ಲಕ್ನೋ (ಉತ್ತರ ಪ್ರದೇಶ): ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ತಮ್ಮ ತವರು ನೆಲದಲ್ಲಿ ಹ್ಯಾಟ್ರಿಕ್ ಗೆಲುವಿನ ಗುರಿಯನ್ನು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಕೋಚಿಂಗ್ ಸ್ಟಾಫ್‌ನಲ್ಲಿ ಸೇರ್ಪಡೆಗೊಂಡಿರುವ ಆ್ಯಂಡ್ ಫ್ಲವರ್ ಇದಕ್ಕಾಗಿ ಪ್ಲಾನ್ ಮಾಡುತ್ತಿದ್ದು, ಮಧ್ಯಮ ಕ್ರಮಾಂಕದಲ್ಲಿ ದೀಪಕ್ ಹೂಡಾ ಮತ್ತು ನಿಕೋಲಸ್ ಪೂರನ್ ಅವರನ್ನು ಉತ್ತಮವಾಗಿ ಬಳಸಿಕೊಳ್ಳುವ ಬಗ್ಗೆಯೂ ಚರ್ಚಿಸುತ್ತಿದ್ದಾರೆ. ಇದರೊಂದಿಗೆ ಕೆ.ಕೆ. ಗೌತಮ್ ಮತ್ತು ರವಿ ಬಿಷ್ಣೋಯ್ ಅವರ ಸ್ಪಿನ್ ಬೌಲಿಂಗ್ ಅನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಮೂಲಕ ಅವರು ಪಂಜಾಬ್ ಕಿಂಗ್ಸ್ ಮಣಿಸುವ ಸೂತ್ರ ಹೆಣೆದಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ತವರಿನಲ್ಲಿ ಸೋಲಿಸಲು ಕಷ್ಟಕರವಾದ ತಂಡವಾಗಿ ಕಳೆದ ಪಂದ್ಯಗಳಲ್ಲಿ ಗುರುತನ್ನು ಮಾಡಿದೆ. ಇದಕ್ಕೂ ಮುನ್ನ ತವರು ಮೈದಾನ ಏಕಾನಾ ಸ್ಟೇಡಿಯಂನಲ್ಲಿ ಆಡಿದ ಎರಡೂ ಪಂದ್ಯಗಳನ್ನು ಲಕ್ನೋ ಸೂಪರ್ ಜೈಂಟ್ಸ್ ಗೆದ್ದುಕೊಂಡಿತ್ತು. ಲಕ್ನೋ ಸೂಪರ್ ಜೈಂಟ್ಸ್ ಈ ಋತುವಿನಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಹುಲ್ ಪಡೆ ಸೋಲು ಕಂಡಿತ್ತು.
ಈ ಆವೃತ್ತಿಯಲ್ಲಿ ಆಡಿದ ನಾಲ್ಕರಲ್ಲಿ ಪಂಜಾಬ್ ಕಿಂಗ್ಸ್ 2 ಪಂದ್ಯಗಳನ್ನು ಗೆದ್ದು, ಎರಡರಲ್ಲಿ ಸೋಲನುಭವಿಸಿದೆ ರುಚಿಯನ್ನು ಅನುಭವಿಸಿದೆ. ಕೋಲ್ಕತ್ತಾ ಹಾಗೂ ರಾಜಸ್ಥಾನ ವಿರುದ್ಧ ಗೆದ್ದ ಶಿಖರ್ ಧವನ್ ಬಳಗದ ಮಧ್ಯಮ ಕ್ರಮಾಂಕಸದ ಬ್ಯಾಟಿಂಗ್ ವೈಫಲ್ಯ ಎದುರಿಸುತ್ತಿದೆ. ಇದರಿಂದಾಗಿ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಗುಜರಾತ್ ಟೈಟಾನ್ಸ್ ವಿರುದ್ಧ ಸೋಲು ಕಂಡಿದೆ.
2022 ರಲ್ಲಿ ಎರಡು ತಂಡಗಳ ನಡುವೆ ಕೇವಲ ಒಂದು ಪಂದ್ಯ ಮಾತ್ರ ನಡೆದಿತ್ತು, ಇದರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪಂಜಾಬ್ ಕಿಂಗ್ಸ್ ಅನ್ನು 20 ರನ್‌ಗಳಿಂದ ಸೋಲಿಸಿತು. ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ನೀಡಿದ 154 ರನ್ ಗಳ ಗುರಿ ಬೆನ್ನತ್ತಲು ಸಾಧ್ಯವಾಗಲಿಲ್ಲ. ಈ ಬಾರಿ ಲಕ್ನೋ ಸೂಪರ್ ಜೈಂಟ್ಸ್ ತವರು ನೆಲದಲ್ಲಿ ಪಂಜಾಬ್ ಕಿಂಗ್ಸ್ ಅನ್ನು ಸೋಲಿಸುವ ಮೂಲಕ ಗೆಲುವಿನ ದಾಖಲೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತದೆ.