ಕರ್ನಾಟಕ

karnataka

ETV Bharat / sports

ಸಂಜು ಸ್ಯಾಮ್ಸನ್​, ಶಿಮ್ರಾನ್​ ಹೆಟ್ಮೆಯರ್​ ಅಬ್ಬರಕ್ಕೆ ಮಣಿದ ಗುಜರಾತ್​ ಟೈಟಾನ್ಸ್​ - Etv Bharat Kannada

ಗುಜರಾತ್​ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ತಂಡ 3 ವಿಕೆಟ್​ಗಳ ಜಯ ಸಾಧಿಸಿದೆ.

ಶಿಮ್ರೋ ಹೆಟ್ಮಾಯರ್
ಶಿಮ್ರೋ ಹೆಟ್ಮಾಯರ್

By

Published : Apr 17, 2023, 7:38 AM IST

Updated : Apr 17, 2023, 9:37 AM IST

ಅಹಮದಾಬಾದ್​: ಅಹಮದಾಬಾದ್​: ಇಂಡಿಯನ್​ ಪ್ರೀಮಿಯರ್​ ಲೀಗ್​2023 ಗುಜರಾತ್​ ಟೈಟಾನ್ಸ್​ ವಿರುದ್ದದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ತಂಡ ರೋಚಕ ಜಯ ಸಾಧಿಸಿದೆ. ಭಾನುವಾರ ಇಲ್ಲಿಯ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ರಾಯಲ್ಸ್​ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಗುಜರಾತ್​ ಟೈಟಾನ್ಸ್​ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 178 ರನ್​ಗಳ ಗಳಿಸಿತು.

ಟೈಟಾನ್ಸ್​ ಪರ ಶುಬ್​ಮನ್​ ಗಿಲ್ 34 ಎಸೆತಗಳಲ್ಲಿ 4ಬೌಂಡರಿ 1 ಸಿಕ್ಸರ್​ ಸಮೇತ 45 ರನ್​ಗಳ ಕಲೆ ಹಾಕಿದರೇ, ಡೇವಿಡ್​ ಮಿಲ್ಲರ್​ 30 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸ್​ರ ಸಮೇತ 46 ರನ್​ ಕಲೆ ಹಾಕುವ ಮೂಲಕ ತಂಡದ ಮೊತ್ತವನ್ನು 177ಕ್ಕೆ ಕೊಂಡೊಯ್ದರು. ಗುಜರಾತ್ ಟೈಟಾನ್ಸ್​ ನೀಡಿದ್ದ 178 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ಕಳಪೆ ಆರಂಭವನ್ನು ಪಡೆಯಿತು.

ಆರಂಭಿಕ ಮೂರು ಓವರ್‌ಗಳ ಅಂತರದಲ್ಲಿ ರಾಯಲ್ಸ್​ ತಂಡ ಟಾಪ್​​ ಆರ್ಡರ್​ ಬ್ಯಾಟರ್​ಗಳ ವಿಕೆಟ್‌ಗಳನ್ನು ಕಳೆದುಕೊಂಡಿತು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (1) ಇನ್ನಿಂಗ್ಸ್​ನ ಎರಡನೇ ಓವರನ ಹಾರ್ದಿಕ್​ ಪಾಂಡ್ಯ ಎಸೆತದಲ್ಲಿ ಶುಬ್​ಮನ್​ ಗಿಲ್​ ಗೆ ಕ್ಯಾಚ್​ ನೀಡಿ ಔಟಾದರೇ, ಮೂರನೇ ಓವರ್​ನಲ್ಲಿ ಜೋಸ್ ಬಟ್ಲರ್ (0) ಖಾತೆ ತೆರೆಯದೆ ಪೆವಿಲಿಯನ್​ಗೆ ಮರಳಿದರು. ದೇವದತ್ ಪಡಿಕ್ಕಲ್ (26) ಕೆಲ ಕಾಲ ಕ್ರೀಸ್​ನಲ್ಲಿದ್ದು ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಪ್ರಯತ್ನಿಸಿದರು. ಬಳಿಕ ರಶೀದ್​ ಖಾನ್​ಗೆ ತಮ್ಮ ವಿಕೆಟ್​ ಒಪ್ಪಿಸಿ​ಹೊರ ನಡೆದರು. ಪಡಿಕ್ಕಲ್​ ನಂತರ ಬಂದ ರಿಯಾನ್ ಪರಾಗ್ (5) ಬಹುಬೇಗ ನಿರ್ಗಮಿಸುವ ಮೂಲಕ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಬಳಿಕ ಕ್ರೀಸ್​ಗಿಳಿದ ಸಂಜು ಸ್ಯಾಮ್ಸನ್ ಐದನೇ ವಿಕೆಟ್‌ಗೆ ಶಿಮ್ರಾನ್ ಹೆಟ್ಮೆಯರ್ ಅವರೊಂದಿಗೆ ಬಿರುಸಿನ ಆಟವಾಡಿ 50 ಪ್ಲಸ್ ಜೊತೆಯಾಟವನ್ನು ಆಡುವ ಮೂಲಕ ತಂಡದ ಸ್ಕೋರ್​ ಬೊರ್ಡ್​ ಹೆಚ್ಚಿಸಿದರು.

