ಕರ್ನಾಟಕ

karnataka

ETV Bharat / sports

ಚಿನ್ನಸ್ವಾಮಿಯಲ್ಲಿ ಇಂದು ಆರ್​ಸಿಬಿ Vs ಆರ್​ಆರ್ ಪಂದ್ಯಕ್ಕೆ ಮಳೆ ಭೀತಿ: ಹಸಿರು ಜರ್ಸಿಯಲ್ಲಿ ಮಿಂಚಲಿದೆ ಡು ಪ್ಲೆಸಿಸ್ ಟೀಂ - ETV Bharath Kannada news

ಐಪಿಎಲ್​ನ 32ನೇ ಪಂದ್ಯಕ್ಕೆ ಚಿನ್ನಸ್ವಾಮಿ ಮೈದಾನ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್​ ಫೈಟ್​​ಗೆ ಸಿದ್ಧವಾಗಿದೆ. ಆರ್​ಸಿಬಿ ಗೋ ಗ್ರೀನ್ ಅಭಿಮಾನದ ಅಂಗವಾಗಿ ಹಸಿರು ಜರ್ಸಿಯಲ್ಲಿ ಕಣಕ್ಕಿಳಿಯಲಿದೆ. ​

Etv Bharat
Etv Bharat

By

Published : Apr 23, 2023, 6:53 AM IST

ಬೆಂಗಳೂರು:ರಾಜಸ್ಥಾನ ರಾಯಲ್ಸ್​ ವಿರುದ್ಧದ ಇಂದಿನ ಪಂದ್ಯವನ್ನು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಗೋ ಗ್ರೀನ್​ ಅಭಿಯಾನದ ಅಡಿ ಆಡುತ್ತಿದ್ದಾರೆ. ಆದರೆ ಮುಂಗಾರು ಪೂರ್ವ ಮಳೆ ಪಂದ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ಹೇಳುತ್ತಿದೆ. ಏನೇ ಆದರೂ ಟೇಬಲ್​ ಟಾಪರ್ಸ್​ ಜೊತೆಗಿನ ಕದನಕ್ಕ ರೆಡ್​ ಬಾಯ್ಸ್​, ಗ್ರೀನ್​ ಡ್ರೆಸ್​ನಲ್ಲಿ ಸಿದ್ಧವಾಗುತ್ತಿದ್ದಾರೆ.

ಇಂಡಿಯನ್​ ಪ್ರೀಮಿಯರ್​ ಲೀಗ್​ನ 32 ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮುಖಾಮುಖಿಯಾಗುತ್ತಿವೆ. ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಇಬ್ಬರ ನಡುವಣ ಫೈಟ್​ಗೆ ಸಜ್ಜಾಗಿದೆ. ಒಂದು ವೇಳೆ ಮಳೆ ಬಂದರೂ ಬೇಗ ಇಂಗುವ ಸಾಮರ್ಥ್ಯ ಮೈದಾನಕ್ಕಿರುವುದರಿಂದ ಓವರ್​ಗಳನ್ನು ಕಡಿತಗೊಳಿಸಿಯಾದರೂ ಪಂದ್ಯ ಆಡಿಸುವ ನಿರೀಕ್ಷೆ ಇದೆ.

ಆರ್​ಸಿಬಿಯಲ್ಲಿ ಕೆಜಿಎಫ್​ (ವಿರಾಟ್​ ಕೊಹ್ಲಿ, ಗೆನ್​ ಮ್ಯಾಕ್ಸ್​ವೆಲ್​, ಫಾಫ್​ ಡು ಪ್ಲೆಸಿಸ್​) ಅವರ ಬ್ಯಾಟಿಂಗ್​ ಬಲ ಈವರೆಗಿನ ಪಂದ್ಯಗಳಲ್ಲಿ ಗೆಲುವಿಗೆ ಕಾರಣವಾಗಿದ್ದು, ಮಧ್ಯಮ ಕ್ರಮಾಂಕ ಮತ್ತು ಕೆಳ ಕ್ರಮಾಂಕದ ಬ್ಯಾಟರ್​ಗಳು ರನ್​ ಗಳಿಸಲು ಪರದಾಡುತ್ತಿದ್ದಾರೆ. ಎಲ್ಲ ಪಂದ್ಯಗಳಲ್ಲಿ ವಿರಾಟ್​, ಡು ಪ್ಲೆಸಿಸ್ ತಮ್ಮ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದಾರೆ. ನಾಯಕ ಪ್ಲೆಸಿಸ್​ ಪಿಂಕ್​ ಕ್ಯಾಪ್​ ಸಹ ಪಡೆದಿದ್ದಾರೆ​. ಬೌಲಿಂಗ್​ನಲ್ಲಿ ಸಿರಾಜ್​ ಪರ್ಪಲ್​ ಕ್ಯಾಪ್​ ಹೋಲ್ಡರ್​ ಆಗಿದ್ದಾರೆ. ಆದರೆ ಬೌಲಿಂಗ್​ ಕ್ಷೇತ್ರ ಇನ್ನೂ ಸುಧಾರಣೆಗೊಳ್ಳುವ ಅಗತ್ಯತೆ ಇದೆ.

