ಕರ್ನಾಟಕ

karnataka

ETV Bharat / sports

IPL 2021: ಡೆಲ್ಲಿ ವಿರುದ್ಧ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಆರ್​ಸಿಬಿ - ಡೆಲ್ಲಿ ಕ್ಯಾಪಿಟಲ್​

ಇಂಡಿಯನ್​ ಪ್ರೀಮಿಯರ್ ಲೀಗ್​​​ನ 56ನೇ ಪಂದ್ಯದಲ್ಲಿ ಬೆಂಗಳೂರು - ಡೆಲ್ಲಿ ತಂಡ ಮುಖಾಮುಖಿಯಾಗಿದ್ದು, ದುಬೈ ಮೈದಾನದಲ್ಲಿ ಪಂದ್ಯ ಆರಂಭಗೊಂಡಿದೆ.

RCB vs Delhi
RCB vs Delhi

By

Published : Oct 8, 2021, 7:20 PM IST

ದುಬೈ:14ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್ ಲೀಗ್​ನ ಕೊನೆಯ ಲೀಗ್​​ ಪಂದ್ಯದಲ್ಲಿ ಇಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ಮುಖಾಮುಖಿಯಾಗಿದ್ದು, ಟಾಸ್​ ಗೆದ್ದಿರುವ ವಿರಾಟ್​​ ಕೊಹ್ಲಿ ಬೌಲಿಂಗ್ ಆಯ್ದುಕೊಂಡಿದ್ದಾರೆ.

ಉಭಯ ತಂಡಗಳು ಈಗಾಗಲೇ ಪ್ಲೇ - ಆಫ್​ ಪ್ರವೇಶ ಪಡೆದುಕೊಂಡಿರುವ ಕಾರಣ ಇಂದಿನ ಪಂದ್ಯ ಅಷ್ಟೊಂದು ಮಹತ್ವ ಪಡೆದುಕೊಂಡಿಲ್ಲ. ಆದರೆ, ಮುಂದಿನ ಹಂತದಲ್ಲಿ ಉತ್ತಮ ಪ್ರದರ್ಶನ ನೀಡುವ ಉದ್ದೇಶದಿಂದ ಎರಡು ತಂಡಗಳು ಇಂದಿನ ಪಂದ್ಯದಲ್ಲಿ ತಮ್ಮ ಶಕ್ತಿ ಪ್ರದರ್ಶನ ನೀಡುವ ಸಾಧ್ಯತೆ ಇದೆ.

ಆಡುವ 11ರ ಬಳಗ

ಡೆಲ್ಲಿ ಕ್ಯಾಪಿಟಲ್ಸ್​​​:ಪೃಥ್ವಿ ಶಾ, ಶಿಖರ್ ಧವನ್​, ಶ್ರೇಯಸ್​ ಅಯ್ಯರ್​, ರಿಷಭ್​​ ಪಂತ್​(ವಿ.ಕೀ, ಕ್ಯಾ), ರಿಪಲ್ ಪಟೇಲ್​, ಶಿಮ್ರಾನ್ ಹೆಟ್ಮಾಯರ್​, ಅಕ್ಸರ್ ಪಟೇಲ್​, ಆರ್​.ಅಶ್ವಿನ್​, ಕಾಗಿಸೋ ರಬಾಡ, ಆವೇಶ್ ಖಾನ್​, ಆನ್ರಿಚ್​

ಬೆಂಗಳೂರು: ವಿರಾಟ್​ ಕೊಹ್ಲಿ(ಕ್ಯಾಪ್ಟನ್​), ದೇವದತ್​ ಪಡಿಕ್ಕಲ್​, ಶ್ರೀಕಾರ್​ ಭರತ್​(ವಿ,ಕೀ), ಕ್ರಿಸ್ಟೇಯನ್​, ಗ್ಲೇನ್ ಮ್ಯಾಕ್ಸ್​ವೆಲ್​, ಎಬಿ ಡಿವಿಲಿಯರ್ಸ್​​, ಶಹಬಾಜ್​ ಅಹ್ಮದ್​, ಹರ್ಷಲ್ ಪಟೇಲ್​, ಜಾರ್ಜ್​ ಗ್ರೇಟನ್​, ಮೊಹಮ್ಮದ್ ಸಿರಾಜ್​, ಯಜುವೇಂದ್ರ ಚಹಲ್​

ಪಾಯಿಂಟ್​ ಪಟ್ಟಿಯಲ್ಲಿ ಡೆಲ್ಲಿ ಈಗಾಗಲೇ ಮೊದಲ ಸ್ಥಾನದಲ್ಲಿದ್ದು, ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ 3ನೇ ಸ್ಥಾನದಲ್ಲಿದೆ.

ABOUT THE AUTHOR

...view details