ಕರ್ನಾಟಕ

karnataka

ETV Bharat / sports

ಪೃಥ್ವಿ ಶಾರನ್ನು ಕೈ ಬಿಟ್ಟ ಡೆಲ್ಲಿ ಕ್ಯಾಪಿಟಲ್ಸ್​​: ಆದರೂ ಆರಂಭಿಕ ಜೊತೆಯಾಟದ ಕೊರತೆ ಎದುರಿಸಿದ ಡಿಸಿ - ETV Bharath Kannada news

ಡೆಲ್ಲಿ ಕ್ಯಾಪಿಟಲ್ಸ್​ ಆರಂಭಿಕ ಜೊತೆಯಾಟದ ಕೊರತೆಯನ್ನು ನೀಗಿಸಲು ಪೃಥ್ವಿ ಶಾರಿಗೆ ಕೊಕ್​ ನೀಡಿದೆ. ಆದರೆ ಯೋಜನೆ ಮಾತ್ರ ಯಶಸ್ವಿಯಾಗಿಲ್ಲ.

Etv Bharat
Etv Bharat

By

Published : Apr 24, 2023, 11:06 PM IST

ಹೈದರಾಬಾದ್​ (ತೆಲಂಗಾಣ): ಡೆಲ್ಲಿ ಕ್ಯಾಪಿಟಲ್ಸ್​ ಇಂದು ಸನ್​ ರೈಸರ್ಸ್​ ಹೈದರಾಬಾದ್​ ವಿರುದ್ಧ ಆಡುತ್ತಿದೆ. ತಂಡದಲ್ಲಿ ಮಹತ್ತರ ಬದಲಾವಣೆಯನ್ನು ನಾಯಕ ಡೇವಿಡ್​ ವಾರ್ನರ್​ ಮಾಡಿದ್ದಾರೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್​ನ ವೀಕೆನ್ಸ್​ನ್ನು ಕಮ್​ಬ್ಯಾಕ್ ಮಾಡುವ ನಿರ್ಧಾರ ಮಾಡಿ ಕಣಕ್ಕಿಳಿದರು. ಆದರೆ ಅದು ಸಹ ಯಶಸ್ಸು ಕಾಣಲಿಲ್ಲ.

ಡೆಲ್ಲಿ ಕ್ಯಾಪಿಟಲ್ಸ್​ ಏಳನೇ ಪಂದ್ಯ ಆಡುತ್ತಿದ್ದು, ಮೊದಲ ಐದು ಪಂದ್ಯಗಳಲ್ಲಿ ಹೀನಾಯ ಸೋಲನ್ನು ಎದುರಿಸಿಕೊಂಡು ಬಂದಿತ್ತು. ಆದರೆ ಕಳೆದ ಕೋಲ್ಕತ್ತಾ ನೈಟ್​ ರೈಡರ್ಸ್​ (ಕೆಕೆಆರ್​) ವಿರುದ್ಧದ ಪಂದ್ಯದಲ್ಲಿ ಮೊದಲ ಗೆಲುವನ್ನು ಒದ್ದಾಡಿ ಸಾಧಿಸಿತು. ಆರನೇ ಪಂದ್ಯದಲ್ಲಿ ಲೀಗ್​ನ ಮೊದಲ ಗೆಲುವನ್ನು ಡಿಸಿ ಕಂಡಿತ್ತು.

ಕೆಕೆಆರ್​ ಪಂದ್ಯದ ಗೆಲುವಿನ ನಂತರ ಮಾತನಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್​ನ ನಿರ್ದೇಶಕ ಸೌರವ್​ ಗಂಗೂಲಿ, ಬೌಲಿಂಗ್​ನಲ್ಲಿ ತಂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಬ್ಯಾಟಿಂಗ್​ನಲ್ಲಿ ತಂಡ ಇನ್ನೂ ಲಯ ಕಂಡುಕೊಂಡಿಲ್ಲ. ಈ ಬಗ್ಗೆ ಹೆಚ್ಚಿನ ಗಮನ ಹರಿಸುವ ಅಗತ್ಯ ಇದೆ. ನಾಯಕ ಡೇವಿಡ್​ ವಾರ್ನರ್​ ಅವರ ಮಾರ್ಗದರ್ಶನದಲ್ಲ ತಂಡವಾಗಿ ಕಾರ್ಯ ನಿರ್ವಹಿಸ ಬೇಕು ಎಂದು ಸಲಹೆ ಇತ್ತಿದ್ದರು.

