ಕರ್ನಾಟಕ

karnataka

ETV Bharat / sports

IPLನಲ್ಲಿ ಹೊಸ ತಂಡ ಖರೀದಿಗೆ ದಿಢೀರ್​ ಆಗಿ ಕೇಳಿ ಬಂತು ರಣವೀರ್ ​- ದೀಪಿಕಾ ಹೆಸರು - ಇಂಡಿಯನ್​ ಪ್ರೀಮಿಯರ್ ಲೀಗ್

ಬಾಲಿವುಡ್​​ನಲ್ಲಿ ಮಿಂಚು ಹರಿಸಿರುವ ರಣವೀರ್​ - ದೀಪಿಕಾ ಜೋಡಿ ಇದೀಗ ಕ್ರಿಕೆಟ್​ನಲ್ಲೂ ತಮ್ಮ ಚಾಪು ಮೂಡಿಸಲು ಮುಂದಾಗಿದ್ದು, ಮುಂದಿನ ವರ್ಷದ ಆವೃತ್ತಿಗಾಗಿ IPL ತಂಡ ಖರೀದಿ ಮಾಡಲು ಆಸಕ್ತಿ ತೋರಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

Ranveer Singh
Ranveer Singh

By

Published : Oct 22, 2021, 5:03 PM IST

ಹೈದರಾಬಾದ್​​:ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ ಮುಂದಿನ ಆವೃತ್ತಿಯಿಂದ 10 ತಂಡಗಳು ಕಣಕ್ಕಿಳಿಯಲಿದ್ದು, ಹೊಸದಾಗಿ ಎರಡು ತಂಡಗಳ ಸೇರ್ಪಡೆಗೆ ಈಗಾಗಲೇ ಕ್ಷಣಗಣನೇ ಆರಂಭಗೊಂಡಿದೆ. ಇದರ ಮಧ್ಯೆ ಬಾಲಿವುಡ್​​ ತಾರಾ ದಂಪತಿಗಳಾಗಿರುವ ರಣವೀರ್​ ಸಿಂಗ್ ಹಾಗೂ ದೀಪಿಕಾ ಪಡುಕೊಣೆ ಹೊಸ ತಂಡ ಖರೀದಿ ಮಾಡಲು ಆಸಕ್ತಿ ತೋರಿದ್ದಾರೆ ಎಂಬ ಮಾಹಿತಿ ಕೇಳಿ ಬರಲು ಶುರುವಾಗಿದೆ.

ಬಾಲಿವುಡ್​ ದಂಪತಿ ರಣವೀರ್​-ದೀಪಿಕಾ

ನೂತನ ತಂಡ ಖರೀದಿಗಾಗಿ ಈಗಾಗಲೇ ವಿವಿಧ ಕಂಪನಿಗಳು ಬಿಡ್​ ಖರೀದಿ ಮಾಡಿದ್ದು, ಇದರ ಬೆನ್ನಲ್ಲೇ ಬಾಲಿವುಡ್​ ದಂಪತಿಗಳ ಹೆಸರು ಕೇಳಿ ಬಂದಿದೆ. ಐಪಿಎಲ್​​ನಲ್ಲಿ ಈಗಾಗಲೇ ಶಾರುಖ್​ ಖಾನ್​, ಜೂಹಿ ಚಾವ್ಹಾ ಹಾಗೂ ಪ್ರೀತಿ ಜಿಂಟಾ ತಂಡ ಖರೀದಿ ಮಾಡಿದ್ದು, ಇದೀಗ ಮುಂದಿನ ವರ್ಷದ ಐಪಿಎಲ್​ ಸೀಸನ್​ಗಾಗಿ ರಣವೀರ್ - ದೀಪಿಕಾ ತಂಡಕ್ಕೆ ಬಿಡ್ ಮಾಡಬಹುದು ಎನ್ನಲಾಗಿದೆ.

ಕಪಿಲ್ ದೇವ್ ಅವತಾರದಲ್ಲಿ ಮಿಂಚಿದ್ದ ರಣವೀರ್ ಸಿಂಗ್‌

ದಿನೇಶ್ ಕಾರ್ತಿಕ್​ ಟ್ವೀಟ್​

ಬಾಲಿವುಡ್​​ ದಂಪತಿ ಐಪಿಎಲ್​ ತಂಡ ಖರೀದಿ ಮಾಡಲು ಮುಂದಾಗಿದ್ದಾರೆ ಎಂಬ ಸುದ್ದಿ ಕೇಳಿ ಬರಲು ಶುರುವಾಗುತ್ತಿದ್ದಂತೆ ಟೀಂ ಇಂಡಿಯಾ ವಿಕೆಟ್​ ಕೀಪರ್ ಬ್ಯಾಟರ್​ ದಿನೇಶ್ ಕಾರ್ತಿಕ್​ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ. ರಣವೀರ್​ ಮಾಲೀಕತ್ವದ ತಂಡದ ಜರ್ಸಿ ನೋಡಲು ತುಂಬಾ ಆಶ್ಚರ್ಯಕರವಾಗಿರುತ್ತದೆ ಎಂದಿದ್ದಾರೆ.

ಹೊಸ ತಂಡಗಳ ಹರಾಜು ಪ್ರಕ್ರಿಯೆ ಅಕ್ಟೋಬರ್​​ 25ರಂದು ದುಬೈನಲ್ಲಿ ನಡೆಯಲಿದ್ದು, ಈಗಾಗಲೇ ಅಹಮದಾಬಾದ್, ಲಖನೌ ತಂಡಗಳು ಮುಂದಿನ ಐಪಿಎಲ್​ ತಂಡದಲ್ಲಿ ಭಾಗಿಯಾಗಲಿವೆ ಎಂಬ ಮಾತು ಕೇಳಿ ಬರಲು ಶುರುವಾಗಿದೆ. ಐಪಿಎಲ್​ನಲ್ಲಿ ಶಾರುಖ್ ಖಾನ್ ಕೋಲ್ಕತ್ತಾ ನೈಟ್​ ರೈಡರ್ಸ್​ ಹಾಗೂ ಪ್ರೀತಿ ಜಿಂಟಾ ಕಿಂಗ್ಸ್​​ ಪಂಜಾಬ್​ ತಂಡದ ಮಾಲೀಕರಾಗಿದ್ದಾರೆ.

ಇದನ್ನೂ ಓದಿರಿ:IPL​​ 2022: ನಾಲ್ವರು ಪ್ಲೇಯರ್ಸ್​ಗೆ ಉಳಿಸಿಕೊಳ್ಳಲು ಅವಕಾಶ... RTMಗಿಲ್ಲ ಚಾನ್ಸ್​​​!

ಕಳೆದ ಆವೃತ್ತಿಯಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​​​ ತಂಡ ಕೆಕೆಆರ್​ ವಿರುದ್ಧ ಗೆಲುವು ಸಾಧಿಸಿ, ಚಾಂಪಿಯನ್​ ಆಗಿ ಹೊರಹೊಮ್ಮಿದೆ.

ABOUT THE AUTHOR

...view details