ಕರ್ನಾಟಕ

karnataka

ETV Bharat / sports

‘ಸೊಂಟದ ವಿಷ್ಯಾ, ಬೇಡವೋ ಶಿಷ್ಯಾ‘.. ಐಪಿಎಲ್​ನಿಂದ ಹೊರ ಬಿದ್ದ ಕೋಲ್ಕತ್ತಾ ತಂಡದ ವೇಗಿ ಕಮ್ಮಿನ್ಸ್​ - ಕೋಲ್ಕತ್ತಾ ನೈಟ್ ರೈಡರ್ಸ್ ಆಲ್ ರೌಂಡರ್ ಪ್ಯಾಟ್ ಕಮ್ಮಿನ್ಸ್ ಸುದ್ದಿ

ಕೋಲ್ಕತ್ತಾ ನೈಟ್ ರೈಡರ್ಸ್ ವೇಗಿ ಪ್ಯಾಟ್ ಕಮ್ಮಿನ್ಸ್ ಸೊಂಟದ ನೋವಿನ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಈ ಬಾರಿಯ ಐಪಿಎಲ್​ನಿಂದ ದೂರ ಉಳಿಯಲಿದ್ದಾರೆ. ಅವರ ಅನುಪ ಸ್ಥಿತಿ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡಕ್ಕೆ ಕಾಡಲಿದೆ..

Pat Cummins leaves IPL 2022 early with hip injury, Pat Cummins ruled out of IPL 2022, Kolkata Knight Riders all-rounder Pat Cummins news, IPL 2022, ಸೊಂಟದ ಗಾಯದಿಂದ ಐಪಿಎಲ್​ನ ತೊರೆಯಲಿರುವ ಪ್ಯಾಟ್ ಕಮ್ಮಿನ್ಸ್, ಐಪಿಎಲ್​ನಿಂದ ಹೊರಗುಳಿದ ಪ್ಯಾಟ್ ಕಮ್ಮಿನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಆಲ್ ರೌಂಡರ್ ಪ್ಯಾಟ್ ಕಮ್ಮಿನ್ಸ್ ಸುದ್ದಿ, ಐಪಿಎಲ್​ 2022,
ಐಪಿಎಲ್​ನಿಂದ ಹೊರ ಬಿದ್ದ ಕೋಲ್ಕತ್ತಾ ತಂಡದ ವೇಗಿ ಕಮ್ಮಿನ್ಸ್

By

Published : May 13, 2022, 1:49 PM IST

ಮುಂಬೈ :ಸೊಂಟದ ಗಾಯದಿಂದ ಬಳಲುತ್ತಿರುವ ಕೋಲ್ಕತ್ತಾ ನೈಟ್ ರೈಡರ್ಸ್ ವೇಗಿ ಪ್ಯಾಟ್ ಕಮ್ಮಿನ್ಸ್ 15ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್ ಲೀಗ್​ನ ಉಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಸೊಂಟದ ಗಾಯದಿಂದ ಚೇತರಿಸಿಕೊಳ್ಳಲು ಪ್ಯಾಟ್​ ಕಮ್ಮಿನ್ಸ್​ ತಮ್ಮ ಸ್ವದೇಶಕ್ಕೆ ತೆರಳಲು ಇಚ್ಛಿಸಿದ್ದಾರೆ ಎಂದು ವರಿದಿಯಾಗಿದೆ.

ಮಾಹಿತಿಗಳ ಪ್ರಕಾರ, ಪ್ಯಾಟ್ ಕಮ್ಮಿನ್ಸ್ ಸೊಂಟದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದ್ರೆ, ಈ ಗಾಯ ಅಷ್ಟು ಗಂಭೀರವಾಗಿಲ್ಲ ಎಂದು ತಿಳಿದು ಬಂದಿದೆ. ಆದರೆ, ಮುಂಬರುವ ಪಂದ್ಯಗಳ ದೃಷ್ಟಿಯಿಂದ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗ್ತಿದೆ.

ಓದಿ:ಯುಎಇ ಟಿ20 ಲೀಗ್‌: ಅಬು ಧಾಬಿ ಫ್ರಾಂಚೈಸಿ ಖರೀದಿಸಿದ ಕೋಲ್ಕತಾ ನೈಟ್‌ರೈಡರ್ಸ್

ಪ್ಯಾಟ್ ಕಮ್ಮಿನ್ಸ್​ರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ₹7.25 ಕೋಟಿಗೆ ಬಿಡ್​ ಮಾಡಿ ತನ್ನ ತಂಡಕ್ಕೆ ಕರೆದುಕೊಂಡಿತ್ತು. ಮೊದಲು ಅವರು ತಂಡದಲ್ಲಿ ಬೆಂಚ್ ಕಾಯ್ದಿದ್ದರು. ಬಳಿಕ ತಂಡದ 11ರ ಬಳಗದಲ್ಲಿ ಸ್ಥಾನದ ಪಡೆದಿದ್ದ ಅವರು, ಉತ್ತಮ ಪ್ರದರ್ಶನ ನೀಡಿದರು. ಮುಂಬೈ ಇಂಡಿಯನ್ಸ್ ವಿರುದ್ಧ 4 ಓವರ್​ಗಳಿಗೆ 22 ರನ್​ಗಳನ್ನು ನೀಡಿ 3 ವಿಕೆಟ್​ ಕಬಳಿಸಿ ಮಿಂಚಿದ್ದರು. ಆ ಪಂದ್ಯವನ್ನ ಕೋಲ್ಕತ್ತಾ ನೈಟ್​ ರೈಡರ್ಸ್​​ 52 ರನ್​ಗಳಿಂದ ಗೆಲುವು ಸಾಧಿಸಿತ್ತು.

ಈ ಬಾರಿಯ ಐಪಿಎಲ್​ನಲ್ಲಿ ಪ್ಯಾಟ್​ ಕಮ್ಮಿನ್ಸ್​ ನಿಸ್ಸಂದೇಹವಾಗಿ ಆಡುತ್ತಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಪ್ಲೇ ಆಫ್‌ಗೆ ಅರ್ಹತೆ ಪಡೆಯುವ ಅವಕಾಶ ಕಡಿಮೆ ಇದೆ. ಸೊಂಟದ ಸಮಸ್ಯೆ ಎದುರಿಸುತ್ತಿರುವ ಕಮ್ಮಿನ್ಸ್​​ ತಮ್ಮ ಆರೋಗ್ಯ ಚೇತರಿಕೆಗೆ ಹದಿನೈದು ದಿನಗಳನ್ನು ತೆಗೆದುಕೊಳ್ಳುವ ನೀರಿಕ್ಷೆಯಿದೆ. ಪ್ಯಾಟ್ ಕಮ್ಮಿನ್ಸ್ ಶ್ರೀಲಂಕಾ ವಿರುದ್ಧದ ಮೂರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಆದ್ರೆ, ಏಕದಿನ ಮತ್ತು ಟೆಸ್ಟ್ ಸರಣಿಗಾಗಿ ತಮ್ಮ ತಂಡವನ್ನು ಸೇರಿಕೊಳ್ಳಲಿದ್ದಾರೆ.

ABOUT THE AUTHOR

...view details