ಅಬುದಾಬಿ(ಯುಎಇ):ಟಿ-20 ಕ್ರಿಕೆಟ್ನಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ನ ದೈತ್ಯ ಆಟಗಾರ ಕೀರನ್ ಪೊಲಾರ್ಡ್ ಮತ್ತೊಂದು ದಾಖಲೆ ನಿರ್ಮಾಣ ಮಾಡಿದ್ದಾರೆ. ಈ ಸಾಧನೆ ಮಾಡಿರುವ ಮೊದಲ ಕ್ರಿಕೆಟಿಗ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಟಿ20 ಕ್ರಿಕೆಟ್ ಇತಿಹಾಸದಲ್ಲಿ 10ಕ್ಕೂ ಅಧಿಕ ಸಾವಿರ ರನ್ಗಳಿಕೆ ಮಾಡಿರುವ ಈ ಪ್ಲೇಯರ್, 300 ವಿಕೆಟ್ ಕಬಳಿಸಿದ್ದಾರೆ. ಈ ಸಾಧನೆ ಮಾಡಿರುವ ಮೊದಲ ಕ್ರಿಕೆಟಿಗನಾಗಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧ ಇಂದು ನಡೆದ ಪಂದ್ಯದಲ್ಲಿ 7ನೇ ಓವರ್ನಲ್ಲಿ ಕ್ರಿಸ್ ಗೇಲ್ ಔಟ್ ಮಾಡಿ ಟಿ-20ಯಲ್ಲಿ 299ನೇ ವಿಕೆಟ್ ಪಡೆದ ಸಾಧನೆ ಮಾಡಿದ್ದ ಪೊಲಾರ್ಡ್, ತದ ನಂತರ ಅದೇ ಓವರ್ನಲ್ಲಿ ಪಂಜಾಬ್ ಕ್ಯಾಪ್ಟನ್ ಕೆ ಎಲ್ ರಾಹುಲ್ ವಿಕೆಟ್ ಪಡೆದು 300 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.