ಚೆನ್ನೈ (ತಮಿಳುನಾಡು) :ಚೆಪಾಕ್ ಮೈದಾನದಲ್ಲಿ ಬುಧವಾರ ನಡೆದ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯವು ಕೊನೇಯ ಎಸೆತದವರೆಗೂ ರೋಚಕತೆಯಿಂದ ಕೂಡಿತ್ತು. ನಾಯಕನಾಗಿ 200ನೇ ಪಂದ್ಯವಾಡಿದ್ದ ಮಹೇಂದ್ರ ಸಿಂಗ್ ಧೋನಿ ತಮ್ಮ ಹೆಸರಿನಲ್ಲಿ ಮತ್ತೊಂದು ದಾಖಲೆ ಬರೆಯಲು ಹೊರಟಿದ್ದು, ಕೂದಲೆಳೆ ಅಂತರದಲ್ಲಿ ದಾಖಲೆಯೊಂದಿಗೆ ಪಂದ್ಯವೂ ಕೈಜಾರಿತ್ತು. ಧೋನಿ ಪಂದ್ಯದ ಅಂತಿಮ ಎಸೆತದಲ್ಲಿ ಸಿಕ್ಸರ್ ಬಾರಿಸಿದ್ದರೆ ಪಂದ್ಯವನ್ನು ಚೆನ್ನೈ ಗೆಲ್ಲುತ್ತಿತ್ತು. ಆದರೆ ವಿಶ್ವದ ಬೆಸ್ಟ್ ಫಿನಿಷರ್ ಕೈಯಿಂದ ಹಾಗು ಮತ್ತೊಂದು ತುದಿಯಲ್ಲಿ ಕ್ರೀಸ್ನಲ್ಲಿದ್ದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾರಿಂದ ಅದು ಸಾಧ್ಯವಾಗಲೇ ಇಲ್ಲ.
ಪಂದ್ಯಕ್ಕೂ ಮುನ್ನ ಮಾತನಾಡಿದ್ದ ಜಡೇಜಾ, ಎಂ.ಎಸ್.ಧೋನಿ ಭಾರತೀಯ ಕ್ರಿಕೆಟ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಎರಡೂ ತಂಡಕ್ಕೂ ದಂತಕಥೆ. ತಂಡದ ನಾಯಕನಾಗಿ ಅವರಿಂದು 200ನೇ ಪಂದ್ಯ ಆಡುತ್ತಿದ್ದಾರೆ. ರಾಜಸ್ಥಾನ್ ತಂಡವನ್ನು ಸೋಲಿಸಿ ಧೋನಿಯನ್ನು ಗೌರವಿಸಲು ನಮಗಿದು ಉತ್ತಮ ವೇದಿಕೆ ಎಂದಿದ್ದರು.