ಚೆನ್ನೈ (ತಮಿಳುನಾಡು): ಕ್ಯಾಮರೂನ್ ಗ್ರೀನ್, ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಅವರ 50 ಆಸುಪಾಸಿನ ರನ್ ಸಹಾಯದಿಂದ ಅಗತ್ಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಿಗದಿತ ಓವರ್ ಅಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿದೆ. ಲಕ್ನೋ ಸೂಪರ್ ಜೈಂಟ್ಸ್ ಬೌಲರ್ಗಳು ಆರಂಭದಿಂದ ಮುಂಬೈನ ವಿಕೆಟ್ ಕಬಳಿಸುತ್ತಾ ರನ್ ಮೇಲೆ ಕಡಿವಾಣ ಹಾಕುತ್ತಾ ಬಂದರು. ನವೀನ್ ಉಲ್ ಹಕ್ ಮುಂಬೈನ ನಾಲ್ಕು ಬ್ಯಾಟರ್ಗಳನ್ನು ಉರುಳಿಸಿದರು. ಇದರಿಂದ ಸೂಪರ್ ಜೈಂಟ್ಸ್ ಗೆಲುವಿಗೆ 183 ರನ್ ಗಳಿಸಬೇಕಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವುದಾಗಿ ಹೇಳಿ ಕ್ರೀಸ್ಗೆ ಇಳಿದ ರೋಹಿತ್ 11 ರನ್ ಗಳಿಸುತ್ತಿದ್ದಂತೆ ಯಶ್ ಠಾಕೂರ್ಗೆ ವಿಕೆಟ್ ಕೊಟ್ಟರು. ಅವರ ಬೆನ್ನಲ್ಲೇ ಕಿಶಾನ್ ಕಿಶನ್ ಸಹ 15 ರನ್ ಗಳಿಸಿ ನವೀನ್ ಉಲ್ ಹಕ್ಗೆ ಔಟ್ ಆದರು. ಮುಂಬೈ ಇಂದು ಉತ್ತಮ ಆರಂಭ ಕಾಣುವಲ್ಲಿ ಎಡವಿತು. ನಾಯಕ ತಂಡದ ಮೊತ್ತ 30 ಆಗಿದ್ದಾಗ ಪೆವಿಲಿಯನ್ಗೆ ಮರಳಿದರೆ, 38 ರನ್ ಆದಾಗ ಕಿಶನ್ ಸಹ ಡ್ರೆಸ್ಸಿಂಗ್ ರೂಮ್ ಹಿಂದಿರುಗಿದ್ದರು.
ಎರಡು ವಿಕೆಟ್ ಪತನದ ನಂತರ ಬಂದ ಕ್ಯಾಮರೂನ್ ಗ್ರೀನ್ ಮತ್ತು ಸೂರ್ಯಕುಮಾರ್ ಯಾದವ್ ವಿಕೆಟ್ ಬಿದ್ದಿರುವುದನ್ನೂ ಲೆಕ್ಕಸದೇ ಅಬ್ಬರದ ಬ್ಯಾಟಿಂಗ್ನ್ನು ಎಂದಿನಂತೆ ಮಾಡಿದರು. ಇವರಿಬ್ಬರು ಬಿರುಸಿನ ಆಟದ ನೆರವಿನಿಂದ ಮುಂಬೈ ಪವರ್ ಪ್ಲೇ ಅಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿ ಚೇತರಿಕೆಯ ಸ್ಥಿತಿಯಲ್ಲಿತ್ತು. ಗ್ರೀನ್ ಸೂರ್ಯ ಜೋಡಿ ಎಂಐಗೆ 50+ ರನ್ ಜೊತೆಯಾಟ ನೀಡಿದರು.