ಕರ್ನಾಟಕ

karnataka

ETV Bharat / sports

ಉಮ್ರಾನ್ ಮಲಿಕ್​​ಗೋಸ್ಕರ ತಂದೆಯ ತ್ಯಾಗ.. ETV ಭಾರತ್​ ಜೊತೆ ಮನದಾಳ ಬಿಚ್ಚಿಟ್ಟ ಅಬ್ದುಲ್​! - ಉಮ್ರಾನ್ ಮಲಿಕ್ ಬಗ್ಗೆ ತಂದೆಯ ಮಾತು

IPLನಲ್ಲಿ ಹಲ್​​ಚಲ್ ಎಬ್ಬಿಸಿದ 'ಜಮ್ಮು ಎಕ್ಸ್​ಪ್ರೆಸ್​' ಖ್ಯಾತಿಯ ಉಮ್ರಾನ್ ಮಲಿಕ್​, ಇದೀಗ ಭಾರತದ ಪುರುಷರ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಈ ವಿಚಾರವಾಗಿ ಅವರ ತಂದೆ ಅಬ್ದುಲ್​, ಈಟಿವಿ ಭಾರತ್ ಜೊತೆ ಮಾತನಾಡಿದ್ದಾರೆ.

Umran Malik father
Umran Malik father

By

Published : May 24, 2022, 5:16 PM IST

Updated : May 24, 2022, 5:24 PM IST

ಜಮ್ಮು: ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡದ ಪರ ಅದ್ಭುತ ಪ್ರದರ್ಶನ ನೀಡಿರುವ ಉಮ್ರಾನ್ ಮಲಿಕ್​ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ 22 ವರ್ಷದ ವೇಗಿ, ಐಪಿಎಲ್​​ನಲ್ಲಿ ಮಾರಕ ಬೌಲಿಂಗ್​​ನಿಂದಲೇ ಎದುರಾಳಿ ಬ್ಯಾಟರ್​ಗಳ ನಿದ್ದೆಗೆಡಿಸಿದ್ದರು. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ETV ಭಾರತ್​ ಜೊತೆ ಮನದಾಳ ಬಿಚ್ಚಿಟ್ಟ ಅಬ್ದುಲ್

ಟೀಂ ಇಂಡಿಯಾಗೆ ಉಮ್ರಾನ್ ಮಲಿಕ್​​ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಅವರ ತಂದೆ ಅಬ್ದುಲ್ ರಶೀದ್​ ಈಟಿವಿ ಭಾರತ್​ ಜೊತೆ ಮಾತನಾಡಿದ್ದಾರೆ. ಈ ವೇಳೆ ಅನೇಕ ವಿಚಾರ ಹೊರಹಾಕಿರುವ ಅವರು, ಮಗನಿಗೋಸ್ಕರ ಮಾಡಿರುವ ತ್ಯಾಗದ ಬಗ್ಗೆ ಪ್ರೀತಿಯಿಂದಲೇ ಹೇಳಿಕೊಂಡಿದ್ದಾರೆ. ತಮ್ಮ ಹಾಗೇ ಉಮ್ರಾನ್ ಯಾವತ್ತೂ ತರಕಾರಿ ಮಾರಬೇಕೆಂದು ನಾನು ಇಷ್ಟಪಡಲಿಲ್ಲ. ಹೀಗಾಗಿ, ಅಂಗಡಿ ಕಡೆ ಬಾರದಂತೆ ಆತನಿಗೆ ತಾಕೀತು ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.

ತರಕಾರಿ-ಹಣ್ಣು ವ್ಯಾಪಾರ ಮಾಡುವ ಉಮ್ರಾನ್ ಮಲಿಕ್ ತಂದೆ

ಇದನ್ನೂ ಓದಿ:IPLನಲ್ಲಿ ಹಲ್​​ಚಲ್ ಎಬ್ಬಿಸಿದ 'ಜಮ್ಮು ಎಕ್ಸ್​ಪ್ರೆಸ್​'.. 14 ಪಂದ್ಯದಲ್ಲೂ ಪ್ರಶಸ್ತಿ; ಹೊಸ ದಾಖಲೆ ಬರೆದ ಮಲಿಕ್​

