ಮುಂಬೈ (ಮಹಾರಾಷ್ಟ್ರ):ಮುಂಬೈ ಇಂಡಿಯನ್ಸ್ ಕೊಟ್ಟಿದ್ದ ಸಾಧಾರಣ ಮೊತ್ತವನ್ನು 3 ವಿಕೆಟ್ ನಷ್ಟದಲ್ಲಿ ಸಾಧಿಸಿದೆ. ಆರಂಭಿಕ ರುತುರಾಜ್ ಗಾಯಕ್ವಾಡ್ ಮತ್ತು ಅನುಭವಿ ಆಟಗಾರ ಅಜಿಂಕ್ಯ ರಹಾನೆ ಅವರ 81 ರನ್ನ ಜೊತೆಯಾಟದ ನೆರವಿನಿಂದ ಚೆನ್ನೈ ತಂಡ ಗುರಿಯನ್ನು ಸುಲಭವಾಗಿ 11 ಬಾಲ್ಗಳನ್ನು ಉಳಿಸಿಕೊಂಡು ಸಾಧಿಸಿತು.
ಮುಂಬೈ ಇಂಡಿಯನ್ಸ್ ನೀಡಿದ್ದ 158 ರನ್ನ್ನು ಬೆನ್ನು ಹತ್ತಿದ ಚೆನ್ನೈ ಆರಂಭಿಕ ಡೆವೊನ್ ಕಾನ್ವೆ ಶೂನ್ಯ ರನ್ಗೆ ಕಳೆದುಕೊಂಡಿತು. ನಂತರ ಬಂದ ಮೂರನೇ ವಿಕೆಟ್ ಆಗಿ ಬಂದ ಅಜಿಕ್ಯಾ ರೆಹಾನೆ ಬಿರುಸಿನ ಆಟಕ್ಕೆ ಮುಂದಾದರು. ರುತುರಾಜ್ ಗಾಯಕ್ವಾಡ್ ಅವರೊಂದಿಗೆ ಸೇರಿ ಇನ್ನಿಂಗ್ಸ್ ಕಟ್ಟಿದ ರೆಹಾನೆ 27 ಬಾಲ್ನಲ್ಲಿ 3 ಸಿಕ್ಸ್ ಮತ್ತು 7 ಬೌಂಡರಿಯಿಂದ 61 ರನ್ಗಳಿಸಿದರು. ಇದು ಅವರ ಐಪಿಎಲ್ ವೃತ್ತಿ ಜೀವನದ 28ನೇ ಅರ್ಧಶತಕವಾಗಿದೆ.
ನಂತರ ಬಂದ ಶಿವಂ ದುಬೆ ಸಹ ಗಾಯಕ್ವಾಡ್ ಜೊತೆ ಸಹಕಾರ ನೀಡಿದರು. 28 ರನ್ ಗಳಿಸಿ ಗಲುವಿಗೆ ಅಮೂಲ್ಯ ರನ್ ಸೇರಿಸಿದರು. ದುಬೆ ವಿಕೆಟ್ ನಂತರ ಬಂದ ಅಜೇಯರಾಗಿ ಅಂಬಟಿ ರಾಯುಡು 16 ಬಾಲ್ನಲ್ಲಿ 3 ಸಿಕ್ಸರ್ನಿಂದ 20 ರನ್ ಗಳಿಸಿದರು. ರುತುರಾಜ್ ಗಾಯಕ್ವಾಡ್ ಕೊನೆಯ ವರೆಗೂ ಔಟ್ ಆಗದೇ 40 ರನ್ನ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದರು.
ಮೊದಲ ಇನ್ನಿಂಗ್ಸ್:ಚೆನ್ನೈನ ರವೀಂದ್ರ ಜಡೇಜ, ಮಿಚೆಲ್ ಸ್ಯಾಂಟ್ನರ್ ಮತ್ತು ತುಷಾರ್ ದೇಶಪಾಂಡೆ ಬೌಲಿಂಗ್ ದಾಳಿಗೆ ನಲುಗಿದ ರೋಹಿತ್ ಶರ್ಮಾ ನಾಯಕಹತ್ವದ ಮುಂಬೈ ಇಂಡಿಯನ್ಸ್ 8 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿದೆ. ಮುಂಬೈ ಈ ಪಂದ್ಯದಲ್ಲೂ ಬ್ಯಾಟಿಂಗ್ ವೈಫಲ್ಯ ಕಂಡಿದೆ. ಇಶಾನ್ ಕಿಶನ್ 32 ಮತ್ತು ಟಿಮ್ ಡೇವಿಡ್ 31 ರನ್ ಗಳಿಸಿದ್ದೇ ತಂಡದ ದೊಡ್ಡ ಮೊತ್ತವಾಗಿದೆ.