ಕರ್ನಾಟಕ

karnataka

ETV Bharat / sports

IPL 2023 MI vs CSK: ಟಾಸ್​ ಗೆದ್ದು ಎಂಎಸ್​ಡಿ ಬೌಲಿಂಗ್​ ಅಯ್ಕೆ.. ಬೆನ್​ ಸ್ಟೋಕ್ಸ್, ಆರ್ಚರ್​​ಗೆ ಇಂಜುರಿ - ETV Bharath Kannada news

ಮುಂಬೈ ವಾಂಖೆಡೆಯಲ್ಲಿ ಟಾಸ್​ ಗೆದ್ದಿರುವ ಎಂಎಸ್​ ಧೋನಿ ಮುಂಬೈ ಇಂಡಿಯನ್ಸ್​ಗೆ ಬ್ಯಾಟಿಂಗ್​ ಆಹ್ವಾನ ನೀಡಿದ್ದಾರೆ.

IPL 2023 MI vs CSK: ಟಾಸ್​ ಗೆದ್ದು ಬೌಲಿಂಗ್​ ಆಯ್ದ ಎಂಎಸ್​ಡಿ..
IPL 2023 MI vs CSK: ಟಾಸ್​ ಗೆದ್ದು ಬೌಲಿಂಗ್​ ಆಯ್ದ ಎಂಎಸ್​ಡಿ..

By

Published : Apr 8, 2023, 7:18 PM IST

Updated : Apr 8, 2023, 7:46 PM IST

ಮುಂಬೈ (ಮಹಾರಾಷ್ಟ್ರ): ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಮುಂಬೈ ಇಂಡಿಯನ್ಸ್​ ನಡುವೆ ಇಂಡಿಯನ್​​ ಪ್ರೀಮಿಯರ್​ ಲೀಗ್​ನ 12ನೇ ಪಂದ್ಯ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಟಾಸ್​ ಗೆದ್ದ ಚೆನ್ನೈ ಸೂಪರ್ ​ಕಿಂಗ್ಸ್ ನಾಯಕ ಎಂಎಸ್​ ಧೋನಿ ಕ್ಷೇತ್ರರಕ್ಷಣೆ ಆಯ್ಕೆ ಮಾಡಿಕೊಂಡಿದ್ದಾರೆ. ಚೆನ್ನೈ ಈವರೆಗೆ ಒಂದು ಸೋಲು ಒಂದು ಗೆಲುವು ಕಂಡಿದ್ದರೆ, ಮುಂಬೈ ಪ್ರಥಮ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಸೋತಿದ್ದು, ಇಂದು ತವರಿನಲ್ಲಿ ಎರಡನೇ ಪಂದ್ಯ ಗೆಲ್ಲುವ ಗುರಿ ಹೊಂದಿದೆ.

ಚೆನ್ನೈ ತಂಡದಲ್ಲಿ ಎರಡು ಬದಲಾವಣೆಗಳಾಗಿದ್ದು, ಬೆನ್ ಸ್ಟೋಕ್ಸ್‌ ಗಾಯ ಕಾರಣ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಮೋಯಿನ್​ ಅಲಿ ಸಹ ಈ ಪಂದ್ಯವನ್ನು ಆಡುತ್ತಿಲ್ಲ ಅವರ ಬದಲಿಯಾಗಿ ಅಜಿಂಕ್ಯ ರೆಹಾನೆ ಮತ್ತು ಪ್ರಿಟೋರಿಯಸ್ ಕಣಕ್ಕಿಳಿಯುತ್ತಿದ್ದಾರೆ. ಮುಂಬೈನ ಜೋಫ್ರಾ ಆರ್ಚರ್​ ಸಹ ಗಾಯಕ್ಕೆ ತುತ್ತಾಗಿದ್ದು, ಗಂಭೀರತೆಗೂ ಮೊದಲು ರೆಸ್ಟ್​ ನೀಡಲಾಗಿದೆ ಎಂದು ನಾಯಕ ರೋಹಿತ್​ ತಿಳಿಸಿದ್ದಾರೆ.