ದೇಶಾದ್ಯಂತ ನನ್ನ ಮಗನ ಬಗ್ಗೆ ಕಂಡು ಬಂದಿರುವ ಪ್ರೀತಿಯಿಂದ ತುಂಬಾ ಸಂತಸಗೊಂಡಿದ್ದೇನೆ. ಜನರು ಯಾವಾಗಲೂ ಆತನನ್ನ ಇದೇ ರೀತಿ ಪ್ರೀತಿಸಲಿ ಎಂದಿದ್ದಾರೆ. ಉಮ್ರಾನ್​​ಗೆ ಚಿಕ್ಕವನಾಗಿದ್ದಾಗಿನಿಂದಲೂ ಕ್ರಿಕೆಟ್ ಎಂದರೆ ಪ್ಯಾಷನ್​. ಆತನ ಕನಸು ನನಸು ಮಾಡಿಕೊಳ್ಳಲು ನಾವು ಪ್ರೋತ್ಸಾಹಿಸಿದ್ದೇವೆ. ಇದಕ್ಕೆ ಆತನ ಸಹೋದರಿಯರು, ತಾಯಿ ಸಹ ಸಾಥ್ ನೀಡಿದ್ದಾರೆ ಎಂದರು. ಬಾಲ್ಯದಿಂದಲೂ ಆಟದ ಬಗ್ಗೆ ಒಲವು ಹೊಂದಿರುವ ಉಮ್ರಾನ್​ ಇದೀಗ ದೇಶವನ್ನ ಪ್ರತಿನಿಧಿಸಲಿದ್ದು, ಅವರಿಗೆ ಉತ್ತಮ ಯಶಸ್ಸು ಸಿಗಲಿ ಎಂದು ಉಮ್ರಾನ್ ಮಲಿಕ್ ತಂದೆ ಹಾರೈಸಿದ್ದಾರೆ.

ಉಮ್ರಾನ್ ಮಲಿಕ್​, ಟೀಂ ಇಂಡಿಯಾ ಪರ ಆಯ್ಕೆಯಾಗುತ್ತಿದ್ದಂತೆ ಅನೇಕರು ಜಮ್ಮು- ಕಾಶ್ಮೀರದಲ್ಲಿ ಸಂಭ್ರಮಾಚರಣೆ ಮಾಡಿ, ಈಗಾಗಲೇ ಸಿಹಿ ಸಹ ಹಂಚಿಕೆ ಮಾಡಿದ್ದಾರೆ.

ಈಟಿವಿ ಭಾರತ ಜೊತೆ ಉಮ್ರಾನ್ ಮಲಿಕ್ ತಂದೆ ಮಾತು

ಪ್ರಸಕ್ತ ಸಾಲಿನ ಐಪಿಎಲ್​ನಲ್ಲಿ ದಾಖಲೆಯ 157 ಕಿಲೋ ಮೀಟರ್​ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಹೊಸದೊಂದು ಇತಿಹಾಸ ನಿರ್ಮಿಸಿದ್ದ ಜಮ್ಮು ಎಕ್ಸ್​ಪ್ರೆಸ್ ಖ್ಯಾತಿಯ ಉಮ್ರಾನ್ ಮಲಿಕ್​, ತಾವು ಆಡಿರುವ ಲೀಗ್​ನ 14 ಪಂದ್ಯಗಳಲ್ಲೂ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಐಪಿಎಲ್​​ನಲ್ಲಿ ನೀಡಲಾಗುವ 'ಫಾಸ್ಟೆಸ್ಟ್​ ಡೆಲಿವರಿ ಆಫ್​ ದಿ ಮ್ಯಾಚ್'​ ಅವಾರ್ಡ್​​ ಪ್ರತಿವೊಂದು ಪಂದ್ಯದಲ್ಲೂ ಮಲಿಕ್ ಪಡೆದುಕೊಂಡಿದ್ದಾರೆ. ಅವರ ಬೌಲಿಂಗ್ ಸಾಮರ್ಥ್ಯಕ್ಕೆ ಫಿದಾ ಆಗಿರುವ ಬಿಸಿಸಿಐ, ಇದೀಗ ಮಣೆ ಹಾಕಿದೆ.

Last Updated : May 24, 2022, 5:24 PM IST

ABOUT THE AUTHOR

...view details