ಕರ್ನಾಟಕ

karnataka

ETV Bharat / sports

ರಜತ್​ ಶತಕದಬ್ಬರ, ಬೌಲರ್​ಗಳ ಮಿಂಚು... ಲಖನೌ ವಿರುದ್ಧ ಗೆದ್ದು ಕ್ವಾಲಿಫೈಯರ್​ಗೆ ಆರ್​ಸಿಬಿ ಲಗ್ಗೆ

ಎಲಿಮಿನೇಟರ್​ ಪಂದ್ಯದಲ್ಲಿ ರಜತ್​ ಪಾಟಿದಾರ್​ ಶತಕದಬ್ಬರ ಹಾಗೂ ಆರ್​ಸಿಬಿ ಬೌಲರ್​ಗಳ ಸಂಘಟಿತ ಬೌಲಿಂಗ್ ನೆರವಿನಿಂದ ಲಖನೌ ವಿರುದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ರೋಚಕ ಗೆಲುವಿನ ನಗೆ ಬೀರಿದ್ದು, ಕ್ವಾಲಿಫೈಯರ್​​ಗೆ ಲಗ್ಗೆ ಹಾಕಿದೆ.

Royal Challengers Bangalore win against Lucknow Super Giants in Eliminator
Royal Challengers Bangalore win against Lucknow Super Giants in Eliminator

By

Published : May 26, 2022, 12:26 AM IST

Updated : May 26, 2022, 6:34 AM IST

ಕೋಲ್ಕತ್ತಾ: ರಜತ್ ಪಾಟಿದಾರ್​(112*) ಸ್ಫೋಟಕ ಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಭರ್ಜರಿ 14ರನ್​ಗಳ ರೋಚಕ ಗೆಲುವು ದಾಖಲು ಮಾಡಿದೆ. ಈ ಮೂಲಕ ಕ್ವಾಲಿಫೈಯರ್​​ಗೆ ಪ್ರವೇಶ ಪಡೆದುಕೊಂಡಿದ್ದು, ಮುಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ವಿರುದ್ಧ ಸೆಣಸಾಟ ನಡೆಸಲಿದೆ. ಇಲ್ಲಿ ಜಯ ಸಾಧಿಸುವ ತಂಡ ಫೈನಲ್​​ನಲ್ಲಿ ಗುಜರಾತ್​ ವಿರುದ್ಧ ಕಣಕ್ಕಿಳಿಯಲಿದೆ.

ಕೋಲ್ಕತ್ತಾದ ಈಡನ್​ ಗಾರ್ಡನ್​ ಮೈದಾನದಲ್ಲಿ ಮಳೆಯಿಂದಾಗಿ 40 ನಿಮಿಷಗಳ ತಡವಾಗಿ ಆರಂಭವಾದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ ಆರಂಭ ಉತ್ತಮವಾಗಿರಲಿಲ್ಲ. ಮೊದಲ ಓವರ್​ನಲ್ಲೇ ಡುಪ್ಲೆಸಿಸ್​(0) ವಿಕೆಟ್ ಕಳೆದುಕೊಂಡಿತು. ಬಳಿಕ ತಂದ ವಿರಾಟ್​​ ಹಾಗೂ ರಜತ್ ತಂಡವನ್ನ ಮುನ್ನಡೆಸಿದರು. ಆರಂಭದಲ್ಲಿ ಎಚ್ಚರಿಕೆ ಆಟವಾಡಿದ ಪಾಟಿದಾರ್ ತದನಂತರ ಅಬ್ಬರಿಸಿ ಬೊಬ್ಬರಿದರು. ಉತ್ತಮವಾಗಿ ಆಡ್ತಿದ್ದ ವಿರಾಟ್​ 25ರನ್​ಗಳಿಸಿದ ವೇಳೆ ಔಟಾದರು. ಇದರ ಬೆನ್ನಲ್ಲೇ ಮ್ಯಾಕ್ಸವೆಲ್​ 9ರನ್​​ಗಳಿಸಿ ಔಟ್ ಆದರು. ಮಹಿಪಾಲ್​ ಲೊಮ್ರೊರ್​(9) ನಿರ್ಗಮಿಸಿದರು.