ಎರಡು ಸೀಸನ್​ನಲ್ಲಿ ವಿಫಲತೆ ಎದುರಿಸುತ್ತಿರುವ ಉಭಯ ತಂಡಗಳು:2022ರ ಆವೃತ್ತಿಯಲ್ಲಿ ಚೆನ್ನೈ 9 ಹಾಗೂ ಮುಂಬೈ ಇಂಡಿಯನ್ಸ್​ 10ನೇ ಸ್ಥಾನವನ್ನು ಅಂಕಪಟ್ಟಿಯಲ್ಲಿ ಗಳಿಸಿತ್ತು. 14 ಪಂದ್ಯದಲ್ಲಿ ಉಭಯ ತಂಡಗಳು ಕೇವಲ 4ರಲ್ಲಿ ಮಾತ್ರ ಗೆಲುವು ಸಾಧಿಸಿದ್ದವು. 15 ವರ್ಷದ ಐಪಿಎಲ್​ನಲ್ಲಿ ಇತ್ತಂಡಗಳು ಅತೀ ಹೆಚ್ಚು ಪ್ರಶಸ್ತಿ ಗೆದ್ದ ದಾಖಲೆಯನ್ನು ಹೊಂದಿವೆ. ಮುಂಬೈ ಐದು ಬಾರಿ ಜಯಿಸಿದ್ದರೆ, ಚೆನ್ನೈ 4 ಬಾರಿ ಚಾಂಪಿಯನ್​ ಆಗಿದೆ. ಆದರೆ ಈಗ ಎರಡೂ ತಂಡ ತನ್ನ ಚಾರ್ಮ್​ಅನ್ನು ಕಳೆದುಕೊಂಡಿದೆ.

ಐಪಿಎಲ್​ಗೆ ಗಾಯದ ಬರೆ:ಇತ್ತೀಚೆಗೆ ಚೇತರಿಸಿಕೊಂಡು ತಂಡ ಸೇರಿರುವ ಜೋಫ್ರಾ ಆರ್ಚರ್​ ಗಾಯಕ್ಕೆ ತುತ್ತಾಗಿದ್ದಾರೆ ಎಂದು ರೋಹಿತ್​ ಶರ್ಮಾ ಹೇಳಿದ್ದಾರೆ. ಅದರ ಜೊತೆಗೆ ಗಂಭೀರತೆ ಪಡೆದುಕೊಳ್ಳುವ ಮೊದಲು ಮುನ್ನೆಚ್ಚರಿಕೆಯ ಕ್ರಮವಾಗಿ ವಿಶ್ರಾಂತಿ ನೀಡಿರುವುದಾಗಿ ತಿಳಿಸಿದ್ದಾರೆ. ಚೆನ್ನೈ ತಂಡದ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ ಸಹ ಗಾಯಕ್ಕೊಳಗಾಗಿದ್ದಾರೆ ಎಂದು ಧೋನಿ ಹೇಳಿದ್ದು, ಈ ಕಾರಣ ಇಂದು ಅವರೂ ಆಡುತ್ತಿಲ್ಲ.

ತಂಡಗಳು ಇಂತಿವೆ..: ಮುಂಬೈ ಇಂಡಿಯನ್ಸ್​:ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್(ವಿಕೆಟ್​ ಕೀಪರ್​), ಕ್ಯಾಮರೂನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ಟ್ರಿಸ್ಟಾನ್ ಸ್ಟಬ್ಸ್, ಅರ್ಷದ್ ಖಾನ್, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್

ಮುಂಬೈ ಇಂಡಿಯನ್ಸ್ ಸಬ್ಸ್: ರಮಣದೀಪ್ ಸಿಂಗ್, ಸಂದೀಪ್ ವಾರಿಯರ್, ಅರ್ಜುನ್ ತೆಂಡೂಲ್ಕರ್, ಕುಮಾರ್ ಕಾರ್ತಿಕೇಯ, ನೆಹಾಲ್ ವಧೇರಾ

ಚೆನ್ನೈ ಸೂಪರ್​ ಕಿಂಗ್ಸ್​:ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಎಂಎಸ್ ಧೋನಿ(ವಿಕೆಟ್​/ನಾಯಕ), ಶಿವಂ ದುಬೆ, ಡ್ವೈನ್ ಪ್ರಿಟೋರಿಯಸ್, ದೀಪಕ್ ಚಾಹರ್, ಮಿಚೆಲ್ ಸ್ಯಾಂಟ್ನರ್, ಸಿಸಂದಾ ಮಗಳಾ, ತುಷಾರ್ ದೇಶಪಾಂಡೆ

ಪ್ರಭಾವಿ ಆಟಗಾರರು: ರಾಜವರ್ಧನ್ ಹಂಗರ್ಗೇಕರ್, ಅಂಬಟಿ ರಾಯುಡು, ಶೇಕ್ ರಶೀದ್, ಆಕಾಶ್ ಸಿಂಗ್, ಸುಭ್ರಾಂಶು ಸೇನಾಪತಿ

ಇದನ್ನೂ ಓದಿ:ಟ್ವಿಟರ್​ನಲ್ಲಿ ಟ್ರೆಂಡ್​ ಆದ ಕಾವ್ಯ ಮಾರನ್: ಸೋತರೂ ಒಡತಿಯ ಸಂಭ್ರಮ ಟಾಪ್​

Last Updated : Apr 8, 2023, 7:46 PM IST

ABOUT THE AUTHOR

...view details