ಚೆನ್ನೈ: ಕಳೆದ ಮೂರು ಐಪಿಎಲ್ ಋತುಗಳಲ್ಲಿ ವೈಫಲ್ಯ ಅನುಭವಿಸಿದ ಬಳಿಕ ಬುಧವಾರ ತಮ್ಮ ಮೊದಲ ಐಪಿಎಲ್ ಅರ್ಧಶತಕ ದಾಖಲಿಸಿದ ಗ್ಲೆನ್ ಮ್ಯಾಕ್ಸ್‌ವೆಲ್, ಹೊಸ ಫ್ರ್ಯಾಂಚೈಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿನೊಂದಿಗೆ ಹೊಸದಾಗಿ ಕಂಡುಕೊಂಡ ಫಾರ್ಮ್ ಮತ್ತು ಆತ್ಮವಿಶ್ವಾಸವನ್ನು ಮೆಲುಕು ಹಾಕಿ, ಆಸ್ಟ್ರೇಲಿಯಾ ಪರ ತಾನು ವಹಿಸುವ ಪಾತ್ರಕ್ಕೆ ಹೋಲಿಸಿಕೊಂಡರು.
ಐಪಿಎಲ್ 2020ರಲ್ಲಿ ಕೇವಲ 15 ರನ್ಗಳ ಸರಾಸರಿಯಲ್ಲಿ 13 ಪಂದ್ಯಗಳಲ್ಲಿ 108 ಮೊತ್ತ ಕಲೆಹಾಕಿದ್ದರು ಮ್ಯಾಕ್ಸ್‌ವೆಲ್. ಇದರಿಂದಾಗಿ ಈ ಋತುವಿಗೂ ಮುನ್ನ ಪಂಜಾಬ್ ಫ್ರ್ಯಾಂಚೈಸ್ ಅವರನ್ನು ಕೈಬಿಟ್ಟಿದ್ದರು. ತಕ್ಷಣವೇ ಆರ್‌ಸಿಬಿ ಮಧ್ಯಮ ಕ್ರಮಾಂಕದ 4ನೇ ಬ್ಯಾಟಿಂಗ್ ಸ್ಲಾಟ್‌ಗೆ ಅವರನ್ನು ಆಯ್ದುಕೊಂಡಿತ್ತು.
ನಿನ್ನೆ ಹೈದ್ರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ 41 ಎಸೆತಗಳಲ್ಲಿ 59 ರನ್ ಬಾರಿಸಿ, ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.