ಡೆಲ್ಲಿ ಕ್ಯಾಪಿಟಲ್ಸ್​ಗೆ ಪವರ್​ ಪ್ಲೇ ಸಮಸ್ಯೆ: ಡೆಲ್ಲಿ ಕ್ಯಾಪಿಟಲ್ಸ್​ ಆರು ಪಂದ್ಯಗಳಲ್ಲಿ ಉತ್ತಮ ಆರಂಭವನ್ನು ಕಂಡಿಲ್ಲ. ಪವರ್​ ಪ್ಲೇ ಮುಗಿಯುವ ವೇಳೆಗೆ ಸರಾಸತಿ ಮೂರು ವಿಕೆಟ್​ಗಳನ್ನು ಕಳೆದುಕೊಂಡಿದೆ. ಹೀಗಾಗಿ ಆರಂಭಿಕ ಜೊತೆಯಾಟವನ್ನು ಉತ್ತಮ ಗೊಳಿಸುವ ಚಿಂತನೆಯಲ್ಲಿ ಇಂದು ಪೃಥ್ವಿ ಶಾ ಅವರನ್ನು ಕೈಬಿಡಲಾಯಿತು. ಅಚ್ಚರಿ ಎಂದರೆ ಶಾ ಅವರಿಗೆ ಇಂಪ್ಯಾಕ್ಟ್​​ ಪ್ಲೇಯರ್​ ಜಾಗದಲ್ಲೂ ಸ್ಥಳ ನೀಡದೇ ಬೇಚ್​ನಲ್ಲಿ ಕೂರಿಸಲಾಗಿದೆ. ಅವರ ಬದಲಿ ಇಂದು ಆರಂಭಿಕರಾಗಿ ಫಿಲಿಫ್​ ಸಾಲ್ಟ್​ ಅವರನ್ನು ಆಡಿಸಲಾಗಿದೆ.

ಶೂನ್ಯಕ್ಕೆ ಔಟ್​ ಆದ ಸಾಲ್ಟ್​: ಆರಂಭಿಕ ಜೋಡಿ ಬದಲಾಯಿಸಿದ ಡೆಲ್ಲಿ ಕ್ಯಾಪಿಟಲ್ಸ್​ಗೆ ಮತ್ತೆ ಆರಂಭಿಕ ಆಘಾತ ಎದುರಾಯಿತು. ಶಾ ಬದಲಿಯಾಗಿ ವಾರ್ನರ್​ ಜೊತೆಗೆ ಕಣಕ್ಕಿಳಿದ ಫಿಲಿಫ್​ ಸಾಲ್ಟ್​ ಸಹ ಜೊತೆಯಾಟ ಮಾಡಲಿಲ್ಲ. ಮೊದಲ ಓವರ್​ನಲ್ಲಿ ಶೂನ್ಯಕ್ಕೆ ವಿಕೆಟ್​ ಕೊಟ್ಟರು. ಇದರಿಂದ ಮತ್ತೆ ಆರಂಭಿಕ ಜೊತೆಯಾಟ ಡೆಲ್ಲಿಗೆ ಬರಲಿಲ್ಲ. ಅದರ ಜೊತೆಗೆ ಪವರ್​ ಪ್ಲೇ ಮುಗಿಯುವ ವೇಳೆಗೆ 2 ವಿಕೆಟ್​ ಪತನವಾಗಿತ್ತು ಮತ್ತು 49 ರನ್​ ಮಾತ್ರ ಗಳಿಸಿತ್ತು. ಇದರಿಂದ ಹೊಸ ಯೋಜನೆಯೂ ಕ್ಯಾಪಿಟಲ್ಸ್​ ಕೈ ಹಿಡಿಯಲಿಲ್ಲ.

ಶಾ ಸತತ ವೈಫಲ್ಯ: ಪೃಥ್ವಿ ಶಾ ಈ ಆವೃತ್ತಿಯಲ್ಲಿ ಅತ್ಯಂತ ಕೆಟ್ಟ ಪ್ರದರ್ಶನ ನೀಡಿದ್ದಾರೆ. ಶಾ 6 ಪಂದ್ಯಗಳಲ್ಲಿ 7.83 ಸರಾಸರಿಯಲ್ಲಿ ಕೇವಲ 47 ರನ್‌ ಗಳಿಸಿದ್ದಾರೆ, ಗರಿಷ್ಠ ಸ್ಕೋರ್ ಕೇವಲ 15 ಆಗಿದೆ. ಮೊದಲ ಪಂದ್ಯ 12, 7, 0, 15, 0 ಮತ್ತು 13 ರನ್​ ಗಳಿಸಿದ್ದಾರೆ.

ಇದನ್ನೂ ಓದಿ:SRH vs DC: ಸನ್​ ರೈಸರ್ಸ್​ ಹೈದರಾಬಾದ್​ಗೆ 145 ರನ್​ನ ಸರಳ ಗುರಿ ನೀಡಿದ ಡಿಸಿ

ABOUT THE AUTHOR

...view details