ನವದೆಹಲಿ: ಐಪಿಎಲ್‌ನಲ್ಲಿ 44 ಪಂದ್ಯಗಳು ಮುಗಿದ ಬಳಿಕ ಹಲವು ಆಟಗಾರರು ಅಮೋಘ ಫಾರ್ಮ್ ಪ್ರದರ್ಶಿಸಿದ್ದರೆ, ಕೆಲವರು ಕಳಪೆ ಆಟವನ್ನೂ ಆಡಿದ್ದಾರೆ. ಅನೇಕ ಬೌಲರ್‌ಗಳು ಉತ್ತಮ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದಾರೆ ಮತ್ತು ಅನೇಕರು ಸಾಕಷ್ಟು ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಟಿ20 ಮಾದರಿಯಲ್ಲಿ ಬ್ಯಾಟರ್ಗಳು ಬೌಲರ್ಗಳನ್ನು ಮನಸೋಇಚ್ಛೆ ದಂಡಿಸುತ್ತಾರೆ.
ಟಿ20 ಮಾದರಿ ಜನರ ಮನ ಸೆಳೆಯಲು ಪ್ರಮುಖ ಕಾರಣ ಬೌಂಡರಿಗಳ ಅಬ್ಬರ. ಅದರಲ್ಲೂ ಲೀಗ್ ಕ್ರಿಕೆಟ್ಗಳಲ್ಲಿ ಬೌಂಡರಿಗಳು ಹೆಚ್ಚು ಹರಿದು ಬರುತ್ತವೆ. ಈ ನಡುವೆಯೂ ಬೌಲಿಂಗ್ನಲ್ಲಿ ಪ್ರಾಬಲ್ಯ ಮೆರೆದ ಕೆಲ ಬೌಲರ್ಗಳಿದ್ದಾರೆ. ವಿಕೆಟ್ ಜೊತೆಗೆ ಮೇಡನ್ ಓವರ್‌ಗಳನ್ನು ಮಾಡಿ ಎದುರಾಳಿ ತಂಡವನ್ನು ಕಟ್ಟಿಹಾಕಿದ್ದಾರೆ.
ಈ ವರ್ಷ, ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ ಬೌಲಿಂಗ್ ಮಾಡಿದ 95 ಕ್ಕೂ ಹೆಚ್ಚು ಬೌಲರ್‌ಗಳಲ್ಲಿ, ಕೇವಲ 10 ಬೌಲರ್‌ಗಳು ಮಾತ್ರ ಮೇಡನ್ ಓವರ್‌ಗಳನ್ನು ಬೌಲ್ ಮಾಡಿದವರು. ಇದರಲ್ಲಿ ಐವರು ಭಾರತೀಯ ಮತ್ತು ಐವರು ವಿದೇಶಿ ಬೌಲರ್‌ಗಳು ಸೇರಿದ್ದಾರೆ. ಆದರೆ ಈ ವರ್ಷ ಇದುವರೆಗೆ ಅತಿ ಹೆಚ್ಚು ಮೇಡನ್ ಓವರ್ ಎಸೆದ ದಾಖಲೆ ರಾಜಸ್ಥಾನ್ ರಾಯಲ್ಸ್ ಬೌಲರ್ ಟ್ರೆಂಟ್ ಬೌಲ್ಟ್ ಹೆಸರಿನಲ್ಲಿದ್ದು, ಇದುವರೆಗೆ ಆಡಿದ 7 ಪಂದ್ಯಗಳಲ್ಲಿ ಗರಿಷ್ಠ 3 ಮೇಡನ್ ಓವರ್ ಬೌಲ್ ಮಾಡಿ 10 ವಿಕೆಟ್ ಪಡೆದಿದ್ದಾರೆ.
