ಶಾರ್ಜಾ, ದುಬೈ:ಪಂಜಾಬ್ ಕಿಂಗ್ಸ್ ನೀಡಿದ್ದ 125 ರನ್ಗಳ ಸಾಧಾರಣ ಮಟ್ಟದ ಗುರಿಯನ್ನು ತಲುಪಲಾಗದ ಸನ್ರೈಸರ್ಸ್ ಹೈದರಾಬಾದ್ ತಂಡ ಹೀನಾಯ ಸೋಲು ಅನುಭವಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಭಾರಿ ಮೊತ್ತದ ರನ್ ಪೇರಿಸಲು ವಿಫಲವಾಯಿತು. 30 ರನ್ಗಳ ಗಡಿಯನ್ನು ಯಾವ ಆಟಗಾರನೂ ಕೂಡ ದಾಟಲಿಲ್ಲ. ಕೆ.ಎಲ್.ರಾಹುಲ್ 21, ಐಡನ್ ಮರ್ಕ್ರಮ್ 27 ರನ್ಗಳನ್ನು ಗಳಿಸಿದ್ದೇ ಅತ್ಯಂತ ದೊಡ್ಡ ಮೊತ್ತವಾಗಿತ್ತು. ಇದರ ಜೊತೆಗೆ ಕ್ರಿಸ್ ಗೇಲ್ 14, ದೀಪಕ್ ಹೂಡಾ 13, ಹರ್ಪ್ರೀತ್ ಬ್ರಾರ್ 18, ನಾಥನ್ ಎಲ್ಲಿಸ್ 12, ಮಯಾಂಕ್ ಅಗರ್ವಾಲ್ 5, ನಿಕೋಲಸ್ ಪೂರನ್ 8 ರನ್ ಮಾತ್ರ ಗಳಿಸಿದ್ದರು.
ಬ್ಯಾಟಿಂಗ್ ವೈಫಲ್ಯದ ನಡುವೆಯೇ 7 ವಿಕೆಟ್ ನಷ್ಟಕ್ಕೆ 125 ರನ್ಗಳನ್ನು ಗಳಿಸಲು ಪಂಜಾಬ್ ತಂಡಕ್ಕೆ ಸಾಧ್ಯವಾಯಿತು. ಪಂಜಾಬ್ ಕಿಂಗ್ಸ್ ಮೇಲೆ ಮಾರಕ ಬೌಲಿಂಗ್ ದಾಳಿ ನಡೆಸಿದ್ದ ಜಾಸನ್ ಹೋಲ್ಡರ್ 4 ಓವರ್ಗಳಲ್ಲಿ 19 ರನ್ ನೀಡಿ 3 ವಿಕೆಟ್ ಪಡೆದರು. ಇನ್ನುಳಿದಂತೆ ರಶೀದ್ ಖಾನ್, ಅಬ್ದುಲ್ ಸಮದ್, ಸಂದೀಪ್ ಶರ್ಮಾ, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದರು.