ಕರ್ನಾಟಕ

karnataka

ETV Bharat / sports

ಮುಂಬರುವ ಟಿ20 ವಿಶ್ವಕಪ್​ಗೆ ಹಾರ್ದಿಕ್​​ ಪಾಂಡ್ಯಗೆ ನಾಯಕತ್ವ ನೀಡಬೇಕು: ರವಿಶಾಸ್ತ್ರಿ

2007ರ ಚುಟುಕು ಕ್ರಿಕೆಟ್​ ವಿಶ್ವಕಪ್​ನಂತೆಯೇ 2024ರ ವಿಶ್ವಕಪ್​ಗೆ ಕೂಡ ಹೊಸಬರ ಟಿ20 ತಂಡ ಆಯ್ಕೆ ಆಗಬೇಕು ಎಂದು ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

Ravi Shastri on Indias T20 captaincy next T20I world cup
2024ರ ವಿಶ್ವಕಪ್​ನ ತಂಡಕ್ಕೆ ಹಾರ್ದಿಕ್​ ಪಾಂಡ್ಯ ನಾಯಕತ್ವ ವಹಿಸಬೇಕು: ರವಿಶಾಸ್ತ್ರಿ

By

Published : May 12, 2023, 10:31 PM IST

ಮುಂಬೈ (ಮಹಾರಾಷ್ಟ್ರ): 2007ರ ಚೊಚ್ಚಲ ಟಿ20 ವಿಶ್ವಕಪ್​ನಂತೆ ಹೊಸ ತಂಡವು ಮುಂದಿನ ಚುಟುಕು ವಿಶ್ವಕಪ್​ಗೆ ಆಯ್ಕೆ ಆಗಬೇಕು ಎಂದು ಭಾರತದ ಮಾಜಿ ಮುಖ್ಯ ಕೋಚ್, ಮಾಜಿ ಕ್ರಿಕೆಟರ್​ ರವಿಶಾಸ್ತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದಿನ ಟಿ20 ವಿಶ್ವಕಪ್ ಟೂರ್ನಿಗೆ ಹಾರ್ದಿಕ್ ಪಾಂಡ್ಯ ನಾಯಕತ್ವದ ತಂಡವನ್ನು ಎದುರು ನೋಡುತ್ತಿರುವುದಾಗಿ ರವಿಶಾಸ್ತ್ರಿ ಹೇಳಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಸದ್ಯ ಐಪಿಎಲ್​ನಲ್ಲಿ ಗುಜರಾತ್ ಟೈಟಾನ್ಸ್ ತಂಡ ಮುನ್ನಡೆಸುತ್ತಿರುವ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದ ಮುಂದಾಳತ್ವ ವಹಿಸಬೇಕು ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ, ರೋಹಿತ್ ಶರ್ಮಾ ಎಲ್ಲಾ ಮೂರು ಮಾದರಿಗಳಲ್ಲಿಯೂ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆದರೆ, ರೋಹಿತ್​ ಶರ್ಮಾ ಚುಟುಕು ಕ್ರಿಕೆಟ್​ನಲ್ಲಿ ಬ್ಯಾಟಿಂಗ್​ ಲಯ ಕಳೆದುಕೊಂಡಿದ್ದಾರೆ ಎಂದಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನ ಹೊರತಾಗಿ, ಶರ್ಮಾ ಕೊನೆಯ ಬಾರಿಗೆ 2022ರ ಟಿ20 ವಿಶ್ವಕಪ್‌ನಲ್ಲಿ ಅಂತಾರಾಷ್ಟ್ರೀಯ ಟಿ20 ಪಂದ್ಯ ಆಡಿದ್ದರು. ಉಪನಾಯಕನ ಸ್ಥಾನ ವಹಿಸಿದ್ದ ಕೆಎಲ್​ ರಾಹುಲ್ ಸದ್ಯ​ ಗಾಯದಿಂದ ಬಳಲುತ್ತಿದ್ದಾರೆ. ರಾಹುಲ್​ ಸಹ ವಿಶ್ವಕಪ್​ ಬಳಿಕ ಐಪಿಎಲ್​ನಲ್ಲಿ ಮಾತ್ರ ಟಿ20 ಮಾದರಿಯಲ್ಲಿ ಆಡಿದ್ಧಾರೆ. ಈ ಇಬ್ಬರು ಆಟಗಾರರ ಅನುಪಸ್ಥಿತಿಯಲ್ಲಿ 8 ಪಂದ್ಯದಲ್ಲಿ ಹಾರ್ದಿಕ್​ ತಂಡ ಮುನ್ನಡೆಸಿ 5ರಲ್ಲಿ ಗೆಲುವು ಕಂಡಿದ್ದಾರೆ.