ಇಂದು ತಂಡವನ್ನು ಮುನ್ನಡೆಸುತ್ತಾರ ವಿರಾಟ್?:ವಿರಾಟ್​ ಕೊಹ್ಲಿ ಎರಡು ವರ್ಷಗಳ ನಂತರ ಕಳೆದ ಪಂಜಾಬ್​ ಪಂದ್ಯದಲ್ಲಿ ನಾಯಕತ್ವ ವಹಿಸಿದ್ದರು. ಡು ಪ್ಲೆಸಿಸ್ ಅನಾರೋಗ್ಯದ ಕಾರಣ ಮತ್ತೆ ಕ್ಯಾಪ್ಟನ್​ ಆಗಿದ್ದರು. ರಾಜಸ್ಥಾನದ ವಿರುದ್ಧವೂ ವಿರಾಟ್​ ನಾಯಕತ್ವ ಮುಂದುವರೆಯುತ್ತಾ ಕಾದುನೋಡ ಬೇಕಿದೆ. ಡು ಪ್ಲೆಸಿಸ್​ ನೆಟ್ಸ್​ನಲ್ಲಿ ಆರೋಗ್ಯವಾಗಿ ಕಂಡಿದ್ದಾರೆ.

ಅಂಕ ಪಟ್ಟಿಯ ಅಗ್ರಸ್ಥಾನ ಉಳಿಸಿಕೊಳ್ಳಲು ಸಂಜು ಫೈಟ್​:ಲೀಗ್​ನಲ್ಲಿ ಆಡಿದ ಆರು ಪಂದ್ಯದಲ್ಲಿ ನಾಲ್ಕರಲ್ಲಿ ಗೆದ್ದಿರುವ ಸಂಜು ಸ್ಯಾಮ್ಸನ್​ ನಾಯಕತ್ವದ ರಾಜಸ್ಥಾನ ರಾಯಲ್ಸ್​ ಮತ್ತೆ ಗೆದ್ದು ಸ್ಥಾನ ಭದ್ರ ಪಡಿಸಿಕೊಳ್ಳಲು ಸಿದ್ಧವಾಗುತ್ತಿದೆ. ಬೆಂಗಳೂರಿನ ಮಾಜಿ ಆಟಗಾರ ಯಜುವೇಂದ್ರ ಚಹಾಲ್​ ಆರ್​ಸಿಬಿಗೆ ಮುಳುವಾಗುವ ಸಾಧ್ಯತೆ ಇದೆ. ಪಿಚ್​ ಬಗ್ಗೆ ಅರಿತಿರುವ ಚಹಾಲ್​ ವಿರಾಟ್​ಗೆ ಚಾಲೆಂಜ್​ ಆಗಲಿದ್ದಾರೆ.

ಸಂಭಾವ್ಯ ತಂಡಗಳು ಇಂತಿವೆ..:

ರಾಯಲ್​ ಚಾಲೆಂಜರ್ಸ್​ ಬೆಂಗಳೂರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಸುಯಾಶ್ ಪ್ರಭುದೇಸಾಯಿ, ಹರ್ಷಲ್ ಪಟೇಲ್, ವೇಯ್ನ್ ಪಾರ್ನೆಲ್, ಮೊಹಮ್ಮದ್ ಸಿರಾಜ್ .

ರಾಜಸ್ಥಾನ ರಾಯಲ್ಸ್: ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ದೇವದತ್ ಪಡಿಕ್ಕಲ್, ಶಿಮ್ರೋನ್ ಹೆಟ್ಮೆಯರ್, ರಿಯಾನ್ ಪರಾಗ್, ಧ್ರುವ್ ಜುರೆಲ್, ಆರ್ ಅಶ್ವಿನ್, ಜೇಸನ್ ಹೋಲ್ಡರ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಯಜುವೇಂದ್ರ ಚಾಹಲ್.

ಇದನ್ನೂ ಓದಿ:ನಾಲ್ಕು ಇನ್ನಿಂಗ್ಸ್​ಗಳ ಏಕದಿನದ ಅಭಿಪ್ರಾಯ ತಿಳಿಸಿದ ಸಚಿನ್​: 50ನೇ ವಸಂತ ಪ್ರವೇಶಿಸುವ ಲಿಟಲ್​ ಮಾಸ್ಟರ್​ ವಿಶೇಷ ಸಂಭ್ರಮ

ABOUT THE AUTHOR

...view details