ನಾಯಕ ಸಂಜು ಸ್ಯಾಮ್ಸನ್ 32 ಎಸೆತಗಳಲ್ಲಿ 3 ಬೌಂಡರಿ 6 ಸಿಕ್ಸರ್ ಸಮೇತ​ 60 ರನ್ ಗಳಿಸಿ ನೂರ್​ ಅಹ್ಮದ್​ಗೆ ವಿಕೆಟ್​ ನೀಡಿ ಪೆವಿಲಿಯನ್​ಗೆ ತೆರಳಿದರು. ಸ್ಯಾಮ್ಸನ್​ ನಿರ್ಗಮನದ ನಂತರ ಕ್ರೀಸ್​​ಗಿಳಿದ ಧ್ರುವ್ ಜುರೆಲ್ (18) ಗಳಿಸಿ ನಿರ್ಗಮಿಸಿದರು. ಕ್ರೀಸ್​ಗಿಳಿದ ಅಶ್ವಿನ್ ಮೂರು ಎಸೆತಗಳಲ್ಲಿ 10 ರನ್​ಗಳಿಸಿ ಪೆವಿಲಿಯನ್​ಗೆ ಮರಳಿದರು. ಮತ್ತೊಂದೆಡೆ ಹೆಟ್ಮೆಯರ್ ಬಿರುಸಿನ ಬ್ಯಾಟಿಂಗ್ ಮುಂದುವರಿಸಿ 26 ಎಸೆತಗಳಲ್ಲಿ 2 ಬೌಂಡರಿ ಮತ್ತು 5 ಸಿಕ್ಸ್​ರ ಸಮೇತ 56 ರನ್​ಗಳಿಸುವ ಮೂಲಕ ಅರ್ಧಶತಕವನ್ನು ಪೂರೈಸಿ ಅಜೇಯರಾಗಿ ಉಳಿದರು. ಅಲ್ಲದೇ ತಂಡವನ್ನು ಗೆಲುವಿನ ದಡ ಸೇರಿಸಿದರು.

ಸ್ಕೋರ್​ ವಿವಿರ, ಗುಜರಾತ್​ ಟೈಟಾನ್ಸ್​: 20 ಓವರ್‌ಗಳಿಗೆ 177-7 (ಶುಭಮನ್​ ಗಿಲ್ 45, ಡೇವಿಡ್ ಮಿಲ್ಲರ್ 46, ಹಾರ್ದಿಕ್​ ಪಾಂಡ್ಯ 28; ಸಂದೀಪ್​ ಶರ್ಮಾ 25ಕ್ಕೆ 2, ಬೋಲ್ಟ್​, ಜಂಪಾ, ಚಹಾಲ್​ ತಲಾ ಒಂದು ವಿಕೆಟ್​)​

ರಾಜಸ್ಥಾನ ರಾಯಲ್ಸ್​: 19.2 ಓವರ್‌ಗಳಿಗೆ 179-7 (ಸಂಜು ಸಾಮ್ಸನ್​ 60, ಶಿಮ್ರಾನ್​ ಹೆಟ್ಮಾಯರ್ 56, ದೇವದತ್​ ಪಡಿಕ್ಕಲ್ 26; ಮೊಹ್ಮದ್​ ಶಮಿ 25ಕ್ಕೆ 3, ರಾಶೀದ್​ ಖಾನ್​ 46ಕ್ಕೆ 2, ಹಾರ್ದಿಕ್​ ಪಾಂಡ್ಯ, ನೂರ್​ ಅಹ್ಮದ್​ ತಲಾ ಒಂದು ವಿಕೆಟ್​)

ಇದನ್ನೂ ಓದಿ:MI vs KKR: ಕಿಶನ್-ಸೂರ್ಯ ಅಬ್ಬರಕ್ಕೆ ಮುಂಬೈಗೆ ಜಯ, ಅಯ್ಯರ್​ ಶತಕ ವ್ಯರ್ಥ

Last Updated : Apr 17, 2023, 9:37 AM IST

ABOUT THE AUTHOR

...view details