ಚೆನ್ನೈ :ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಮೈದಾನದ ಅಂಪೈರ್ ತೀರ್ಮಾನವನ್ನು ಅಗೌರವ ತೋರಿದ್ದಕ್ಕೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ವಿರುದ್ಧ ಐಪಿಎಲ್ ನಿಯಾಮಾವಳಿಯ ಪ್ರಕಾರ ಕ್ರಮ ಜರುಗಿಸುವ ಸಾಧ್ಯತೆಯಿದೆ.
ಜಂಟಲ್‌ಮ್ಯಾನ್ ಆಟವಾಗಿರುವ ಕ್ರಿಕೆಟ್ನಲ್ಲಿ ಯಾವುದೇ ಕ್ರಿಕೆಟಿಗ ಅದರಲ್ಲೂ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಂದುವರೆ ದಶಕದ ಅನುಭವವಿರುವ ಒಬ್ಬ ಹಿರಿಯ ಆಟಗಾರ ಈ ರೀತಿ ಅಂಪೈರ್ ತೀರ್ಮಾನದ ವಿರುದ್ಧ ಅನುಚಿತವಾಗಿ ವರ್ತಿಸುವುದು ಭವಿಷ್ಯದ ಕ್ರಿಕೆಟಿಗರ ಮೇಲೆ ದುಷ್ಪರಿಣಾಮ ಬೀರಬಹುದು.
ಶುಕ್ರವಾರ ಪಂಜಾಬ್ನ ಮೋಯಿಸಸ್ ಹೆನ್ರಿಕ್ಸ್ ಬೌಲಿಂಗ್ನಲ್ಲಿ ಚೆಂಡು ರೋಹಿತ್ ತೊಡೆಗೆ ಸೋಕಿ ಕೀಪರ್ ರಾಹುಲ್ ಕೈ ಸೇರಿತ್ತು. ಬೌಲರ್ ಮತ್ತು ಕೀಪರ್ ಅಫೀಲ್ ಮಾಡಿ ದೊಡನೆ ಅಂಫೈರ್ ಔಟ್ ಎಂದು ತೀರ್ಮಾನ ನೀಡಿದರು.