ಮೊಹಾಲಿ (ಪಂಜಾಬ್) : ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದು ಪಂಜಾಬ್ ಬೌಲಿಂಗ್ ಆಯ್ದುಕೊಂಡಿತು. ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಆಶ್ರಯದಲ್ಲಿರುವ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಮ್ಯಾಚ್ ನಡೆಯುತ್ತಿದೆ.
ಇತ್ತಂಡಗಳ ನಾಯಕರಾದ ಶಿಖರ್ ಧವನ್ ಮತ್ತು ಫಾಫ್ ಡುಪ್ಲೆಸಿಸ್ ಗಾಯದಿಂದ ಬಳಲುತ್ತಿರುವುದರಿಂದ ಪಂಜಾಬ್ ತಂಡವನ್ನು ಸ್ಯಾಮ್ ಕರನ್ ಮತ್ತು ಬೆಂಗಳೂರು ತಂಡವನ್ನು ಮಾಜಿ ನಾಯಕ ವಿರಾಟ್ ಕೊಹ್ಲಿ ಮುನ್ನಡೆಸುತ್ತಿದ್ದಾರೆ. ಡುಪ್ಲೆಸಿಸ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ತಂಡದಲ್ಲಿದ್ದಾರೆ.
ಈ ಹಿಂದಿನ ಪಂದ್ಯದಲ್ಲಿ ಲಕ್ನೋ ವಿರುದ್ಧ ಪಂಜಾಬ್ 2 ವಿಕೆಟ್ಗಳ ಜಯ ಗಳಿಸಿತ್ತು. ಇಂದಿನ ಪಂದ್ಯದಲ್ಲಿ ಪಂಜಾಬ್ ಜಯ ಗಳಿಸಿದರೆ ಪಾಯಿಂಟ್ಸ್ ಟೇಬಲ್ನಲ್ಲಿ ಟಾಪ್ನಲ್ಲಿರುವ ಲಕ್ನೋ ಮತ್ತು ರಾಜಸ್ಥಾನ ತಂಡವನ್ನು ಸರಿಗಟ್ಟಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಹಿಂದಿನ ಪಂದ್ಯದಲ್ಲಿ ಚೆನ್ನೈ ವಿರುದ್ಧ 8 ವಿಕೆಟ್ಗಳಿಂದ ಸೋಲು ಅನುಭವಿಸಿತ್ತು. ಫಾಫ್ ಡುಪ್ಲೆಸಿಸ್ ಮತ್ತು ಗ್ಲೆನ್ ಮಾಕ್ಸ್ವೆಲ್ ಅವರ ಅಬ್ಬರದ ಬ್ಯಾಟಿಂಗ್ ಹೊರತಾಗಿಯೂ ಬೆಂಗಳೂರು ಸೋತು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು.
ಪಂಜಾಬ್ ತಂಡ ಸಿಕಂದರ್ ರಾಜಾ ಮತ್ತು ಕಗಿಸೋ ರಬಾಡ ಅವರನ್ನು ತಂಡದಿಂದ ಕೈಬಿಟ್ಟಿದ್ದು, ನಥಾನ್ ಮತ್ತು ಲಿವಿಂಗ್ ಸ್ಟೋನ್ ತಂಡ ಸೇರಿದ್ದಾರೆ. ಬೆಂಗಳೂರು ತಂಡದಲ್ಲಿ ಡುಪ್ಲೆಸಿಸ್ ಬದಲಾಗಿ ವೈಶಾಖ್ ವಿಜಯಕುಮಾರ್ ಆಡುತ್ತಿದ್ದಾರೆ.