ಕರ್ನಾಟಕ

karnataka

ETV Bharat / sports

IPL 2023: ಅಂದು ಟೀಕೆ ಇಂದು ಪ್ರಶಂಸೆ.. ಆರ್​ಸಿಬಿ ಪರ 50ನೇ ವಿಕೆಟ್​ ಪಡೆದ ಸಿರಾಜ್​ - ETV Bharath Kannada news

ಸಿರಾಜ್​ ಟ್ರೋಲ್​ ಮಾಡುವ ಬಗ್ಗೆ ತಮ್ಮ ಬೇಸರವನ್ನು ಇತ್ತೀಚೆಗೆ ಹಂಚಿಕೊಂಡಿದ್ದು, "ಟೀಕೆಗಳು ಪ್ರೇರಣೆಯನ್ನು ಕೊಲ್ಲುತ್ತವೆ" ಎಂದು ಹೇಳಿಕೊಂಡಿದ್ದಾರೆ.

Mohammad Siraj completed 50 wickets for RCB in the IPL
IPL 2023: ಅಂದು ಟೀಕೆ ಇಂದು ಪ್ರಶಂಸೆ.. ಆರ್​ಸಿಬಿ ಪರ 50ನೇ ವಿಕೆಟ್​ ಪಡೆದ ಸಿರಾಜ್​

By

Published : Apr 3, 2023, 6:57 PM IST

ಬೆಂಗಳೂರು:ನಿನ್ನೆ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್​ ನಡುವಣ ಪಂದ್ಯದಲ್ಲಿ ಸಿರಾಜ್​ ಒಂದು ವಿಕೆಟ್​ ಕಬಳಿಸಿದರು. ಇದು ಅವರ ಆರ್​ಸಿಬಿ ಪರ ಕಿತ್ತ 50ನೇ ವಿಕೆಟ್​ ಆಗಿತ್ತು. ಮುಂಬೈನ ಆರಂಭಿಕ ಆಟಗಾರ ಇಶಾನ್​ ಕಿಶನ್​ ಸಿರಾಜ್​ ದಾಳಿಗೆ ನಲುಗಿ ಹೋಗಿದ್ದರು. ಇದರಿಂದ ಮುಂಬೈಗೆ ಆರಂಭಿಕ ಆಘಾತ ಕೂಡಾ ಆಯಿತು.

ಆರ್​ಸಿಬಿ ಮತ್ತು ಭಾರತ ತಂಡದ ವೇಗಿಗಳಲ್ಲಿ ಅಗ್ರಪಂಥೀಯರಲ್ಲಿ ಮೊಹಮ್ಮದ್ ಸಿರಾಜ್ ಹೆಸರು ಕೇಳಿ ಬರುತ್ತದೆ. ಆದರೆ ಸಿರಾಜ್ ಈ ಹಂತಕ್ಕೆ ಬರುವ ಮುನ್ನ ಹಲವಾರು ಅವಮಾನಗಳನ್ನು ತಮ್ಮ ಹೆಜ್ಜೆಯಾಗಿಸಿಕೊಂಡಿದ್ದಾರೆ. ಆರ್​ಸಿಬಿಯಲ್ಲಿ ​ಮೊದಲು ಬೌಲಿಂಗ್​ ಮಾಡಿದಾಗ ಹೆಚ್ಚು ರನ್​ ಬಿಟ್ಟುಕೊಡುತ್ತಿದ್ದರು ಎಂದು ಮೀಮ್ಸ್​ಗಳು ಮತ್ತು ಟ್ರೋಲ್​ ಪೇಜ್​ಗಳು ಅವರನ್ನು ಅಪಹಾಸ್ಯ ಮಾಡಿದ್ದರು. ಇಂದು ತಂಡದ ಸ್ಟಾರ್​ ಬೌಲರ್​ ಆಗಿ ಮಿಂಚುತ್ತಿದ್ದಾರೆ.

