ಚೆನ್ನೈ(ತಮಿಳುನಾಡು):ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಪ್ರೇಮಿಗಳಿಗೆ ಒಂದು ಪ್ರೇರಣೆ. ಆಡುವ ಆಟಗಾರರಿಗೆ ಅವರನ ಜೊತೆಗಿನ ಸಂವಾದ ಮಾಡುವ ಅವಕಾಶ ಸಿಕ್ಕಾಗ ಅದನ್ನು ಬಳಸಿಕೊಳ್ಳುತ್ತಾರೆ. ಧೋನಿ ಆನ್ ಫೀಲ್ಡ್ನಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಮತ್ತು ಪಂದ್ಯವನ್ನು ಫಿನಿಶರ್ ಆಗಿ ಗೆಲ್ಲಿಸಿದ ಅವರ ಶೈಲಿ ಎರಡು ತಲೆಮಾರಿನ ಅಭಿಮಾನಿಗಳಿಗೆ ಮರೆಯಲು ಸಾಧ್ಯವಿಲ್ಲ.
ಆಗಸ್ಟ 15 2020 ರಲ್ಲಿ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ನ ಎಲ್ಲ ಮಾದರಿಯಿಂದಲೂ ನಿವೃತ್ತಿ ಪಡೆದರು. ನಂತರ ಅವರು ಐಪಿಎಲ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಅವರ ಅಭಿಮಾನಿಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಈ ಆವೃತ್ತಿಯ ಮೊದಲ ಪಂದ್ಯದಲ್ಲೇ ಅದು ಸಾಬೀತಾಗಿತ್ತು. ಧೋನಿ ಬ್ಯಾಟಿಂಗ್ಗೆ ಬಂದಾಗ 1.6 ಕೋಟಿ ವೀಕ್ಷಕರನ್ನು ಪಡೆದು ದಾಖಲೆ ಮಾಡಿತ್ತು.
ಇಷ್ಟು ಅಭಿಮಾನಿಗಳನ್ನು ಹೊಂದಿರುವ ಎಂಎಸ್ಡಿ ಎಲ್ಲರಿಗೂ ಬೇಸರದ ಸುದ್ದಿಯೊಂದನ್ನು ನೀಡಿದ್ದಾರೆ. ಅವರ ಐಪಿಎಲ್ ನಿವೃತ್ತಿಯ ಬಗ್ಗೆ ಉಹಾಪೋಹಗಳು 16ನೇ ಆವೃತ್ತಿಯ ಆರಂಭದಿಂದ ಹರಿದಾಡುತ್ತಿತ್ತು. ಆದರೆ, ಈಗ ಅದಕ್ಕೆ ಪುಷ್ಠಿ ನೀಡುವ ರೀತಿಯಲ್ಲಿ ಧೋನಿ ಹೇಳಿಕೆ ನೀಡಿದ್ದಾರೆ. ನಿನ್ನೆ ಸನ್ ರೈಸರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ನ ಪಂದ್ಯದ ನಂತರ ಮಾತನಾಡುವಾಗ ಧೋನಿ ನಿವೃತ್ತಿಯ ಬಗ್ಗೆ ಹಿಂಟ್ ಕೊಟ್ಟಿದ್ದಾರೆ.
ನಿನ್ನೆ ಸನ್ ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಚೆಪಾಕ್ ಕ್ರೀಡಾಂಗಣದಲ್ಲಿನ ನಡೆದ ಪಂದ್ಯದಲ್ಲಿ ಧೋನಿ ಟಾಸ್ ಗೆದ್ದು ಬೌಲಿಂಗ್ ತೆಗೆದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಬಂದ ರೈಸರ್ಸ್ ತಂಡ ನಿಗದಿತ ಓವರ್ನಲ್ಲಿ 7 ವಿಕೆಟ್ ನಷ್ಟದಿಂದ 134 ರನ್ ಮಾತ್ರ ಗಳಿಸಿತು. ಈ ಗುರಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ಸುಲಭವಾಗಿ ಸಾಧಿಸಿತು. ಆರಂಭಿಕ ಕಾನ್ವೆ ಭರ್ಜರಿ ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖರಾದರು. ತವರಿನಲ್ಲಿ ಧೋನಿ ಪಡೆ 7 ವಿಕೆಟ್ಗಳ ಜಯ ದಾಖಲಿಸಿತು.
