ಕರ್ನಾಟಕ

karnataka

ETV Bharat / sports

ಶೀಘ್ರದಲ್ಲೇ ತಂಡ ಸೇರಿಕೊಳ್ಳಲಿದ್ದಾರೆ ಹಾರ್ದಿಕ್ ಪಾಂಡ್ಯ: ಶೇನ್ ಬಾಂಡ್ ವಿಶ್ವಾಸ - ರಾಹುಲ್ ತ್ರಿಪಾಠಿ

ಹಾರ್ದಿಕ್, ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಪಂದ್ಯಗಳನ್ನು ಆಡಿಲ್ಲ. ಅವರು ಪಂದ್ಯಕ್ಕೆ ಯಾವಾಗ ಮರಳುತ್ತಾರೆ ಅನ್ನೋದರ ಬಗ್ಗೆ ತಿಳಿದಿಲ್ಲ ಎಂದು ಎಂಐ ಬೌಲಿಂಗ್ ಕೋಚ್​ ಶೇನ್​ ಬಾಂಡ್ ಹೇಳಿದ್ದಾರೆ.

ಶೇನ್ ಬಾಂಡ್
ಶೇನ್ ಬಾಂಡ್

By

Published : Sep 24, 2021, 10:04 AM IST

ಅಬುಧಾಬಿ: ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಶೀಘ್ರದಲ್ಲೇ ತಂಡಕ್ಕೆ ಮರಳಲಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ಬೌಲಿಂಗ್ ಕೋಚ್ ಶೇನ್ ಬಾಂಡ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಾರ್ದಿಕ್, ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಪಂದ್ಯಗಳನ್ನು ಆಡಿಲ್ಲ. ಅವರು ಪಂದ್ಯಕ್ಕೆ ಯಾವಾಗ ಮರಳುತ್ತಾರೆ ಅನ್ನೋದರ ಬಗ್ಗೆ ತಿಳಿದಿಲ್ಲ.

ಹಾರ್ದಿಕ್​ ಚೆನ್ನಾಗಿ ತರಬೇತಿ ಪಡೆಯುತ್ತಿದ್ದು, ಶೀಘ್ರದಲ್ಲೇ ಅವರು ತಂಡಕ್ಕೆ ಮರಳಲಿದ್ದಾರೆ. ನಾವು ಟೀಂ ಇಂಡಿಯಾದ ಅಗತ್ಯತೆಗಳೊಂದಿಗೆ ನಮ್ಮ ತಂಡದ ಅಗತ್ಯಗಳನ್ನು ನೋಡಿಕೊಳ್ಳುತ್ತಿದ್ದೇವೆ. ಹಾರ್ದಿಕ್ ಮುಂದಿನ ಪಂದ್ಯದಲ್ಲಿ ಆಡಲಿದ್ದಾರೆ ಅನ್ನೋ ವಿಶ್ವಾಸವಿದೆ ಎಂದು ಬಾಂಡ್ ಹೇಳಿದ್ದಾರೆ.

ಫ್ರಾಂಚೈಸಿ ನಮ್ಮ ಆಟಗಾರರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಆಟಗಾರನಿಗೆ ಬೇಕಾದ ಸೌಲಭ್ಯಗಳನ್ನು ನೀಡಬೇಕು. ನಾವು ಪಂದ್ಯ ಗೆಲ್ಲಲು ಇನ್ನೂ ಅವಕಾಶವಿದೆ. ಉಳಿದ ಪಂದ್ಯಗಳಲ್ಲಿ ನಾವು ಸೋಲುವುದಕ್ಕೆ ಇಷ್ಟಪಡಲ್ಲ ಎಂದು ಶೇನ್ ಬಾಂಡ್ ಹೇಳಿದರು.

ಇಲ್ಲಿ ಗುರುವಾರ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಹುಲ್ ತ್ರಿಪಾಠಿ ಮತ್ತು ವೆಂಕಟೇಶ್ ಅಯ್ಯರ್ ಕ್ರಮವಾಗಿ 74 ಮತ್ತು 53 ರನ್ ಗಳಿಸಿದರು. ಈ ಗೆಲುವಿನೊಂದಿಗೆ ಕೆಕೆಆರ್ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದರೆ ಮುಂಬೈ ಇಂಡಿಯನ್ಸ್ ಆರನೇ ಸ್ಥಾನಕ್ಕೆ ಕುಸಿದಿದೆ.

ನಿನ್ನೆಯ ಪಂದ್ಯದಲ್ಲಿ ನಾವು ಶೇಕಡಾ 80 ರಷ್ಟು ಚೆನ್ನಾಗಿ ಆಡಿದ್ದೇವೆ. ಮೊದಲ ಆರು ಓವರ್​ಗಳನ್ನು ನಿಯಂತ್ರಿಸುವ ಮೂಲಕ ಕೆಕೆಆರ್​ ಹಿಮ್ಮೆಟ್ಟಿಸಲು ಯತ್ನಿಸಿದೆವು. ಅಲ್ಲದೇ, ನಮ್ಮ ತಂಡದಲ್ಲಿ ಉತ್ತಮ ಬ್ಯಾಟ್ಸ್​ಮನ್​ಗಳಿದ್ದಾರೆ. ನಾವು ಗೆಲ್ಲಲು ಇನ್ನೂ ಅವಕಾಶವಿದೆ ಎಂದು ಅವರು ಹೇಳಿದ್ದಾರೆ.

ಈ ಮೊದಲು ಕ್ವಿಂಟನ್ ಡಿ ಕಾಕ್ 55 ರನ್ ಗಳಿಸಿ ಮುಂಬೈ ಇಂಡಿಯನ್ಸ್ ನಿಗದಿತ ಇಪ್ಪತ್ತು ಓವರ್ ಗಳಲ್ಲಿ ಕೆಕೆಆರ್ ವಿರುದ್ಧ 155/6 ರನ್ ಗಳಿಸಿತು. ಕೆಕೆಆರ್ ಪರವಾಗಿ, ಪ್ರಸಿದ್ಧ್ ಕೃಷ್ಣ ಮತ್ತು ಲಾಕಿ ಫರ್ಗುಸನ್ ತಲಾ ಎರಡು ವಿಕೆಟ್ ಪಡೆದರು.

ಇದನ್ನೂ ಓದಿ: ​​ಸಿಎಸ್​ಕೆ ವಿರುದ್ಧ ಗೆಲುವಿನ ಹಳಿಗೆ ಮರಳುವ ಉತ್ಸಾಹದಲ್ಲಿ ಆರ್​ಸಿಬಿ

ಕೆಕೆಆರ್ ಅದ್ಭುತವಾಗಿ ಬೌಲಿಂಗ್ ಮಾಡುವ ಮೂಲಕ ನಮ್ಮನ್ನು ಒತ್ತಡಕ್ಕೆ ತಳ್ಳಿದರು. ಅವರು ಗೆಲ್ಲಲು ಅರ್ಹರು ಎಂದು ಬಾಂಡ್ ಹೇಳಿದರು. ಮುಂಬೈ ಇಂಡಿಯನ್ಸ್​​ ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಹೋರಾಡಲಿದೆ.

ABOUT THE AUTHOR

...view details