ಲಕ್ನೋ (ಉತ್ತರ ಪ್ರದೇಶ):ಲಕ್ನೋಗೆಕೊಟ್ಟಿದ್ದ 136 ರನ್ನ ಅಲ್ಪ ಮೊತ್ತದ ಗುರಿಯನ್ನು ಗುಜರಾತ್ ಟೈಟಾನ್ಸ್ ಯಶಸ್ವಿಯಾಗಿ ನಿಯಂತ್ರಿಸಿ 7 ರನ್ನ ಭರ್ಜರಿ ಗೆಲುವು ಸಾಧಿಸಿದೆ. ಕೊನೆಯ ಓವರ್ನಲ್ಲಿ ಮೋಹಿತ್ ಶರ್ಮಾ ಮಾಡಿದ ಮ್ಯಾಜಿಕ್ನಿಂದ ಗುಜರಾತ್ ಟೈಟಾನ್ಸ್ ತಂಡ ಲಕ್ನೋವನ್ನು ಮಣಿಸಿತು. ಕೊನೆಯ ಓವರ್ ಒಂದರಲ್ಲೇ 4 ವಿಕೆಟ್ ಕಳೆದುಕೊಂಡ ಲಕ್ನೋ 20 ಓವರ್ಗೆ 128 ರನ್ ಗಳಿಸಷ್ಟೇ ಶಕ್ತವಾಗಿ , ಗುರಿಯಿಂದ 7 ರನ್ ಹಿನ್ನಡೆ ಅನುಭವಿಸಿತು.
ಸಾಧಾರಣ ಮೊತ್ತವನ್ನು ಬೆನ್ನು ಹತ್ತಿದ್ದ ಲಕ್ನೋ ಸೂಪರ್ ಜೈಂಟ್ಸ್ ಉತ್ತಮ ಆರಂಭ ಪಡೆಯಿತು. ಕೆಎಲ್ ರಾಹುಲ್ ಮತ್ತು ಕೈಲ್ ಮೇಯರ್ಸ್ ಜೋಡಿ 55 ರನ್ ಓಪನಿಂಗ್ ಜೊತೆಯಾಟ ಮಾಡಿದರು. ಸತತ ಉತ್ತಮ ಫಾರ್ಮ್ನಲ್ಲಿರುವ ಕೈಲ್ ಮೇಯರ್ಸ್ 24 ರನ್ ಗಳಿಸಿದ್ದಾಗ ರಶೀದ್ ಖಾನ್ ಅವರ ಬೌಲಿಂಗ್ಗೆ ವಿಕೆಟ್ ಒಪ್ಪಿಸಿದರು.
ಕೈಲ್ ಮೇಯರ್ಸ್ ನಂತರ ಬಂದ ಕೃನಾಲ್ ಪಾಂಡ್ಯ ಬ್ಯಾಟಿಂಗ್ನಲ್ಲೂ ರಾಹುಲ್ ಸಾಥ್ ನೀಡಿದರು. ನಾಯಕನ ಜೊತೆ ಸೇರಿದ ಕೃನಾಲ್ ಮತ್ತೆ 55 ರನ್ ಜೊತೆಯಾಟ ಮಾಡಿದರು. ಪಿಚ್ ಬೌಲರ್ ಸ್ನೇಹಿಯಾಗಿದ್ದು ಅಬ್ಬರದ ಹೊಡೆತಗಳು ಇಬ್ಬರು ಬ್ಯಾಟರ್ಗಳಿಂದಲೂ ಬರಲಿಲ್ಲ. 23 ಎಸೆತದಲ್ಲಿ 23 ರನ್ ