ಚೆನ್ನೈ:ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಪಂದ್ಯದ ವೇಳೆ ಮೈದಾನದಲ್ಲಿ ಮಾಡುವ ಚಾಣಾಕ್ಷ ತಂತ್ರಗಳು ಒಂದೆರಡಲ್ಲ. ಅವುಗಳು ಎದುರಾಳಿ ತಂಡವನ್ನು ಸೋಲಿನ ದವಡೆಗೆ ಸಿಲುಕಿಸುತ್ತವೆ. ಆದರೆ, ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ತಂಡದ ಬೌಲರ್ಗಾಗಿ ನಾಲ್ಕು ನಿಮಿಷ ಆಟವನ್ನು ಬೇಕಂತಲೇ ನಿಲ್ಲಿಸಿದ್ದರು. ಧೋನಿ ತಳೆದ ಈ ನಿರ್ಧಾರ ಚರ್ಚೆಗೀಡು ಮಾಡಿದೆ. ಇದು ದೋನಿಯದ್ದಲ್ಲ, ಅಂಪೈರ್ಗಳ ತಪ್ಪು ಎಂದು ಹಿರಿಯ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಟೀಕಿಸಿದ್ದಾರೆ.
ಏನಾಯ್ತು?:ಗುಜರಾತ್ ವಿರುದ್ಧದ ಪಂದ್ಯದಲ್ಲಿ 16 ನೇ ಓವರ್ ಎಸೆಯಲು ಮಥೀಶ್ ಪತಿರನ ಬೌಲ್ ಪಡೆದಾಗ ಅಂಪೈರ್‌ಗಳು ತಡೆದರು. ಆಗ ನಾಯಕ ಧೋನಿ ಅಂಪೈರ್ಗಳಾದ ಅನಿಲ್ ಚೌಧರಿ, ಕ್ರಿಸ್ ಗ್ಯಾಫನಿ ಬಳಿಗೆ ಬಂದು ಪ್ರಶ್ನಿಸಿದರು. ಪತಿರನ ಆಟದ ಮಧ್ಯೆ 9 ನಿಮಿಷ ಹೊರಗಿದ್ದರು. ಈಗ ನೇರವಾಗಿ ಬೌಲ್ ಮಾಡಲು ಬಂದಿದ್ದು, ನಿಯಮಗಳ ವಿರುದ್ಧವಾಗಿದೆ. ಬೌಲ್ ಮಾಡಬೇಕಾದಲ್ಲಿ ಅಷ್ಟೇ ನಿಮಿಷಗಳು ಆಟಗಾರ ಮೈದಾನದಲ್ಲಿ ಕಳೆಯಬೇಕು. ಹೀಗಾಗಿ ಬೌಲಿಂಗ್ಗೆ ಅನುಮತಿಸಲಾಗಲ್ಲ ಎಂದಿದ್ದಾರೆ.
ಈ ವೇಳೆ ಧೋನಿ ಪತಿರನ ಬೌಲಿಂಗ್ಗಾಗಿ ಅಂಪೈರ್‌ಗಳನ್ನು ಕೋರಿದ್ದಾರೆ. ಇನ್ನೂ 4 ನಿಮಿಷಗಳು ಕಳೆದಲ್ಲಿ ಬೌಲಿಂಗ್ ಮಾಡಲು ಸಾಧ್ಯ ಎಂದು ರೂಲ್ಸ್ ಹೇಳಿದರು. ಪತಿರನ ಹೊರತಾಗಿ ತುಷಾರ್ ದೇಶಪಾಂಡೆಗೆ 3 ಓವರ್ಗಳು ಬಾಕಿ ಇದ್ದವು. ಅಲ್ಲದೇ, ರವೀಂದ್ರ ಜಡೇಜಾ, ಮಹೇಶ್ ತೀಕ್ಷಣ, ದೀಪಕ್ ಚಹರ್ ತಲಾ 4 ಓವರ್ ಎಸೆದಿದ್ದರು. ಬೇರೊಂದು ಆಯ್ಕೆಯಾಗಿ ಮೊಯಿನ್ ಅಲಿ ಮಾತ್ರ ಉಳಿದಿದ್ದರು. ಆದರೆ, 30 ಎಸೆತಗಳಲ್ಲಿ 71 ರನ್ ಅಗತ್ಯವಿದ್ದಾಗ ಸ್ಪಿನ್ನರ್ಗೆ ಬೌಲ್ ನೀಡಲು ಧೋನಿ ಹಿಂದೇಟು ಹಾಕಿದರು.