ದುಬೈ:ನಿನ್ನೆ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಬಲಿಷ್ಟ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ತಂಡ ಸೋಲು ಕಂಡಿತು. ಸೋಲಿನ ಬಳಿಕ ನಾಯಕ ರಿಷಬ್ ಪಂತ್ ಬೇಸರ ವ್ಯಕ್ತಪಡಿಸಿದರು.
'ಖಂಡಿತವಾಗಿಯೂ ಇದು ತುಂಬಾ ನೋವಿನ ಸಂಗತಿ. ನಮಗೀಗ ಏನನ್ನಿಸುತ್ತಿದೆ ಅನ್ನೋದನ್ನು ಹೇಳಲು ಸಹ ಆಗುತ್ತಿಲ್ಲ. ನಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದಿನ ಪಂದ್ಯಕ್ಕೆ ಸಿದ್ಧರಾಗುವುದೇ ನಾವು ಮಾಡಬಹುದಾದ ಏಕೈಕ ಕೆಲಸ. ಪಂದ್ಯದುದ್ದಕ್ಕೂ ಟಾಮ್ ಉತ್ತಮ ಬೌಲಿಂಗ್ ಮಾಡಿದ್ದರು. ಆದರೆ ಕೊನೆಯ ಓವರ್ನಲ್ಲಿ ದುರಾದೃಷ್ಟವಶಾತ್ ರನ್ ನೀಡಿದರು. ಯಾವ ಬೌಲರ್ಗೆ ಈ ದಿನ ಉತ್ತಮವಾಗಿತ್ತೋ ಅಂತಹ ಬೌಲರ್ಗೆ ಕೊನೆಯ ಓವರ್ ನೀಡುವುದು ಒಳಿತು ಎಂದು ನಾನು ಭಾವಿಸಿದ್ದೆ' ಎಂದರು.
'ಪವರ್ ಪ್ಲೇನಲ್ಲಿ ಅವರು (ಸಿಎಸ್‌ಕೆ) ಉತ್ತಮ ರನ್ ಕಲೆಹಾಕಿದರು. ನಾವು ವಿಕೆಟ್ ಪಡೆಯುವಲ್ಲಿಯೂ ಎಡವಿದೆವು. ಇದು ಪ್ರಮುಖ ವ್ಯತ್ಯಾಸ. ಒಬ್ಬ ಕ್ರಿಕೆಟಿಗನಾಗಿ ನಾವು ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಲಿದ್ದೇವೆ, ಅದರಿಂದ ಕಲಿಯುತ್ತೇವೆ. ಮುಂದಿನ ಪಂದ್ಯಕ್ಕೆ ತಯಾರಾಗುತ್ತೇವೆ. ಮುಂದಿನ ಪಂದ್ಯ ಗೆದ್ದು, ಫೈನಲ್ ತಲುಪುತ್ತೇವೆ ಎಂಬ ವಿಶ್ವಾಸವಿದೆ' ಎಂದು ಹೇಳಿದರು.
ಇಂದು ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ತಂಡದೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಮುಂದಿನ ಪಂದ್ಯವಾಡಲಿದೆ.
ಇದನ್ನೂ ಓದಿ:ಐಪಿಎಲ್ ರದ್ದಾದಾಗ ಕೆಲವು ಜನರು 'ನೀನು ಸಾಯಬೇಕಿತ್ತು' ಎಂದು ಸಂದೇಶ ಕಳುಹಿಸಿದ್ರು : ವರುಣ್ ಚಕ್ರವರ್ತಿ