ಕರ್ನಾಟಕ

karnataka

ETV Bharat / sports

ಡ್ರೆಸ್ಸಿಂಗ್ ರೂಮ್​​ನಲ್ಲಿ ನೀರವ ಮೌನ: RCB ವಿಜಯಗೀತೆ ಹಾಡಿ, ಟ್ರೋಫಿಗಾಗಿ ನಿರಂತರ ಹೋರಾಟ ಎಂದ ತಂಡ! - RCB 2022

ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ. ತಂಡದ ಎಲ್ಲ ಪ್ಲೇಯರ್ಸ್​​ ಕೊನೆಯದಾಗಿ ಡ್ರೆಸ್ಸಿಂಗ್​ ರೂಮ್​ನಲ್ಲಿ ಒಂದಾಗಿ, ತಂಡದ ವಿಜಯಗೀತೆ ಹಾಡಿದರು.

RCB last Dressing Room huddle of IPL 2022
RCB last Dressing Room huddle of IPL 2022

By

Published : May 28, 2022, 6:30 PM IST

Updated : May 28, 2022, 9:07 PM IST

ಅಹಮದಾಬಾದ್​​:ಇಂಡಿಯನ್​ ಪ್ರಿಮೀಯರ್ ಲೀಗ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ, ಚೊಚ್ಚಲ ಪ್ರಶಸ್ತಿ ಗೆಲ್ಲುವ ವನವಾಸ ಮುಂದುವರೆದಿದೆ. ನಿನ್ನೆಯ ಕ್ವಾಲಿಫೈಯರ್​​ 2 ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ವಿರುದ್ಧ ಸೋಲು ಕಾಣುವ ಮೂಲಕ 15ನೇ ಆವೃತ್ತಿ ಇಂಡಿಯನ್​​​ ಪ್ರೀಮಿಯರ್ ಲೀಗ್​​ನಿಂದ ಹೊರ ಬಿದ್ದಿದೆ.

ಪಂದ್ಯ ಮುಗಿದ ಬಳಿಕ ಆರ್​ಸಿಬಿ ಪ್ಲೇಯರ್ಸ್​ ಡ್ರೆಸ್ಸಿಂಗ್ ರೂಮ್​ನಲ್ಲಿ ತೆರಳಿದ್ದಾಗ ನೀರವ ಮೌನ ಆವರಿಸಿತ್ತು. ಮಹತ್ವದ ಪಂದ್ಯದಲ್ಲಿ ಸೋಲು ಕಂಡಿದ್ದರಿಂದ ಬಹುತೇಕ ಎಲ್ಲ ಪ್ಲೇಯರ್ಸ್​​ ಮೌನವಾಗಿ ಕುಳಿತುಕೊಂಡಿದ್ದ ದೃಶ್ಯ ಕಂಡು ಬಂತು. ಈ ವೇಳೆ, ಮಾತನಾಡಿದ ತಂಡದ ಕ್ಯಾಪ್ಟನ್​, ಇಲ್ಲಿಯವರೆಗೆ ಅದ್ಭುತ ಜರ್ನಿ. ಆದರೆ, ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ ಎಂಬ ನೋವು ಕಾಡಲಿದೆ. ಫ್ರಾಂಚೈಸಿ ನಮಗೋಸ್ಕರ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಇಷ್ಟೊಂದು ದಿನ ಬಯೋ ಬಬಲ್​​ನಲ್ಲಿದ್ದುಕೊಂಡು ಕ್ರಿಕೆಟ್​ ಆಡಿದ್ದೇವೆ. ಮುಂದಿನ ವರ್ಷ ಮತ್ತಷ್ಟು ಬಲಿಷ್ಠವಾಗಿ ಮರಳುವ ವಿಶ್ವಾಸವಿದೆ ಎಂದರು.

ಇದನ್ನೂ ಓದಿ:'ಕ್ಯಾಚ್​ ವಿನ್ಸ್​ ಮ್ಯಾಚ್​​' RCB ಸೋಲಿಗೆ ಕಾರಣ ಕಾರ್ತಿಕ್ ಕೈಚೆಲ್ಲಿದ ಆ ಒಂದು ಕ್ಯಾಚ್​!?

