ಮುಂಬೈ:ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಸಿಎಸ್ಕೆ ಆರಂಭದಲ್ಲೇ ಆಘಾತ ಎದುರಿಸಿತು. ತಂಡದ ಋತುರಾಜ್ ಗಾಯಕ್ವಾಡ(2) ಔಟಾದರು. ಈ ವೇಳೆ ಮೈದಾನಕ್ಕೆ ಬಂದ ಮೊಯಿನ್ ಅಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ತಾವು ಎದುರಿಸಿದ ಕೇವಲ 19 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿದರು.ಇದರ ಬೆನ್ನಲ್ಲೇ ಕಾನ್ವೆ(16) ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಬಂದ ಜಗದೀಶನ್(1), ರಾಯುಡು(3) ವಿಕೆಟ್ ಕಳೆದದುಕೊಂಡರು. ಇದಾದ ಬಳಿಕ ಒಂದಾದ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ(26) ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿ, ಮೊಯಿನ್ ಅಲಿಗೆ ಸಾಥ್ ನೀಡಿದರು. ಆದರೆ, 19ನೇ ಓವರ್ನಲ್ಲಿ ಚಹಲ್ ಎಸೆದ ಓವರ್ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.
ಅಬ್ಬರಿಸಿದ ಮೊಯಿನ್ ಅಲಿ:ಸಿಎಸ್ಕೆ ಮೇಲಿಂದ ಮೇಲೆ ವಿಕೆಟ್ ಕಳೆದುಕೊಳ್ಳುತ್ತಿದ್ದರೂ, ಏಕಾಂಗಿಯಾಗಿ ಅಬ್ಬರಿಸಿದ ಮೊಯಿನ್ ಅಲಿ ತಂಡ ಸ್ಪರ್ಧಾತ್ಮಕ ಮೊತ್ತ ಗಳಿಸುವಲ್ಲಿ ಯಶಸ್ವಿಯಾದರು. ತಾವು ಎದುರಿಸಿದ 57 ಎಸೆತಗಳಲ್ಲಿ 3 ಸಿಕ್ಸರ್, 13 ಬೌಂಡರಿ ಸಮೇತ 93ರನ್, ಕೊನೆ ಓವರ್ನಲ್ಲಿ ಮ್ಯಾಕೆಗೆ ಬಲಿಯಾದರು. ಈ ಮೂಲಕ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ನಷ್ಟಕ್ಕೆ 150ರನ್ಗಳಿಕೆ ಮಾಡಿತು.
ಆರಂಭದಲ್ಲಿ ರಾಜಸ್ಥಾನ ರಾಯಲ್ಸ್ ಹೆಚ್ಚಿನ ರನ್ ಬಿಟ್ಟುಕೊಟ್ಟರೂ, ತದನಂತರ ಅದಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಯಿತು. ತಂಡದ ಪರ ಮ್ಯಾಕೆ, ಚಹಲ್ ತಲಾ 2 ವಿಕೆಟ್ ಪಡೆದರೆ, ಬೌಲ್ಟ್ ಹಾಗೂ ಅಶ್ವಿನ್ 1 ವಿಕೆಟ್ ಪಡೆದುಕೊಂಡರು.
ಇಂಡಿಯನ್ ಪ್ರೀಮಿಯರ್ ಲೀಗ್ನ 68ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಿವೆ. ಲೀಗ್ ಹಂತದಲ್ಲಿ ಉಭಯ ತಂಡಗಳಿಗೂ ಇದು ಕೊನೆಯ ಪಂದ್ಯವಾಗಿದ್ದು, ಟಾಸ್ ಗೆದ್ದಿರುವ ಧೋನಿ ಬಳಗ ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡಿದೆ. ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿವೆ.