ಕರ್ನಾಟಕ

karnataka

ETV Bharat / sports

ಹೈದರಾಬಾದ್ ಮಣಿಸಿದ ಪಂಜಾಬ್‌ಗೆ ಪಾಯಿಂಟ್‌ ಪಟ್ಟಿಯಲ್ಲಿ 6ನೇ ಸ್ಥಾನ - ಐಪಿಎಲ್ ಹೈಲೈಟ್ಸ್​

ಈ ಗೆಲುವಿನ ಮೂಲಕ ಪಂಜಾಬ್‌ ಕಿಂಗ್ಸ್‌ ಪ್ರಸಕ್ತ ಐಪಿಎಲ್‌ ಆವೃತ್ತಿಯ ಪಾಯಿಂಟ್‌ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದರೆ, ಸನ್‌ರೈಸರ್ಸ್‌ 8 ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

Punjab Kings won the match against Sunrisers Hyderabad, Indian Premier League 2022, Sunrisers Hyderabad lost match,  Punjab Kings won the match,  Mumbai Wankhede Stadium, IPL highlights, ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ  ಪಂದ್ಯ ಗೆದ್ದ  ಪಂಜಾಬ್ ಕಿಂಗ್ಸ್, ಇಂಡಿಯನ್ ಪ್ರೀಮಿಯರ್ ಲೀಗ್ 2022, ಸನ್‌ರೈಸರ್ಸ್ ಹೈದರಾಬಾದ್​ ತಂಡಕ್ಕೆ ಸೋಲು, ಪಂಜಾಬ್ ಕಿಂಗ್ಸ್ ತಂಡಕ್ಕೆ ಗೆಲುವು, ಮುಂಬೈ ವಾಂಖೆಡೆ ಸ್ಟೇಡಿಯಂ, ಐಪಿಎಲ್ ಹೈಲೈಟ್ಸ್​,
ಕೃಪೆ: IPL twitter

By

Published : May 23, 2022, 6:56 AM IST

ಮುಂಬೈ: ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಮಣಿಸುವ ಮೂಲಕ ಪಂಜಾಬ್‌ ಕಿಂಗ್ಸ್‌ ಈ ಸಲದ ತನ್ನ ಐಪಿಎಲ್‌ ಅಭಿಯಾನ ಮುಗಿಸಿತು. ಈಗಾಗಲೇ ಸತತ ಸೋಲಿನ ಹೊಡೆತ ತಿಂದಿರುವ ಹೈದರಾಬಾದ್‌ ದೇಶಿ ಚುಟುಕು ಟೂರ್ನಿಯ ಅಂತಿಮ ಲೀಗ್‌ ಪಂದ್ಯದಲ್ಲಿ ಮತ್ತೊಂದು ಆಘಾತ ಅನುಭವಿಸಿ ಟೂರ್ನಿಯಿಂದ ನಿರ್ಗಮಿಸಿತು.

ಮೊದಲು ಬ್ಯಾಟ್‌ ಮಾಡಿದ ಹೈದರಾಬಾದ್‌ 8 ವಿಕೆಟ್‌ ನಷ್ಟಕ್ಕೆ 157 ರನ್‌ ಕಲೆ ಹಾಕಿತು. ಆದರೆ ಎದುರಾಳಿ ತಂಡದಲ್ಲಿ ಲಿಯಾಮ್‌ ಲಿವಿಂಗ್‌ಸ್ಟೋನ್‌ರಂಥ ಘಟಾನುಘಟಿ ಆಲ್‌ರೌಂಡರ್‌ ಇರುವಾಗ ಈ ಸ್ಕೋರ್‌ ಏನೇನೂ ಸಾಲದಾಯಿತು. ಲಿವಿಂಗ್‌ಸ್ಟೋನ್‌ ತಾನು ಎದುರಿಸಿದ 22 ಎಸೆತಗಳಲ್ಲಿ 49 ರನ್‌ ಸಂಗ್ರಹಿಸಿ ಹೈದರಾಬಾದ್‌ಗೆ ಸೋಲು ಖಾತ್ರಿಗೊಳಿಸಿದರು. ಅವರದ್ದೇ ಬ್ಯಾಟ್‌ ಮೂಲಕ 1000ನೇ ಸಿಕ್ಸರ್‌ ಕೂಡಾ ದಾಖಲಾಯಿತು.

ಇದನ್ನೂ ಓದಿ:ಐಪಿಎಲ್​ ಎಲಿಮಿನೇಟರ್​ನಲ್ಲಿ ಆರ್​ಸಿಬಿ ಫೈಟ್: ಪ್ಲೇ ಆಫ್ ಹಂತ​, ಫೈನಲ್​ ಮಾಹಿತಿ ಇಲ್ಲಿದೆ

ಇನ್ನುಳಿದಂತೆ, ಶಿಖರ್ ಧವನ್ 32 ಎಸೆತಗಳಲ್ಲಿ 39, ಜಿತೇಶ್ ಶರ್ಮಾ 7 ಎಸೆತಗಳಲ್ಲಿ 19 ರನ್‌ ಕೊಡುಗೆಯ ಮುಖೇನ ಕೇವಲ 15.1 ಓವರುಗಳಲ್ಲೇ ಪಂಜಾಬ್ ಗೆಲುವಿನ ಗುರಿ ತಲುಪಿತು. 2014 ರ ಬಳಿಕ ಪಂಜಾಬ್‌ ತಂಡ ಐಪಿಎಲ್‌ನಲ್ಲಿ ಪ್ಲೇಆಫ್‌ ಘಟ್ಟದಲ್ಲಿ ಸಂಭ್ರಮಿಸಿದ್ದೇ ಇಲ್ಲ. ಈ ಬಾರಿ ಹೈದರಾಬಾದ್‌ ತಂಡವನ್ನು ಮಣಿಸುವುದರೊಂದಿಗೆ ಪಾಯಿಂಟ್‌ ಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ಪಂಜಾಬ್‌ ಕಿಂಗ್ಸ್‌ ಬೌಲರ್‌ಗಳು ಕರಾರುವಾಕ್ ದಾಳಿ ಸಂಯೋಜಿಸಿದರು. ಅರ್ಷ್‌ದೀಪ್‌ ತನ್ನ ನಾಲ್ಕು ಓವರುಗಳಲ್ಲಿ ಯಾವುದೇ ವಿಕೆಟ್‌ ಗಳಿಸದಿದ್ದರೂ (0/24) ಶಿಸ್ತಿನ ಬೌಲಿಂಗ್ ಪ್ರದರ್ಶನ ನೀಡಿದರು. ಹರ್‌ಪ್ರೀತ್‌ ಬ್ರಾರ್‌ ನಾಲ್ಕು ಓವರುಗಳಲ್ಲಿ 26 ರನ್ ನೀಡಿ 3 ವಿಕೆಟ್‌ ಕಬಳಿಸಿ ಗಮನ ಸೆಳೆದರು.

ಇದನ್ನೂ ಓದಿ:ಉಮ್ರಾನ್​ ಮಲಿಕ್​ ಭಾರತ ತಂಡಕ್ಕೆ ಆಯ್ಕೆ: ಕಾಶ್ಮೀರದಲ್ಲಿ ಸಂಭ್ರಮ- ವಿಡಿಯೋ

ಹೈದರಾಬಾದ್‌ ತಂಡದ ಅತ್ಯುತ್ತಮ ಬ್ಯಾಟರ್‌ ಅಭಿಷೇಕ್‌ ಶರ್ಮಾ 32 ಎಸೆತಗಳಲ್ಲಿ 43 ರನ್‌ ಚಚ್ಚಿದರು. ತಂಡ ಉತ್ತಮ ಆರಂಭವನ್ನೇನೋ ಪಡೆಯತು. ಆದ್ರೆ ಅದನ್ನೇ ದೊಡ್ಡ ಟಾರ್ಗೆಟ್‌ ರೀತಿ ಪರಿವರ್ತಿಸಲು ಇತರೆ ಬ್ಯಾಟರ್‌ಗಳಿಗೆ ಸಾಧ್ಯವಾಗಲಿಲ್ಲ. ತ್ರಿಪಾಠಿ 20 ರನ್‌ಗಳ ಮೂಲಕ ಐಪಿಎಲ್‌ನಲ್ಲಿ 400 ರನ್‌ಗಳ ಗಡಿ ತಲುಪಿದರು. ಇನ್ನುಳಿದಂತೆ ರೊಮಾರಿಯೋ ಶೆಫಾರ್ಡ್‌ 15 ಎಸೆತಗಳಲ್ಲಿ 26 ರನ್‌ ಮತ್ತು ವಾಷಿಂಗ್ಟನ್ ಸುಂದರ್‌ 19 ಎಸೆತಗಳಲ್ಲಿ 25 ರನ್ ಕಲೆ ಹಾಕಿದರು.

ABOUT THE AUTHOR

...view details