ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇಂದಿನ ಪಂದ್ಯ ಬಹಳ ಮಹತ್ವ ಪಡೆದುಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೆಣಸಲಿದ್ದು, ಈ ಪಂದ್ಯದಲ್ಲಿ ರೋಹಿತ್ ಬಳಗದ ಗೆಲುವು ಆರ್ಸಿಬಿ ತಂಡದ ಪ್ಲೇ-ಆಫ್ ಆಸೆಗೆ ಹಾದಿ ಮಾಡಿಕೊಡಲಿದೆ. ಹೀಗಾಗಿ, ಇಂದಿನ ಪಂದ್ಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಂಪೂರ್ಣವಾದ ಬೆಂಬಲ ಮುಂಬೈ ಇಂಡಿಯನ್ಸ್ಗೆ ಘೋಷಣೆ ಮಾಡಿದೆ.
ಗುಜರಾತ್ ಟೈಟನ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿರುವ ಆರ್ಸಿಬಿ, ಈಗಾಗಲೇ ತಮ್ಮ ಬೆಂಬಲ ಮುಂಬೈ ಇಂಡಿಯನ್ಸ್ ತಂಡಕ್ಕೆ ಎಂದು ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸಾಮಾಜಿಕ ಜಾಲತಾಣದ ಟ್ವಿಟರ್ ಅಕೌಂಟ್ನಲ್ಲಿ ಲೋಗೋ ಕಲರ್ ಕೂಡ ಬದಲಾವಣೆ ಮಾಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಲೋಗೋ ಕಲರ್ ರೆಡ್ ಆಗಿದ್ದು, ಇದೀಗ ಮುಂಬೈ ಇಂಡಿಯನ್ಸ್ ತಂಡಕ್ಕೆ ಸಪೋರ್ಟ್ ಮಾಡುವ ಸಲುವಾಗಿ ಬ್ಲೂ ಕಲರ್ ಲೋಗೋ ಹಾಕಿಕೊಂಡಿದೆ. ಈ ಮೂಲಕ ರೋಹಿತ್ ಬಳಗಕ್ಕೆ ಸಪೋರ್ಟ್ ಮಾಡಿದೆ.
ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲಿ ಆರ್ಸಿಬಿ ಆಡಿರುವ 14 ಪಂದ್ಯಗಳ ಪೈಕಿ 8ರಲ್ಲಿ ಗೆಲುವು ದಾಖಲು ಮಾಡಿ 16 ಪಾಯಿಂಟ್ಗಳಿಕೆ ಮಾಡಿದ್ದು, ಸದ್ಯ 4ನೇ ಸ್ಥಾನದಲ್ಲಿದೆ. ಇಂದು ಕೊನೆಯ ಲೀಗ್ ಪಂದ್ಯದಲ್ಲಿ ಮುಂಬೈ ಹಾಗೂ ಡೆಲ್ಲಿ ಮುಖಾಮುಖಿಯಾಗುತ್ತಿದ್ದು, ಈ ಪಂದ್ಯದಲ್ಲಿ ಮುಂಬೈ ಗೆಲುವು ಸಾಧಿಸಿದರೆ, ಆರ್ಸಿಬಿ ಪ್ಲೇ- ಆಫ್ ಪ್ರವೇಶ ಪಡೆದುಕೊಳ್ಳಲಿದೆ.
ಇದನ್ನೂ ಓದಿ:ಮುಂಬೈ.. ಮುಂಬೈ: ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ರೋಹಿತ್ ಬಳಗಕ್ಕೆ ಕೊಹ್ಲಿ, ಡುಪ್ಲೆಸಿಸ್ ಬೆಂಬಲ
ಗುಜರಾತ್ ವಿರುದ್ಧದ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ್ದ ಡುಪ್ಲೆಸಿಸ್ - ವಿರಾಟ್, ಎರಡು ದಿನಗಳ ಕಾಲ ವಿಶ್ರಾಂತಿ ಪಡೆದುಕೊಂಡು ಮುಂಬೈ ತಂಡಕ್ಕೆ ಬೆಂಬಲ ಸೂಚಿಸಲಿದ್ದೇವೆ. ಮುಂಬೈ ತಂಡಕ್ಕೆ ಮತ್ತಿಬ್ಬರು ಬೆಂಬಲಿಗರು ಸೇರಿಕೊಂಡಿದ್ದು, ನಾವು 25 ಸದಸ್ಯರನ್ನು ಹೊಂದಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಈ ವೇಳೆ ಕ್ಯಾಪ್ಟನ್ ಡುಪ್ಲೆಸಿಸ್, ಮುಂಬೈ.. ಮುಂಬೈ ಎಂದು ಜೈಕಾರ ಹಾಕಿದ್ದು, ಕ್ರೀಡಾಂಗಣದಲ್ಲಿ ನಾವು ಮುಂಬೈ ತಂಡಕ್ಕೆ ಬೆಂಬಲ ನೀಡಲಿದ್ದೇವೆ ಎಂದಿದ್ದಾರೆ.