ಚೆನ್ನೈ:ಎಮ್‌ಎ ಚಿದಂಬರಂ ಸ್ಟೇಡಿಯಂನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ 2023 ರ ಪಂದ್ಯದಲ್ಲಿ ಸೋಮವಾರ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಮತ್ತೊಂದು ದಾಖಲೆ ನಿರ್ಮಿಸಿದರು. ಇಂಡಿಯನ್ ಪ್ರೀಮಿಯರ್ ಟೀಗ್ ಟಿ20 ಯಲ್ಲಿ 5000 ರನ್ ಗಡಿ ತಲುಪಿದ ಆಟಗಾರ ಎಂಬ ಖ್ಯಾತಿಗೆ ಒಳಗಾದರು. ಈ ರನ್ ಮಾಡಿದ ಐದನೇ ಭಾರತೀಯ ಬ್ಯಾಟರ್ ಆಗಿದ್ದಾರೆ ಮಹೇಂದ್ರ ಸಿಂಗ್ ಧೋನಿ.
ಸಿಎಸ್‌ಕೆ ನಾಯಕ ಧೋನಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್ ಮತ್ತು ಸುರೇಶ್ ರೈನಾ ನಂತರ ಟಿ20 ಪಂದ್ಯಾವಳಿಯಲ್ಲಿ 5,000 ರನ್ ಪೂರೈಸಿದ ಐದನೇ ಭಾರತೀಯ ಆಟಗಾರರಾದರು. ತವರು ನೆಲದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಮಾಡಿತು. 20ನೇ ಓವರ್ನ ಮೊದಲನೇ ಬಾಲ್ಗೆ ಜಡೇಜಾ ವಿಕೆಟ್ ಒಪ್ಪಿಸಿದರು. ನಂತರ 7ನೇ ವಿಕೆಟ್ ಆಗಿ ಬಂದ ಧೋನಿ ಮೂರು ಬಾಲ್ಗೆ 12 ರನ್ ಗಳಿಸಿ ಔಟ್ ಆದರು. ಬಂದ ತಕ್ಷಣ ಎರಡು ಬಾಲ್ಗಳನ್ನು ಸಿಕ್ಸರ್ಗೆ ಅಟ್ಟಿದರು. ಮೂರನೇ ಬಾಲ್ ಸಹ ಸಿಕ್ಸಗೆ ಕಳುಹಿಸಲು ಪ್ರಯತ್ನಿಸಿದರು. ಆದರೆ ಕ್ಯಾಚ್ ಆಗಿ ಪರಿಣಮಿಸಿದ ಕಾರಣ ಔಟ್ ಆದರು.
ಆರ್‌ಸಿಬಿ ಸ್ಟಾರ್ ಕೊಹ್ಲಿ 224 ಐಪಿಎಲ್ ಪಂದ್ಯಗಳಲ್ಲಿ 6706 ರನ್ ಗಳಿಸಿ ಪ್ರಸ್ತುತ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸ್ಕೋರರ್ ಆಗಿದ್ದಾರೆ. ಶಿಖರ್ ಧವನ್ 199 ಐಪಿಎಲ್ ಪಂದ್ಯಗಳಲ್ಲಿ 6086, ರೋಹಿತ್ 221 ಐಪಿಎಲ್ ಪಂದ್ಯಗಳಲ್ಲಿ 5764 ರನ್, ಡೇವಿಡ್ ವಾರ್ನರ್ 155 ಐಪಿಎಲ್‌ನಲ್ಲಿ ಮ್ಯಾಚ್ನಿಂದ 5668 ರನ್, ರೈನಾ 205 ಐಪಿಎಲ್ ಪಂದ್ಯಗಳಲ್ಲಿ 5528 ರನ್ ಮತ್ತು ಎಬಿ ಡಿವಿಲಿಯರ್ಸ್ 184 ಐಪಿಎಲ್ ಪಂದ್ಯಗಳಲ್ಲಿ 5162 ರನ್ ಗಳಿಸಿದ್ದಾರೆ.