ಕರ್ನಾಟಕ

karnataka

ETV Bharat / sports

ಎಬಿಡಿ ಸ್ಫೋಟಕ ಬ್ಯಾಟಿಂಗ್​ಗೆ ಬೆಚ್ಚಿದ ಹಾಲಿ ಚಾಂಪಿಯನ್ಸ್ ಮುಂಬೈ: RCBಗೆ ರೋಚಕ ಜಯ

ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನೀಡಿದ 160 ರನ್​ಗಳ ಮೊತ್ತವನ್ನು ಆರ್​ಸಿಬಿ 8 ವಿಕೆಟ್​ ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿದೆ. 2021ರ ಆವೃತ್ತಿಯ ಟೂರ್ನಿ ಜಯದೊಂದಿಗೆ ಆರಂಭಿಸಿದೆ.

By

Published : Apr 9, 2021, 11:28 PM IST

Updated : Apr 10, 2021, 6:07 AM IST

ab de villiers ipl
ab de villiers ipl

ಚೆನ್ನೈ:ಬಹುನಿರೀಕ್ಷಿತ 2021ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವು ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ರೋಚಕ ಎರಡು ವಿಕೆಟ್​​ಗಳಿಂದ ಉದ್ಘಾಟನಾ ಪಂದ್ಯದಲ್ಲಿ ಸೋಲಿಸಿದೆ.

ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನೀಡಿದ 160 ರನ್​ಗಳ ಮೊತ್ತವನ್ನು ಆರ್​ಸಿಬಿ, 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿತು. 2021ರ ಆವೃತ್ತಿಯ ಟೂರ್ನಿಯನ್ನು ಜಯದೊಂದಿಗೆ ಆರಂಭಿಸಿದೆ.

ಮುಂಬೈ ಇಂಡಿಯನ್ಸ್ ನೀಡಿದ್ದ 160 ರನ್​ಗಳ ಗೆಲುವಿನ ಗುರಿ ಮುಟ್ಟಲು ಆರಂಭಿಕರಾಗಿ ಬ್ಯಾಟಿಂಗ್​ಗೆ ಇಳಿದ ಸುಂದರ್ (10) ಹಾಗೂ ಚೊಚ್ಚಲ ಪಂದ್ಯ ಆಡುತ್ತಿರುವ ರಜತ್ ಪಾಟೀದಾರ್ (8) ಬೇಗನೆ ವಿಕೆಟ್‌ ಕಳೆದುಕೊಂಡು ಆರ್​ಸಿಬಿ ಹಿನ್ನೆಡೆ ಅನುಭವಿಸಿತ್ತು. ಸಂಕಷ್ಟಸದಲ್ಲಿ ಸಿಲುಕಿದ್ದ ತಂಡಕ್ಕೆ ನಾಯಕ ವಿರಾಟ್ ಕೊಹ್ಲಿ (33) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ (39) ಜೊತೆಗೂಡಿ ಪಂದ್ಯದ ಗತಿಯನ್ನೇ ಬದಲಾಯಿಸಿ, ಮುಂಬೈ ಇಂಡಿಯನ್ಸ್​ ಬೌಲರ್‌ಗಳನ್ನು ಸಮರ್ಥವಾಗಿ ದಂಡಿಸಿದರು.

ತಂಡದ ಮೊತ್ತ 98 ರನ್​ಗಳು ಆಗಿದ್ದಾಗ ನಾಯಕ ಕೊಹ್ಲಿ ತಮ್ಮ ವಿಕೆಟ್​ ಒಪ್ಪಿಸಿದ ಬೆನ್ನಲ್ಲೇ ಕ್ರೀಸ್​ನಲ್ಲಿ ನೆಲೆಯೂರಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಔಟಾದರು. ಇದು ಆರ್‌ಸಿಬಿ ಹಿನ್ನೆಡೆಗೆ ಕಾರಣವಾಯಿತು. ಶಹಬಾಜ್ ಅಹ್ಮದ್ ಕೂಡ ಒಂದು ರನ್​ಗೆ ಮಾರ್ಕೊ ಜಾನ್ಸೆನ್ ಔಟ್​ ಆದರು. ಅಂತಿಮ ಐದು ಓವರ್‌ಗಳಲ್ಲಿ ಆರ್‌ಸಿಬಿ ಗೆಲುವಿಗೆ 54 ರನ್‌ಗಳ ಅವಶ್ಯಕತೆಯಿತ್ತು.

ಗೆಲುವಿನ ನಿರೀಕ್ಷೆಗಳನ್ನು ಹೊತ್ತ ಕಣದಲ್ಲಿ ನಿಂತಿದ್ದ ಎಬಿ ಡಿ ವಿಲಿಯರ್ಸ್​, 27 ಎಸೆತಗಳನ್ನು ಎದುರಿಸಿದ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 48 ರನ್ ಗಳಿಸಿದರು. ಆದರೆ ಗೆಲುವಿಗೆ 2 ರನ್ ಮಾತ್ರ ಬಾಕಿ ಉಳಿದಿರುವಾಗ ರನೌಟ್ ಆಗಿ ನಿರಾಸೆ ಮೂಡಿಸಿದರು. ಬಳಿಕ ಬಂದ ಹರ್ಷಲ್ ಪಟೇಲ್​ ಗೆಲುವಿನ ರನ್ ಬಾರಿಸಿದರು. ಈ ಮೂಲಕ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ಗೆ ಸೋಲಿನ ರುಚಿ ತೋರಿಸಿರುವ ಆರ್‌‌ಸಿಬಿ, ಗೆಲುವಿನೊಂದಿಗೆ 2021ರ ಟೂರ್ನಿಯನ್ನು ಶುಭಾರಂಭ ಮಾಡಿದೆ.

ವಿಶೇಷ ಶತಕ ಬಾರಿಸಿದ ಚಹಲ್​:

ಇದೇ ದಿನ ಮುಂಬೈ ಇಂಡಿಯನ್ಸ್‌ ವಿರುದ್ಧ ಆರ್‌ಸಿಬಿ ಪರ ಕಣಕ್ಕಿಳಿಯುವ ಮೂಲಕ ಚಹಲ್‌ ಐಪಿಎಲ್‌ ಇತಿಹಾಸದಲ್ಲಿ 100 ಪಂದ್ಯಗಳನ್ನು ಆಡಿದ ಸಾಧನೆ ಮಾಡಿದ್ದಾರೆ. ನಾಲ್ಕು ಓವರ್‌ಗಳನ್ನು ಎಸೆದು 41 ರನ್‌ ಬಿಟ್ಟುಕೊಟ್ಟು ಯಾವುದೇ ವಿಕೆಟ್ ಪಡೆಯಲಿಲ್ಲ. ಆದರೆ, ಪವರ್‌ ಪ್ಲೇನಲ್ಲಿ ಬೌಲಿಂಗ್‌ ಮಾಡಿ ಇನಿಂಗ್ಸ್‌ನ 4ನೇ ಓವರ್‌ನ ಕೊನೆಯ ಎಸೆತದಲ್ಲಿ ಎದುರಾಳಿ ತಂಡದ ನಾಯಕ ರೋಹಿತ್‌ ಶರ್ಮಾ ಅವರನ್ನು ರನ್‌ಔಟ್‌ ಮಾಡುವಲ್ಲಿ ಯಶಸ್ವಿಯಾದರು.

Last Updated : Apr 10, 2021, 6:07 AM IST

ABOUT THE AUTHOR

...view details