ಭಾರತ ತಂಡದ ಏಕದಿನ ಕ್ರಿಕೆಟ್​ನಲ್ಲಿ ಉತ್ತಮ ಬೌಲಿಂಗ್​ ಮಾಡಿದ ಸಿರಾಜ್​ ಐಸಿಸಿ ರ್‍ಯಾಂಕಿಂಗ್​ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೂ ಏರಿದ್ದಾರೆ. ಅವರನ್ನು ಈ ಹಿಂದೆ ಎರಡು ರೀತಿ ಟ್ರೋಲ್​ ಮಾಡಲಾಗುತ್ತಿತ್ತು. ಒಂದೆಡೆ ಕೆಲವರು ಭಾರತದ ಭವಿಷ್ಯದ ಉತ್ತಮ ಬೌಲರ್​ ಎಂದು ಕೊಂಡಾಡಿದರೆ, ಮತ್ತೊಂದೆಡೆ ಆಟೋ ಓಡಿಸು ಎಂದು ಸಹ ಟ್ರೋಲ್​ ಮಾಡಿದ್ದರು. ಆದರೆ ತಂಡದ ಆಟಗಾರರ ಸಲಹೆ ಮತ್ತು ಕೋಚ್​ನ ಸಹಾಯದಿಂದ ಸಿರಾಜ್​ ಇಂದು ಉತ್ತಮ ಬೌಲರ್ ಆಗಿ ಹೊರಹೊಮ್ಮಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ಸಿರಾಜ್​ ತಮ್ಮ ಖಾತೆಯ ನಾಲ್ಕು ಓವರ್​ಗಳನ್ನು ಮಾಡಿ 21 ರನ್​ ಮಾತ್ರ ಬಿಟ್ಟುಕೊಟ್ಟರು. ಮುಂಬೈಯ ಇನ್​ ಫಾರ್ಮ್​ ಬ್ಯಾಟರ್​ ಇಶಾನ್​ ಕಿಶನ್​ ಅವರ ವಿಕೆಟ್​ನ್ನು ಪಂದ್ಯದ ಮೂರನೇ ಮತ್ತು ವೈಯಕ್ತಿಕ ಎರಡನೇ ಓವರ್​ನಲ್ಲಿ ಗಳಿಸಿದರು. 5.20ಯ ಎಕಾನಮಿಯನ್ನು ನಿನ್ನೆ ಸಾಧಿಸಿದ್ದರು. ಈ ವರೆಗೆ ಐಪಿಎಲ್​ನಲ್ಲಿ 66 ಪಂದ್ಯಗಳನ್ನು ಆಡಿದ್ದು 60 ವಿಕೆಟ್​ ಪಡೆದುಕೊಂಡಿದ್ದಾರೆ.

RCB ಪಾಡ್‌ಕ್ಯಾಸ್ಟ್‌ನ ಇತ್ತೀಚಿನ ಸಂಚಿಕೆಯಲ್ಲಿ ಮಾತನಾಡಿದ ಸಿರಾಜ್, "ನಿಂದನೆಯ ಮಾತುಗಳನ್ನು ಆಡುವುದು ಸುಲಭ, ಆದರೆ ಅವನ ಹೋರಾಟದ ಬಗ್ಗೆ ಬರೆಯುವವನಿಗೆ ಏನೂ ತಿಳಿದಿರುವುದಿಲ್ಲ. ಟ್ರೋಲ್​ ಮಾಡುವವನ ಬಗ್ಗೆ ಸರಿಯಾಗಿ ತಿಳಿದುಕೊಂಡರೆ ಆಗ ನೀವು ಯಾರನ್ನೂ ನಿಂದಿಸುವುದಿಲ್ಲ. ಟೀಕೆಗಳು ಪ್ರೇರಣೆಯನ್ನು ಕೊಲ್ಲುತ್ತವೆ. ಒಂದು ದಿನ ಅವರು ನಿಮ್ಮನ್ನು ಭಾರತದ ಭವಿಷ್ಯ ಎಂದು ಕರೆಯುತ್ತಾರೆ, ಮರುದಿನ ಅವರು ನೀವು ಏನೂ ಅಲ್ಲ ಮತ್ತು ಆಟೋ ಓಡಿಸಬೇಕು ಎಂದು ಹೇಳುತ್ತಾರೆ. ಇದು ನನಗೆ ಅರ್ಥವಾಗುತ್ತಿಲ್ಲ" ಎಂದು ಆನ್‌ಲೈನ್ ಟ್ರೋಲ್​ಗಳ ಬಗ್ಗೆ ತಮಗಾದ ಅನುಭವವನ್ನು ಸಿರಾಜ್​​ ಹಂಚಿಕೊಂಡಿದ್ದರು.

"ಎಲ್ಲ ಬೆಂಬಲಕ್ಕೆ ಧನ್ಯವಾದಗಳು, ಆದರೆ ಯಾರನ್ನೂ ನಿಂದಿಸಬೇಡಿ. ಏರಿಳಿತಗಳು ಜೀವನದ ಭಾಗ ಎಂದು ನಾನು ಹೇಳಬಲ್ಲೆ. ವಿಶ್ರಾಂತಿ ನಿಮಗೆ ಬಿಟ್ಟದ್ದು. ನಮ್ಮ ಹೋರಾಟದ ಬಗ್ಗೆ ನಿಮಗೆ ತಿಳಿದಿದೆ, ಈಗಲೂ ನೀವು ನಮ್ಮೊಂದಿಗೆ ಹಾಗೆ ವರ್ತಿಸುತ್ತೀರಿ. ನಮ್ಮ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಆದರೆ, ಒಬ್ಬ ಮನುಷ್ಯನಾಗಿ ನಾನು ನಿಮ್ಮಿಂದ ಕೇಳಬಹುದಾದದ್ದು ಎಲ್ಲರನ್ನೂ ಗೌರವಿಸುವುದು" ಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ:IPL 2023: ತವರಿನಲ್ಲಿ ಮೊದಲ ಜಯದ ಹಂಬಲದಲ್ಲಿ ಧೋನಿ ಪಡೆ.​. ಚೆಪಾಕ್​ನಲ್ಲಿ "ಸೂಪರ್"ಗಳ ಹಣಾಹಣಿ

ABOUT THE AUTHOR

...view details