ಕರ್ನಾಟಕ

karnataka

ETV Bharat / sports

'ನಾನು ನೋಡಿದ ಅತ್ಯುತ್ತಮ ಕ್ಯಾಚ್‌ಗಳಲ್ಲಿ ಒಂದು': ರಶೀದ್​ ಕ್ಯಾಚ್​ಗೆ ಕೊಹ್ಲಿ ಖುಷ್-ವಿಡಿಯೋ - ಈಟಿವಿ ಭಾರತ ಕನ್ನಡ

ರಶೀದ್​ ಖಾನ್ ಅದ್ಭುತ ಕ್ಯಾಚ್​ ಬಗ್ಗೆ ವಿರಾಟ್​ ಕೊಹ್ಲಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಶೀದ್​ ಖಾನ್​ ಕ್ಯಾಚ್​ಗೆ ವಿರಾಟ್ ಕೊಹ್ಲಿ ಪ್ರತಿಕ್ರಿಯೆ
ರಶೀದ್​ ಖಾನ್​ ಕ್ಯಾಚ್​ಗೆ ವಿರಾಟ್ ಕೊಹ್ಲಿ ಪ್ರತಿಕ್ರಿಯೆ

By

Published : May 8, 2023, 10:51 AM IST

ಅಹಮದಾಬಾದ್: ಭಾನುವಾರ(ನಿನ್ನೆ) ನಡೆದ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ ತಂಡದ ಆಲ್​ರೌಂಡರ್​ ರಶೀದ್​ ಖಾನ್ ರೋಮಾಂಚಕ​​ ಕ್ಯಾಚ್ ಕ್ರಿಕೆಟ್‌ಲೋಕದ ಗಮನ ಸೆಳೆಯಿತು. ಕ್ರಿಕೆಟ್​ ಅಭಿಮಾನಿಗಳು ಸೇರಿದಂತೆ ಹಿರಿಯ ಕ್ರಿಕೆಟಿಗರು ಹುಬ್ಬೇರಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕ್ಯಾಚ್​ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ರಾಯಲ್​ ಚಾಲೆಂಜರ್ಸ್​ ತಂಡದ ಸ್ಟಾರ್​ ಬ್ಯಾಟರ್​ ಹಾಗು ಮಾಜಿ ನಾಯಕ ವಿರಾಟ್​ ಕೊಹ್ಲಿ ಕೂಡ ರಶೀದ್​ ಖಾನ್​ ಕ್ಯಾಚ್​ ಕುರಿತು ತಮ್ಮ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದಾರೆ.

ಇಂಡಿಯನ್​ ಪ್ರೀಮಿಯರ್​ ಲೀಗ್ 2023ರ 51ನೇ ಪಂದ್ಯ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯಿತು. ಪಂದ್ಯದಲ್ಲಿ ಗುಜರಾತ್ ಮೊದಲು ಬ್ಯಾಟಿಂಗ್​ ಮಾಡಿ ನಿಗದಿತ 20 ಓವರ್​ಗಳಲ್ಲಿ 227 ರನ್​ಗಳ ಬೃಹತ್​ ಮೊತ್ತ ಕಲೆ ಹಾಕಿ ಲಕ್ನೋ ತಂಡಕ್ಕೆ 228 ರನ್​ಗಳ ಗುರಿ ನೀಡಿತು. ಗುರಿ ಬೆನ್ನಟ್ಟಿದ ಲಕ್ನೋ ಉತ್ತಮ ಆರಂಭ ಪಡೆಯಿತು. ಆರಂಭಿಕ ಬ್ಯಾಟರ್‌ಗಳಾದ ಕೈಲ್ ಮೇಯರ್ಸ್ ಮತ್ತು ಕ್ವಿಂಟನ್ ಡಿ ಕಾಕ್ ಬಿರುಸಿನ ಪ್ರದರ್ಶನ ತೋರಿದರು. ಪವರ್​ ಪ್ಲೇ ಮುಕ್ತಾಯದ ವೇಳೆಗೆ ತಂಡದ ಸ್ಕೋರ್​ 72 ಗಡಿ ತಲುಪಿತ್ತು. ಕೈಲ್​ ಮೇಯರ್ಸ್​ ಬ್ಯಾಟಿಂಗ್‌ ಬಲದಿಂದ ಲಕ್ನೋ ಗೆಲುವು ಸಾಧಿಸಲಿದೆ ಎಂದೇ ಅಂದಾಜಿಸಲಾಗಿತ್ತು.