ಸ್ಫೋಟಕ ಆಟ ಪ್ರದರ್ಶಿಸಿದ ರಜತ್ ಪಟಿದಾರ್​

ನಿರ್ಣಾಯಕ ಹಂತದಲ್ಲಿ ಒಂದಾದ ಪಾಟಿದಾರ್ ಹಾಗೂ ಕಾರ್ತಿಕ್​ ಉತ್ತಮ ಆಟವಾಡಿದರು. ಪಾಟಿದಾರ್​ ಅಜೇಯರಾಗಿ 112ರನ್​ಗಳಿಕೆ ಮಾಡಿದರೆ, ಕಾರ್ತಿಕ್​ 37ರನ್​ಗಳಿಸಿದರು. ಇದರ ನೆರವಿನಿಂದ ತಂಡ 4 ವಿಕೆಟ್​ನಷ್ಟಕ್ಕೆ 207ರನ್​ಗಳಿಕೆ ಮಾಡಿತು. ಲಖನೌ ತಂಡದ ಪರ ಮೋಸಿನ್ ಖಾನ್, ಕೃನಾಲ್​, ಆವೇಶ್ ಖಾನ್ ಹಾಗೂ ಬಿಷ್ಣೋಯ್ ತಲಾ 1 ವಿಕೆಟ್​ ಪಡೆದುಕೊಂಡರು.

ಎಲಿಮಿನೇಟರ್ ಪಂದ್ಯದಲ್ಲಿ ಲಖನೌ ಆರ್​ಸಿಬಿ ಮುಖಾಮುಖಿ

208ರನ್​ಗಳ ಗುರಿ ಬೆನ್ನತ್ತಿದ ಲಖನೌ ಕೂಡ ಆರಂಭದಲ್ಲೇ ಆಘಾತ ಅನುಭವಿಸಿತು. ಕ್ವಿಂಟನ್ ಡಿಕಾಕ್​​(6) ಔಟಾದರು. ಇದರ ಬೆನ್ನಲ್ಲೇ ಬಂದ ವೋಹ್ರಾ ಕೂಡ 19ರನ್​ಗಳಿಸಿ ಹ್ಯಾಜಲ್​ವುಡ್ ಓವರ್​ನಲ್ಲಿ ವಿಕೆಟ್ ಒಪ್ಪಿಸಿದರು. ಈ ವೇಳೆ ಒಂದಾದ ರಾಹುಲ್​(79) ಹಾಗೂ ದೀಪಕ್​ ಹೂಡಾ(45) ತಂಡಕ್ಕೆ ಉತ್ತಮ ಜೊತೆಯಾಟವಾಡಿ, ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದರು. ಆದರೆ, ಇವರ ವಿಕೆಟ್​ ಪಡೆದುಕೊಳ್ಳುವಲ್ಲಿ ಆರ್​ಸಿಬಿ ಬೌಲರ್​ಗಳು ಯಶಸ್ವಿಯಾದರು. ಕೊನೆಯದಾಗಿ ತಂಡ 20 ಓವರ್​ಗಳಲ್ಲಿ 6ವಿಕೆಟ್​ನಷ್ಟಕ್ಕೆ 193ರನ್​ಗಳಿಕೆ ಮಾಡಿ, 14ರನ್​ಗಳ ಸೋಲು ಕಂಡಿತು. ಇದರ ಜೊತೆಗೆ ಟೂರ್ನಿಯಿಂದ ಹೊರಬಿದ್ದಿದೆ.

ಆರ್​ಸಿಬಿ ಪರ ಮಿಂಚಿದ ಹ್ಯಾಜಲ್​ವುಡ್​ 3 ವಿಕೆಟ್​ ಪಡೆದರೆ, ಸಿರಾಜ್, ಹಸರಂಗ ಹಾಗೂ ಹರ್ಷಲ್ ಪಟೇಲ್ 1 ವಿಕೆಟ್​ ಪಡೆದು ಮಿಂಚಿದರು.

Last Updated : May 26, 2022, 6:34 AM IST

ABOUT THE AUTHOR

...view details