ಲಕ್ನೋ (ಉತ್ತರ ಪ್ರದೇಶ): ಮುಂಬೈ ಇಂಡಿಯನ್ಸ್ನ ಬ್ಯಾಟಿಂಗ್ ಫಾರ್ಮ್ಗೆ ಬಂದಿದೆ, ಬೌಲಿಂಗ್ನಲ್ಲಿ ಸುಧಾರಿಸಿಕೊಳ್ಳ ಬೇಕು ಎಂದು ವಿಮರ್ಶಿಸಲಾಗುತ್ತಿತ್ತು. ಇಂದು ಲಕ್ನೋ ವಿರುದ್ಧ ವಿಕೆಟ್ ಉರುಳಿಸದಿದ್ದರೂ ಕೃನಾಲ್ ಪಡೆಯನ್ನು ಅವರ ತವರು ನೆಲದಲ್ಲೇ ಮುಂಬೈ ಕಟ್ಟಿಹಾಕಿದೆ. ಎಂಐನ ಬಿಗಿಯಾದ ಬೌಲಿಂಗ್ ನಡುವೆ ನಾಯಕ ಕೃನಾಲ್ ಪಾಂಡ್ಯ ಹಾಗೂ ಮಾರ್ಕಸ್ ಸ್ಟೋನಿಸ್ ಬ್ಯಾಟಿಂಗ್ ನೆರವಿನಿಂದ ಲಕ್ನೋ ನಿಗದಿತ ಓವರ್ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿದರು. ಮುಂಬೈ ಗೆಲುವಿಗೆ 178 ರನ್ನ ಅಗತ್ಯವಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಬಂದ ಲಕ್ನೂ ಸೂಪರ್ ಜೈಂಟ್ಸ್ ಆರಂಭಿಕ ಜೊತೆಯಾಟದ ಕೊರತೆ ಅನುಭವಿಸಿತು. ತಂಡ ಮೊತ್ತ 12 ಆಗಿದ್ದಾಗ 2.1 ಓವರ್ನಲ್ಲಿ ದೀಪಕ್ ಹೂಡಾ 6 ರನ್ಗೆ ವಿಕೆಟ್ ಕೊಟ್ಟರೆ, ಪ್ರೇರಕ್ ಮಂಕಡ್ ಶೂನ್ಯಕ್ಕೆ ವಿಕೆಟ್ ಕೊಟ್ಟಿದ್ದಾರೆ. ನಂತರ ನಾಯಕ ಕೃನಾಲ್ ಪಾಂಡ್ಯ ಮತ್ತು ಡಿ ಕಾಕ್ ಅವರನ್ನು ಸೇರಿಕೊಂಡರು. ಆದರೆ ಡಿ ಕಾಕ್ 16 ರನ್ ಗಳಿಸಿ ಔಟ್ ಆದರು.
ಡಿ ಕಾಕ್ ನಂತರ ಬಂದ ಮಾರ್ಕಸ್ ಸ್ಟೋನಿಸ್ ನಾಯಕ ಕೃನಾಲ್ಗೆ ಸಾಥ್ ನೀಡಿದರು. ತಂಡ ಸಂಕಷ್ಟದಲ್ಲಿದ್ದಾಗ ಜೋಡಿ 89 ರನ್ನ ಜೊತೆಯಾಟ ಮಾಡಿತು. ಇದು ಲಕ್ನೋ ತಂಡ ದಾಖಲೆಯ ಜೊತೆಯಾಟವಾಗಿದೆ. ಲಕ್ನೋ ತಂಡದಲ್ಲಿ ಈ ಆವೃತ್ತಿಯಲ್ಲಿ ಯಾವುದೇ ವಿಕೆಟ್ಗೆ 89 ರನ್ ಜೊತೆಯಾಟ ಬಂದಿರಲಿಲ್ಲ. 42 ಬಾಲ್ ಎದುರಿಸಿ 49 ರನ್ ಗಳಿಸಿ ಆಡುತ್ತಿದ್ದ ಕೃನಾಲ್ ಪಾಂಡ್ಯ ಗಾಯಕ್ಕೆ ತುತ್ತಾದರು. ಇದರಿಂದ 1 ರನ್ನಿಂದ ಅರ್ಧಶತಕದಿಂದ ವಂಚಿತರಾದರು. ಕೃನಾಲ್ ಗಾಯದ ಕಾರಣ ರಿಟೈರ್ಡ್ ಹರ್ಟ್ ಎಂದು ಘೋಷಿಸಿ ಪೆವಿಲಿಯನ್ಗೆ ಮರಳಿದರು.
ಪೂರನ್ ಕೃನಾಲ್ ಜಾಗಕ್ಕೆ ಮರಳಿದರು. ವಿಕೆಟ್ ಮೇಲೆ ಮೊದಲು ನಿಯಂತ್ರಣ ಸಾಧಿಸಿದ್ದ ಮುಂಬೈ ಬೌಲರ್ಗಳು ಕೊನೆಯ ಓವರ್ಗಳಲ್ಲಿ ದುಬಾರಿಯಾದರು. ಕೊನೆಯ ಮೂರು ಓವರ್ನಲ್ಲಿ 54 ರನ್ ಲಕ್ನೋ ತಂಡಕ್ಕೆ ಹರಿದು ಬಂತು. 18 ನೇ ಓವರ್ ಮಾಡಿದ ಕ್ರಿಸ್ ಜೋರ್ಡಾನ್ ಬರೋಬ್ಬರಿ 24 ರನ್ ಬಿಟ್ಟುಕೊಟ್ಟರು. ಈ ವೇಳೆ ಮಾರ್ಕಸ್ ಸ್ಟೋನಿಸ್ ಭರ್ಜರಿ ಅರ್ಧಶತಕ ಗಳಿಸಿದರು.