ಕರ್ನಾಟಕ

karnataka

ETV Bharat / sports

ಐಪಿಎಲ್ 2021: ಜೋಶ್​ ಅಲಭ್ಯ ಹಿನ್ನೆಲೆ ಫಿನ್​ಗೆ ಅವಕಾಶ ನೀಡಿದ ಆರ್​ಸಿಬಿ - ಫಿನ್ ಅಲೆನ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಜೋಶ್ ಫಿಲಿಪ್ ಅಲಭ್ಯವಾದ ಕಾರಣ ನ್ಯೂಜಿಲ್ಯಾಂಡ್​ ವಿಕೆಟ್ ಕೀಪರ್ - ಬ್ಯಾಟ್ಸ್‌ಮನ್ ಫಿನ್ ಅಲೆನ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ.

IPL 2021
ಫಿನ್​ಗೆ ಅವಕಾಶ ನೀಡಿದ ಆರ್​ಸಿಬಿ

By

Published : Mar 11, 2021, 10:23 AM IST

ಹೈದರಾಬಾದ್:ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಜೋಶ್ ಫಿಲಿಪ್ ಅಲಭ್ಯವಾದ ಕಾರಣ ನ್ಯೂಜಿಲ್ಯಾಂಡ್​ ವಿಕೆಟ್ ಕೀಪರ್ - ಬ್ಯಾಟ್ಸ್‌ಮನ್ ಫಿನ್ ಅಲೆನ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲು ಸಹಿ ಹಾಕಿದೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ ಬುಧವಾರ ಪ್ರಕಟಿಸಿದೆ.

2020 ರಲ್ಲಿ ಪದಾರ್ಪಣೆ ಮಾಡಿದ ಫಿಲಿಪ್ ಐದು ಪಂದ್ಯಗಳನ್ನು ಆಡಿ ಫ್ರಾಂಚೈಸಿಗಾಗಿ 78 ರನ್ ಗಳಿಸಿದ್ದರು. ಅವರ ಬದಲಿ ಆಟಗಾರ ಫಿನ್ ನ್ಯೂಜಿಲ್ಯಾಂಡ್​ ಪರ 12 ಪ್ರಥಮ ದರ್ಜೆ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ.

ಈ ಹಿಂದೆ ಫಿಲಿಫ್​ ಅವರನ್ನು 20 ಲಕ್ಷ ರೂ.ಗೆ ಸೇರ್ಪಡೆಗೊಳಿಸಲಾಗಿತ್ತು. ಇದೀಗ ಅದೇ ಬೆಲೆ ಫಿನ್​ ಅವರನ್ನೂ ಖರೀದಿ ಮಾಡಲಾಗಿದೆ.

ABOUT THE AUTHOR

...view details