ಇದರೊಂದಿಗೆ ಗುಜರಾತ್ ಟೈಟಾನ್ಸ್ ಪರ ಬೌಲಿಂಗ್ ಮಾಡಿದ ವೇಗದ ಬೌಲರ್ ಮೊಹಮ್ಮದ್ ಶಮಿ 35 ಓವರ್‌ಗಳಲ್ಲಿ 2 ಮೇಡನ್ ಓವರ್ ಬೌಲಿಂಗ್ ಮಾಡುವಾಗ 9 ಪಂದ್ಯಗಳಲ್ಲಿ 17 ವಿಕೆಟ್ ಪಡೆದಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ಸ್ಪಿನ್ನರ್ ವರುಣ್ ಚಕ್ರವರ್ತಿ ಕೂಡ 9 ಪಂದ್ಯಗಳಲ್ಲಿ 33.4 ಓವರ್‌ಗಳಲ್ಲಿ 1 ಮೇಡನ್ ಬೌಲ್ ಮಾಡುವ ಮೂಲಕ 13 ವಿಕೆಟ್ ಪಡೆದಿದ್ದಾರೆ. ಮಾರ್ಕ್ ವುಡ್ 4 ಪಂದ್ಯಗಳಲ್ಲಿ ಕೇವಲ 16 ಓವರ್‌ಗಳಲ್ಲಿ 1 ಮೇಡನ್ ಓವರ್ ಮಾಡಿ 11 ವಿಕೆಟ್ ಪಡೆದಿದ್ದಾರೆ. ಮತ್ತೊಂದೆಡೆ, ಕುಲದೀಪ್ ಯಾದವ್ ಆಡಿರುವ 9 ಪಂದ್ಯಗಳಲ್ಲಿ ಇದುವರೆಗೆ 31 ಓವರ್‌ನಲ್ಲಿ 1 ಮೇಡನ್ ಮಾಡಿ 8 ವಿಕೆಟ್ ಪಡೆದಿದ್ದಾರೆ. ವೇಗದ ಬೌಲರ್ ಮಿಚೆಲ್ ಮಾರ್ಷ್ 6 ಪಂದ್ಯಗಳಲ್ಲಿ 13.1 ಓವರ್ ಬೌಲ್ ಮಾಡಿ 1 ಮೇಡನ್ ಓವರ್ ಬೌಲ್ ಮಾಡಿ 7 ವಿಕೆಟ್ ಕಬಳಿಸಿದ್ದಾರೆ.
ಮತ್ತೊಂದೆಡೆ, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಮೇಡನ್ ಓವರ್ ಬೌಲ್ ಮಾಡಿದ ಭುವನೇಶ್ವರ್ ಕುಮಾರ್ ಇದುವರೆಗೆ ಆಡಿದ 8 ಪಂದ್ಯಗಳಲ್ಲಿ 28 ಓವರ್ ಬೌಲ್ ಮಾಡಿದ್ದು, 1 ಮೇಡನ್ ಓವರ್ ಬೌಲ್ ಮಾಡುವ ಮೂಲಕ ಕೇವಲ 7 ವಿಕೆಟ್ ಪಡೆದಿದ್ದಾರೆ. ಮಾರ್ಕೊ ಜಾನ್ಸೆನ್ 5 ಪಂದ್ಯಗಳಲ್ಲಿ 16 ಓವರ್ ಎಸೆದು 1 ಮೇಡನ್ ಓವರ್ ಬೌಲ್ ಮಾಡಿ 6 ವಿಕೆಟ್ ಪಡೆದಿದ್ದಾರೆ. ಖಲೀಲ್ ಅಹ್ಮದ್ ಕೂಡ 4 ಪಂದ್ಯಗಳಲ್ಲಿ 14 ಓವರ್ ಬೌಲ್ ಮಾಡಿದ್ದು, 1 ಮೇಡನ್ ಓವರ್ ಬೌಲ್ ಮಾಡಿ 5 ವಿಕೆಟ್ ಕೂಡ ಪಡೆದಿದ್ದಾರೆ. ಇದಲ್ಲದೇ ಡಿಜೆ ವಿಲ್ಲಿ 4 ಪಂದ್ಯಗಳಿಂದ 15 ಓವರ್ ಗಳಲ್ಲಿ 1 ಮೇಡನ್ ಓವರ್ ಬೌಲ್ ಮಾಡುವ ಮೂಲಕ 3 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ:ಹೈಬ್ರಿಡ್ ಮಾದರಿಯಲ್ಲಿ ಏಷ್ಯಾ ಕಪ್: ಭಾರತ-ಪಾಕಿಸ್ತಾನ ಫೈನಲ್ನಲ್ಲಿ ಎದುರಾದರೆ ಪಂದ್ಯ ಎಲ್ಲಿ?