ತಂಡದ ಕೋಚ್​ ಸಂಜಯ್ ಬಂಗಾರ್ ಮಾತನಾಡಿ, ತಂಡದ ಪ್ರದರ್ಶನದಿಂದ ನಾವು ತೃಪ್ತರಾಗಿದ್ದೇವೆ. ಅನೇಕ ಹೊಸ ಪ್ರತಿಭೆಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದು, ಮುಂದಿನ ಆವೃತ್ತಿಯಲ್ಲಿ ಮತ್ತಷ್ಟು ಬಲಿಷ್ಠವಾಗಿ ನಾವು ಮರಳಲಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ತಂಡಕ್ಕೆ ಹೊಸದಾಗಿ ಸೇರ್ಪಡೆಯಾದ ವಿಕೆಟ್ ಕೀಪರ್ ದಿನೇಶ್​ ಕಾರ್ತಿಕ್​, ಐಪಿಎಲ್​ನಲ್ಲಿ ಐದಾರು ಫ್ರಾಂಚೈಸಿಗಳಲ್ಲಿ ಆಟವಾಡಿದ್ದೇನೆ.

ಆದರೆ, ಆರ್​ಸಿಬಿ ತಂಡಕ್ಕೆ ಇರುವಷ್ಟು ಫ್ಯಾನ್ಸ್ ಫಾಲೋವರ್ಸ್​ ನಾನು ಎಲ್ಲೂ ಕಂಡಿಲ್ಲ. ಈ ತಂಡದಲ್ಲಿ ಆಡಿರುವುದಕ್ಕೆ ಹೆಮ್ಮೆ ಇದೆ ಎಂದಿದ್ದಾರೆ. ಇದೇ ವೇಳೆ ತಂಡದ ಎಲ್ಲ ಪ್ಲೇಯರ್ಸ್​, ಸಹಾಯಕ ಕೋಚ್​ ಆರ್​ಸಿಬಿ ತಂಡದ ವಿಜಯಗೀತೆ ಹಾಡಿ, ಡ್ರೆಸ್ಸಿಂಗ್​ ರೂಮ್​ನಿಂದ ಹೊರಗಡೆ ನಡೆದರು.

ಪ್ರಸಕ್ತ ಸಾಲಿನ ಐಪಿಎಲ್​​ನಲ್ಲಿ ನಾಟಕೀಯ ರೀತಿಯಲ್ಲಿ ಪ್ಲೇ-ಆಫ್​​ ಪ್ರವೇಶ ಪಡೆದುಕೊಂಡಿದ್ದ ಬೆಂಗಳೂರು, ತಂಡ ಮೊದಲ ಎಲಿಮಿನೇಟರ್​ ಪಂದ್ಯದಲ್ಲಿ ಲಖನೌ ವಿರುದ್ಧ ಭರ್ಜರಿ ಜಯ ದಾಖಲು ಮಾಡಿ, ಕ್ವಾಲಿಫೈಯರ್​​ಗೆ ಲಗ್ಗೆ ಹಾಕಿತ್ತು. ಈ ಪಂದ್ಯದಲ್ಲಿ ಗುಜರಾತ್​ ವಿರುದ್ಧ ಸೋಲು ಕಂಡಿದ್ದ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಪ್ರಸಕ್ತ ಸಾಲಿನ ಐಪಿಎಲ್​ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಆರ್​ಸಿಬಿ ತಂಡಕ್ಕೆ ಅನೇಕ ಹೊಸ ಮುಖಗಳು ಸೇರಿಕೊಂಡಿದ್ದವು. ಅದರಲ್ಲಿ ಕೆಲವರು ಅದ್ಭುತ ಪ್ರದರ್ಶನ ನೀಡಿ, ಯಶಸ್ವಿಯಾಗಿದ್ದಾರೆ.

Last Updated : May 28, 2022, 9:07 PM IST

ABOUT THE AUTHOR

...view details