTHOR

...view details