ದುಬೈ: ಎಲಿಮಿನೇಟರ್ ಪಂದ್ಯದಲ್ಲಿ ಸೋತು ಆರ್ಸಿಬಿ ತಂಡ ಐಪಿಎಲ್ ಟೂರ್ನಿಯ ಪ್ರಯಾಣ ಕೊನೆಗೊಳಿಸಿದೆ. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರಿದ್ದ ತಂಡ ಎಲಿಮಿನೇಟರ್ನಲ್ಲಿ ಕೆಕೆಆರ್ ವಿರುದ್ಧ ಮುಗ್ಗರಿಸಿದೆ.
ಈ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಸಹ ಪಂದ್ಯದ ಬಳಿಕ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದರು. ಇದೀಗ ಆರ್ಸಿಬಿ ತಂಡ ಸೇರಿದ್ದ ಆಟಗಾರರು ಮರಳಿ ತಮ್ಮ ತಾಯ್ನಾಡಿಗೆ ತೆರಳಿದ್ದಾರೆ. ಇದಕ್ಕೂ ಮೊದಲು ದುಬೈನಲ್ಲಿ ಆರ್ಸಿಬಿ ತಂಡ ಕೊನೆಯ ಗ್ರೂಪ್ ಫೋಟೋ ತೆಗೆಸಿಕೊಂಡಿದೆ. ಆರ್ಸಿಬಿಯ ಎಲ್ಲಾ ಆಟಗಾರರು, ಸಿಬ್ಬಂದಿ ಈ ಫೋಟೋದಲ್ಲಿದ್ದು, ಮ್ಯಾನೇಜ್ಮೆಂಟ್ ಎಲ್ಲಾ ಆಟಗಾರರಿಗೂ ಧನ್ಯವಾದ ಅರ್ಪಿಸಿದೆ.