ಹೈದರಾಬಾದ್:ಐಪಿಎಲ್‌ನ 15ನೇ ಆವೃತ್ತಿಗೆ ಸಿದ್ಧತೆಗಳು ಈಗಾಗಲೇ ಆರಂಭವಾಗಿದ್ದು, ತಂಡಗಳಲ್ಲಿ ಆಟಗಾರರನ್ನು ಉಳಿಸಿಕೊಳ್ಳುವ ಪ್ರಕ್ರಿಯೆ ಶುರುವಾಗಿದೆ. ನವೆಂಬರ್ 30ರೊಳಗೆ ಹಳೆಯ 8 ತಂಡಗಳು ರಿಟೈನ್ ಮಾಡಿಕೊಳ್ಳಬೇಕಿರುವುದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮಾಜಿ ನಾಯಕ ವಿರಾಟ್ ಕೊಹ್ಲಿ, ಆಲ್‌ರೌಂಡರ್ ಗ್ಲೇನ್ ಮ್ಯಾಕ್ಸ್‌ವೆಲ್ ಹಾಗೂ ಯಜುವೇಂದ್ರ ಚಾಹಲ್‌ರನ್ನು ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.
RCB: ಇನ್ನೂ ಕಳೆದ ಆವೃತ್ತಿಯಲ್ಲಿ ಪರ್ಪಲ್ ಕ್ಯಾಪ್ ಪಡೆದಿದ್ದ ಹರ್ಷಲ್ ಪಟೇಲ್ ಹಾಗೂ ನವದೀಪ್ ಸೈನಿ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಒಂದು ತಂಡ ಗರಿಷ್ಠ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ರಿಟೈನ್ ಮುಗಿದ ಬಳಿಕ ಹೊಸ ತಂಡಗಳಾದ ಲಖನೌ ಹಾಗೂ ಅಹಮ್ಮದಾಬಾದ್ ಫ್ರಾಂಚೈಸಿಗಳು ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯಲಿದೆ.
ಪಂಜಾಬ್ ತಂಡವನ್ನು ತೊರೆಯಲು ಕೆ.ಎಲ್.ರಾಹುಲ್ ನಿರ್ಧರಿಸಿದ್ದಾರೆ. ಹೀಗಾಗಿ ಮೂಲಗಳ ಪ್ರಕಾರ ಲಖನೌ ತಂಡಕ್ಕೆ ರಾಹುಲ್ ನಾಯಕತ್ವ ವಹಿಸಲಿದ್ದು, ಈ ಬಗ್ಗೆ ತಂಡದ ಆಡಳಿತವೂ ಕೆ.ಎಲ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆ ಚಿನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಎಂ.ಎಸ್.ಧೋನಿ ಅವರೇ ಇನ್ನೂ ಮೂರು ವರ್ಷ ನಾಯಕನ್ನಾಗಿ ಮುಂದುರಿಸಲು ಅಲ್ಲಿನ ಆಡಳಿತ ಮಂಡಳಿ ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಯಾವ ಯಾವ ತಂಡದಲ್ಲಿ ಯಾರ್ಯಾರು ಉಳಿದಿದ್ದಾರೆ ಎಂಬುದರ ಮಾಹಿತಿ
CSK: ಎಂ.ಎಸ್.ಧೋನಿ, ಜಡೇಜಾ, ಮೊಯಿನ್ ಅಲಿ, ರುತುರಾಜ್ ಗಾಯಕ್ವಾಡ್
KKR: ಸುನೀಲ್ ನರೈನ್, ರಸೆಲ್, ಗಿಲ್ ಅಥವಾ ವೆಂಕಟೇಶ್ ಅಯ್ಯರ್, ವರುಣ್ ಚಕ್ರವರ್ತಿ
ಆರ್‌ಸಿಬಿ: ವಿರಾಟ್ ಕೊಹ್ಲಿ, ಗ್ಲೇನ್ ಮ್ಯಾಕ್ಸ್‌ವೆಲ್, ಚಾಹಲ್