ಕರ್ನಾಟಕ

karnataka

By

Published : May 3, 2021, 8:56 AM IST

ETV Bharat / sports

ಕೊರೊನಾ ವಾರಿಯರ್ಸ್ ಮೇಲೆ ಆರ್​​ಸಿಬಿ ಪ್ರೀತಿ: ಸಚಿವ ಡಾ.ಸುಧಾಕರ್​ ಪ್ರಶಂಸೆ

ನೀಲಿ ಜೆರ್ಸಿ ತೊಟ್ಟು ಮೈದಾನಕ್ಕಿಳಿಯುವ ಮುಖೇನ ಆರ್‌ಸಿಬಿ ತಂಡ ಕೊರೊನಾ ವೈರಸ್ ವಿರುದ್ಧ ಹಗಲಿರುಳೆನ್ನದೆ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್ ಶ್ರಮಕ್ಕೆ ಗೌರವ ಸೂಚಿಸಲಿದೆ.

ಕೊರೊನಾ ವಾರಿಯರ್ಸ್​ಗಳ ಮೇಲಿನ ಆರ್​​ಸಿಬಿ ಪ್ರೀತಿಗೆ ಫೀದಾ ಆದ ಸಚಿವ ಸುಧಾಕರ್​
ಕೊರೊನಾ ವಾರಿಯರ್ಸ್​ಗಳ ಮೇಲಿನ ಆರ್​​ಸಿಬಿ ಪ್ರೀತಿಗೆ ಫೀದಾ ಆದ ಸಚಿವ ಸುಧಾಕರ್​

ಹೈದರಾಬಾದ್:ಈ ಐಪಿಎಲ್ ಟೂರ್ನಿಯ ಮುಂದಿನ ಪಂದ್ಯವೊಂದರಲ್ಲಿ ನೀಲಿ ಜೆರ್ಸಿ ತೊಟ್ಟು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಣಕ್ಕಿಳಿಯಲಿದೆ.

ಈ ಪಂದ್ಯದಲ್ಲಿ ಬಳಸುವ ಮ್ಯಾಚ್ ಕಿಟ್ ಮೇಲೆ ಕೊರೊನಾ ವಾರಿಯರ್ಸ್ ಕುರಿತು ವಿಶೇಷ ಸಂದೇಶ ಬರೆಯಲಾಗಿರುತ್ತದೆ. ಪಂದ್ಯ ಮುಗಿದ ನಂತರ ಜೆರ್ಸಿಗಳ ಮೇಲೆ ತಂಡದ ಆಟಗಾರರ ಸಹಿಗಳನ್ನು ಹಾಕಿ ಅವುಗಳನ್ನು ಹರಾಜಿನಲ್ಲಿ ಮಾರಾಟ ಮಾಡುವ ಮೂಲಕ ಬಂದ ಹಣವನ್ನು ಕೊರೊನಾ ವಿರುದ್ಧದ ಹೋರಾಟಕ್ಕೆ ನೀಡಲಾಗುವುದು ಎಂದು ಆರ್‌ಸಿಬಿ ತಿಳಿಸಿದೆ.

ಅಷ್ಟೇ ಅಲ್ಲದೆ, ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಆಕ್ಸಿಜನ್ ಸರಬರಾಜು ಮಾಡುವುದಕ್ಕೂ ಸಹ ರಾಯಲ್ ಚಾಲೆಂಜರ್ಸ್ ತಂಡ ಆರ್ಥಿಕ ಸಹಾಯ ಮಾಡಲಿದೆ ಎಂದಿದೆ.

ಇದನ್ನು ಓದಿ: ಕೊರೊನಾ ವಾರಿಯರ್ಸ್​ಗೆ ಗೌರವ ಸೂಚಿಸಲು ನೀಲಿ ಜರ್ಸಿಯಲ್ಲಿ ಕಣಕ್ಕಿಳಿಯಲಿರುವ ಆರ್​ಸಿಬಿ

ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವರಾದ ಡಾ. ಕೆ.ಸುಧಾಕರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಈ ನಡೆಯನ್ನು ಪ್ರಶಂಸಿದ್ದಾರೆ.

ABOUT THE AUTHOR

...view details