41ರ ಹರೆಯದಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಅತ್ಯುತ್ತಮ ಕ್ರಿಕೆಟ್ ಆಡುತ್ತಿದ್ದಾರೆ. ಬ್ಯಾಟ್ ಜೊತೆಗೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ವಿಕೆಟ್ ಹಿಂದೆಯೂ ಮಿಂಚುತ್ತಿದ್ದಾರೆ. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಧೋನಿ ಎರಡು ವಿಕೆಟ್ಗಳನ್ನು ಸ್ಟಂಪ್ ಹಿಂದಿನಿಂದ ಉರುಳಿಸಿದ್ದಾರೆ. ಹರ್ಷ ಬೋಗ್ಲೆ ಈ ಬಗ್ಗೆ ಪಂದ್ಯದ ನಂತರ ಕೇಳಿದಾಗ ಕೆಲವು ಅನುಭವಗಳಿಂದ ಸಾಧ್ಯವಾಗುತ್ತದೆ, ರಾಹುಲ್ ದ್ರಾವಿಡ್ ಮತ್ತು ಸಚಿನ್ ಅವರ ರೀತಿಯಲ್ಲಿ ಅನುಭವದಿಂದ ಇದು ಸಾಧ್ಯವಾಗಿದೆ ಎಂದರು. ಇದೇವೇಳೆ "ವಯಸ್ಸಾಗಿಲ್ಲವಾ ಎಂಬ ಮಾತಿಗೆ ಉತ್ತರ ನೀಡಿದ ಅವರು ಈ ಬಗ್ಗೆ ನನಗೆ ಯಾವುದೇ ನಾಚಿಕೆ ಇಲ್ಲ ಎಂದು ಖಡಕ್ ಆಗಿಯೇ ಉತ್ತರ ನೀಡಿದ್ದಾರೆ.
ಸಾಮಾನ್ಯವಾಗಿ ಪಂದ್ಯ ಮುಗಿದ ಬೆನ್ನಲ್ಲೇ ಸ್ಟೇಡಿಯಂ ಖಾಲಿಯಾಗುತ್ತದೆ. ಆದರೆ, ನಿಮ್ಮ ಮಾತಿಗಾಗಿ ಇನ್ನೂ ಜನ ಕಾಯುತ್ತಿದ್ದಾರೆ ಎಂದು ಹರ್ಷ ಬೋಗ್ಲೆ ಸ್ಟೇಡಿಯಂನಲ್ಲಿರುವ ಅಭಿಮಾನಿಗಳನ್ನು ತೋರಿಸಿ ಕೇಳಿದಾಗ, "ಏನು ಹೇಳೋದು, ನನ್ನ ವೃತ್ತಿಜೀವನದ ಕೊನೆಯ ಹಂತ. ಎಷ್ಟು ಸಮಯದ ವರೆಗೆ ನಾನು ಆಡಲು ಸಾಧ್ಯ. ಅದನ್ನು ಆನಂದಿಸುವುದು ಮುಖ್ಯ. ಅವರು ಸಾಕಷ್ಟು ಪ್ರೀತಿ ಮತ್ತು ವಾತ್ಸಲ್ಯವನ್ನು ನೀಡಿದ್ದಾರೆ. ಅವರು ನನ್ನ ಮಾತನ್ನು ಕೇಳಲು ಯಾವಾಗಲೂ ಕಾಯುತ್ತಾರೆ ಎಂಬುದೇ ಸಂತೋಷ" ಎಂದಿದ್ದಾರೆ. ಪಂದ್ಯದ ನಂತರ ಸನ್ ರೈಸರ್ಸ್ ಹೈದರಾಬಾದ್ನ ಯುವ ಆಟಗಾರರ ಜೊತೆ ಧೊನಿ ಸಂವಾದ ನಡೆಸಿದ್ದಾರೆ.
ಇದನ್ನೂ ಓದಿ:ಚೆಪಾಕ್ನಲ್ಲಿ ಚೆನ್ನೈಗೆ ಸೂಪರ್ ಗೆಲುವು... ತವರೂರಲ್ಲಿ ಸಿಎಸ್ಕೆ ಮೇಲೆ ಅಭಿಮಾನಿಗಳ ಒಲವು - PHOTOS