ನವದೆಹಲಿ: ಐಪಿಎಲ್ 2023ರ 50ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿದೆ. ಈ ಪಂದ್ಯದ ವೇಳೆ ಆರ್‌ಸಿಬಿ ವೇಗಿ ಮೊಹಮ್ಮದ್ ಸಿರಾಜ್ ಮತ್ತು ಡೆಲ್ಲಿ ಆರಂಭಿಕ ಆಟಗಾರ ಫಿಲ್ ಸಾಲ್ಟ್ ನಡುವೆ ಮಾತಿನ ಚಕಮಕಿ ನಡೆಯಿತು. ಪಂದ್ಯದಲ್ಲಿ ಸಿರಾಜ್ ಬೌಲಿಂಗ್ ಮಾಡುತ್ತಿದ್ದರು. ಪವರ್ ಪ್ಲೇ ಓವರ್ನಲ್ಲಿ ಸಾಲ್ಟ್ ಡೆಲ್ಲಿ ಪರ ಅಬ್ಬರದ ಬ್ಯಾಟಿಂಗ್ ಮುಂದುವರೆಸಿದ್ದರು. ಈ ವೇಳೆ ಕೋಪಗೊಂಡ ಸಿರಾಜ್ ಸಾಲ್ಟ್ ಮೇಲೆ ಮಾತಿನ ಚಕಮಕಿಗೆ ಇಳಿದು ಬೆರಳು ಗುರಿಮಾಡಿ ಮಾತನಾಡಿರು.
ಸಿರಾಜ್ ಅವರು ಅಗ್ರೆಸಿವ್ ಆಗಿ ಮೈದಾನದಲ್ಲಿ ನಡೆದುಕೊಂಡರು. ಈ ವೇಳೆ ವಾರ್ನರ್ ನಡುವೆ ಬಂದರೂ ಸಿರಾಜ್ ಕೋಪದಿಂದಲೇ ಉತ್ತರ ನೀಡಿದರು. ನಂತರ ಫಿಲ್ಡ್ ಅಂಪೈರ್ ಬಂದು ಸಿರಾಜ್ ಅವರನ್ನು ಬೌಲಿಂಗ್ ಮಾಡುವಂತೆ ಸೂಚಿಸಿದರು. ಈ ವಿಡಿಯೋ ಟ್ವಿಟರ್ ಹ್ಯಾಂಡಲ್ನಲ್ಲಿ ವೈರಲ್ ಆಗುತ್ತಿದೆ. ನಿನ್ನೆ ಪಂದ್ಯದ ವೇಳೆ ಈ ಘಟನೆ ನಂತರ ಸಿರಾಜ್ ಹೆಸರು ಟ್ವಿಟರ್ನಲ್ಲಿ ಟ್ರಂಡಿಂಗ್ನಲ್ಲಿತ್ತು.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯದಲ್ಲಿ ಸಿರಾಜ್ 2 ಓವರ್ ಬೌಲ್ ಮಾಡಿ ವಿಕೆಟ್ ಪಡೆಯದೆ 28 ರನ್ ನೀಡಿದರು. ಇದರಿಂದ ಸಿರಾಜ್ ನೊಂದುಕೊಳ್ಳಲು ಆರಂಭಿಸಿದ್ದು, ತಾಳ್ಮೆ ಕಳೆದುಕೊಂಡ ಸಿರಾಜ್ ಕೋಪದಲ್ಲೇ ಇದ್ದರು. ಇದೇ ವೇಳೆ ಸಿರಾಜ್ ಎಸೆತದಲ್ಲಿ ಫಿಲ್ ಸಾಲ್ಟ್ ಸತತ 2 ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿದರು. ಇದಾದ ಬಳಿಕ ಸಿರಾಜ್ ಬೌಲ್ ಮಾಡಿದಾಗ ಅಂಪೈರ್ ಅದನ್ನು ವೈಡ್ ಬಾಲ್ ಎಂದು ಕರೆದರು.