"ಎಲ್ಲರೂ ತಂಡದಲ್ಲಿ ಆಡಲು ಅರ್ಹತೆ ಪಡೆಯಬಹುದು, ಆದರೆ ಹಾರ್ದಿಕ್ ಮುನ್ನಡೆಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಮುಂದಿನ ಎರಡು ವಿಶ್ವಕಪ್‌ ಅಂದರೆ 2023ರ ಏಕದಿನ ಮತ್ತು ನಂತರದ ಟಿ20 ಟೂರ್ನಿಯಲ್ಲಿ ಹಾರ್ದಿಕ್ ಪ್ರಮುಖ ಪಾತ್ರ ವಹಿಸಲಿದ್ದಾರೆ. ಹಾರ್ದಿಕ್​ ಈಗಾಗಲೇ ಟಿ20 ಹಂಗಾಮಿ ನಾಯಕರಾಗಿದ್ದಾರೆ. ಆದ್ದರಿಂದ ಅವರೇ ನಾಯಕರಾಗಿ ಮುಂದುವರೆಯುತ್ತಾರೆ ಎಂದು ಭಾವಿಸುತ್ತೇನೆ. ಅವರ ನಿರ್ದೇಶನದಲ್ಲಿ ಹೊಸ ಮತ್ತು ಯುವ ಪ್ರತಿಭೆಗಳು ತಂಡವನ್ನು ಪ್ರತಿನಿಧಿಸುತ್ತಾರೆ. ಸಾಧ್ಯವಾದಷ್ಟೂ ಹೊಸ ತಂಡವನ್ನೇ ನಾವು ನಿರೀಕ್ಷಿಸಬಹುದು, ಅಷ್ಟೊಂದು ಯುವ ಪ್ರತಿಭೆಗಳಿದ್ದಾರೆ" ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶಾಸ್ತ್ರಿ ಹೇಳಿದ್ದಾರೆ.

ಇದನ್ನೂ ಓದಿ:ತಂಡ ಒತ್ತಡದಲ್ಲಿದ್ದಾಗಲೇ ಧೋನಿ ಬ್ಯಾಟಿಂಗ್​ಗೆ ಬರುತ್ತಾರೆ: ಗ್ರೇಮ್ ಸ್ಮಿತ್

"ಈ ವರ್ಷದ ಐಪಿಎಲ್​ನಲ್ಲಿ ಸಾಕಷ್ಟು ಯುವ ಪ್ರತಿಭೆಗಳು ಮಿಂಚುತ್ತಿದ್ದಾರೆ. ಹೀಗಾಗಿ ಮುಂದಿನ ಟಿ20 ವಿಶ್ವಕಪ್​ಗೆ ಹೊಸಬರ ತಂಡ ಅಂದರೆ 2007ರ ವಿಶ್ವಕಪ್​ನಂತಯೇ ಯುವಪಡೆ ಆಯ್ಕೆ ಮಾಡಬೇಕು. ತಂಡದಲ್ಲಿ ಸ್ಥಾನ ಪಡೆಯಲು ಪ್ರತಿಭೆ ಪ್ರಮುಖವಾಗಲಿದ್ದು, ಹಾರ್ದಿಕ್​ ಪಾಂಡ್ಯ ಮೊದಲ ಆಯ್ಕೆಯಾಗಲಿದ್ದಾರೆ" ಎಂದು ರವಿಶಾಸ್ತ್ರಿ ಹೇಳಿದರು.

ಹಾರ್ದಿಕ್​ ಏಕೆಂದರೆ ಹೊಸಬರ ಆಲೋಚನೆಗಳು ಬೇರೆ ರೀತಿ ಇರುತ್ತವೆ. ಪಾಂಡ್ಯಗೆ ಐಪಿಎಲ್​ ಫ್ರಾಂಚೈಸಿಯ ನಾಯಕರಾಗಿ ಆಡಿದ ಅನುಭವ ಇದೆ. ಮತ್ತು ಸಾಕಷ್ಟು ಆಟಗಾರರನ್ನು ಕಂಡಿದ್ದಾರೆ. ಪಂದ್ಯದ ನಂತರವೂ ಆಟಗಾರರೊಂದಿಗೆ ಹೇಗೆ ಸಂವಾದಲ್ಲಿರುತ್ತೇವೆ ಎಂಬುದು ಮುಖ್ಯವಾಗುತ್ತದೆ. ಅವರು ಎಲ್ಲರಿಗೂ ನೀಡುವ ಪ್ರಾಮುಖ್ಯತೆ ನಾಯಕತ್ವದ ಗುಣವನ್ನು ಬೆಳೆಸಿದೆ ಎಂದು ಶಾಸ್ತ್ರಿ ತಿಳಿಸಿದ್ದಾರೆ.

ಇದನ್ನೂ ಓದಿ:ಐಪಿಎಲ್​ ಆರಂಭದಿಂದಲೂ ಆರ್​ಸಿಬಿಗೆ ಆಡುತ್ತಿರುವುದ ಒಂದು ಅದೃಷ್ಟ: ವಿರಾಟ್​ ಕೊಹ್ಲಿ

ABOUT THE AUTHOR

...view details