ಆದರೆ ಇನಿಂಗ್ಸ್‌ನ 8ನೇ ಓವರ್‌ನಲ್ಲಿ ವೇಗಿ ಮೋಹಿತ್ ಶರ್ಮಾ ಎರಡನೇ ಎಸೆತದ ಶಾಟ್ ಪಿಚ್ ಬಾಲ್ ಅನ್ನು ಮೆಯರ್ಸ್ ಸ್ಕ್ವೇರ್ ಲೆಗ್ ಕಡೆ ಸಕ್ಸರ್​ ಸಿಡಿಸಲು ಯತ್ನಿಸಿದರು. ಫೈನ್ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರಶೀದ್ ಖಾನ್ ವೇಗವಾಗಿ ಓಡಿ ಬಂದು ಕ್ಯಾಚ್ ಪಡೆದರು. ಈ ಮೂಲಕ ಲಕ್ನೋ ತಂಡದ ಗೆಲುವಿಗೂ ರಶೀದ್​ ಬ್ರೇಕ್​ ಹಾಕಿದರು.

ವಿರಾಟ್​ ಕೊಹ್ಲಿ ಇನ್​ಸ್ಟಾ ಸ್ಟೋರಿ

ರಶೀದ್ ಕ್ಯಾಚ್ ಶ್ಲಾಘಿಸಿರುವ ವಿರಾಟ್ ಕೊಹ್ಲಿ ತಮ್ಮ ಅಧಿಕೃತ ಇನ್​ಸ್ಟಾ ಖಾತೆಯಲ್ಲಿ ರಶೀದ್ ಖಾನ್ ಅವರನ್ನು ಟ್ಯಾಗ್ ಮಾಡಿ, "ನಾನು ನೋಡಿದ ಅತ್ಯುತ್ತಮ ಕ್ಯಾಚ್‌ಗಳಲ್ಲಿ ಒಂದಾಗಿದೆ. ಬ್ರಿಲಿಯಂಟ್ @rashid.khan19," ಎಂದು ಫೋಟೋ ಹಂಚಿಕೊಂಡಿದ್ದಾರೆ.

11 ಪಂದ್ಯಗಳನ್ನು ಆಡಿರುವ ಗುಜರಾತ್​ ಟೈಟಾನ್ಸ್​ 8ರಲ್ಲಿ ಗೆಲುವು ಸಾಧಿಸಿ 3 ರಲ್ಲಿ ಸೋಲು ಕಂಡಿದೆ. 16 ಅಂಕಗಳಿಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಲಕ್ನೋ 11 ಪಂದ್ಯಗಳನ್ನು ಆಡಿ 5ರಲ್ಲಿ ಗೆದ್ದು 5 ರಲ್ಲಿ ಸೋತಿದೆ. 13 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.

ಇದನ್ನೂ ಓದಿ:ರಾಜಸ್ಥಾನ ರಾಯಲ್ಸ್​ ವಿರುದ್ಧ ಸನ್​'ರೈಸ್​'! 4 ವಿಕೆಟ್​ಗಳ ರೋಚಕ ಜಯ

ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್: ಜೆರೆಮಿ ಲಾಲ್ರಿನ್ನುಂಗಾಗೆ ಸ್ನ್ಯಾಚ್‌ ವಿಭಾಗದಲ್ಲಿ ಬೆಳ್ಳಿ

ABOUT THE AUTHOR

...view details