ಕರ್ನಾಟಕ

karnataka

ETV Bharat / sports

'ಕಿಂಗ್ ಈಸ್ ಬ್ಯಾಕ್​​..': ಧೋನಿ ಗುಣಗಾನ ಮಾಡಿದ ಕೊಹ್ಲಿ - ಧೋನಿ ಕೊಹ್ಲಿ

ಕಳಪೆ ಫಾರ್ಮ್ ಟೀಕೆಗೆ ಗುರಿಯಾಗಿದ್ದ ಧೋನಿ ನಿನ್ನೆಯ ಮ್ಯಾಚ್​​ ಫಿನಿಶರ್​​ ಆಗಿ ಟೀಕೆಗೆ ಉತ್ತರಿಸಿದ್ದಾರೆ. ಈ ಬಗ್ಗೆ ಆರ್​​​ಸಿಬಿ ನಾಯಕ ವಿರಾಟ್ ಕೊಹ್ಲಿ, ಗ್ರೇಟೆಸ್ಟ್ ಫಿನಿಶರ್ ಎವರ್ ಎಂದು ಕೊಂಡಾಡಿದ್ದಾರೆ.

dhoni
ಎಂಎಸ್ ಧೋನಿ

By

Published : Oct 11, 2021, 9:27 AM IST

Updated : Oct 11, 2021, 9:38 AM IST

ದುಬೈ: ಐಪಿಎಲ್​ ಸೀಸನ್ 13ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್​​​​ ಕಿಂಗ್ಸ್ ಗೆದ್ದು ನೇರ ಫೈನಲ್ ತಲುಪಿದೆ. ಡೆಲ್ಲಿ ಬೌಲರ್​​ಗಳ ಸಾಂಘಿಕ ದಾಳಿಯಿಂದ ಒಂದು ಹಂತದಲ್ಲಿ ಪಂದ್ಯ ಸೋಲುವ ಹಂತ ತಲುಪಿತ್ತು. ಆದರೆ ಕೊನೆಯ ಓವರ್​​ನಲ್ಲಿ ಸಿಡಿದೆದ್ದ ಧೋನಿ ಬೌಂಡರಿ, ಸಿಕ್ಸರ್ ನೆರವಿನಿಂದ ಪಂದ್ಯ ಗೆಲ್ಲಿಸಿ ಗ್ರೇಟೆಸ್ಟ್ ಫಿನಿಶರ್ ಎಂಬುದನ್ನು ಮತ್ತೆ ನಿರೂಪಿಸಿದರು.

ಈ ಹೈವೋಲ್ಟೇಜ್ ಪಂದ್ಯದ ಕುರಿತಂತೆ ರಾಯಲ್ ಚಾಲೆಂಜರ್ಸ್ ತಂಡದ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿ, ಧೋನಿ ಆಟಕ್ಕೆ ತಲೆಬಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಧೋನಿಯನ್ನು ‘ಗ್ರೇಟೆಸ್ಟ್ ಫಿನಿಶರ್’ ಎಂದು ಹೊಗಳಿದ್ದಾರೆ.

‘ಕಿಂಗ್ ಈಸ್ ಬ್ಯಾಕ್ ಗ್ರೇಟೆಸ್ಟ್ ಫಿನಿಶರ್ ಎವರ್ ಇನ್ ದಿ ಗೇಮ್’ ಎಂದಿರುವ ಕೊಹ್ಲಿ, ‘ಈ ರಾತ್ರಿ ಮತ್ತೊಮ್ಮೆ ಸೀಟ್​​ನಿಂದ ಜಿಗಿಯುವಂತೆ ಮಾಡಿದೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಕೊನೆಯ ಓವರ್​ನಲ್ಲಿ 12 ರನ್ ಗಳಿಸುವುದು ಚೆನ್ನೈಗೆ ಸವಾಲಾಗಿತ್ತು. ಆದರೆ ಧೋನಿಯ ಅಬ್ಬರದ ಬ್ಯಾಟಿಂಗ್​ನಿಂದಾಗಿ ತಂಡ ಫೈನಲ್ ಪ್ರವೇಶಿಸಿದೆ.

ಇದಕ್ಕೂ ಮೊದಲು ಧೋನಿ ಬ್ಯಾಟಿಂಗ್ ಫಾರ್ಮ್ ಕುರಿತಂತೆ ಟೀಕೆ ಕೇಳಿಬಂದಿದ್ದವು. ಕೆಲ ಪಂದ್ಯಗಳಲ್ಲಿ ಎರಡಂಕಿ ರನ್​​ ಗಳಿಸಲು ಸಹ ಅವರು ಪರದಾಡಿದ್ದರು. ಆದರೆ ನಿನ್ನೆಯ ಪಂದ್ಯದಲ್ಲಿ ಟೀಕೆಗಳಿಗೆ ಉತ್ತರಿಸಿದ್ದು, ಕ್ರಿಕೆಟ್​ ಜಗತ್ತಿನ ‘ಗ್ರೇಟೆಸ್ಟ್ ಫಿನಿಶರ್’ ಎಂಬುದನ್ನು ಮತ್ತೆ ತೋರಿಸಿಕೊಟ್ಟಿದ್ದಾರೆ.

ಇದನ್ನೂ ಓದಿ:ವಿಶ್ವಕಪ್​ ತಂಡದಲ್ಲಿದ್ದ 7 ಮಂದಿಗೆ ಗೇಟ್ ಪಾಸ್​ ನೀಡಿದ ಶ್ರೀಲಂಕಾ : 15 ಸದಸ್ಯರ ಹೊಸ ಟೀಂ ಪ್ರಕಟ

Last Updated : Oct 11, 2021, 9:38 AM IST

ABOUT THE AUTHOR

...view details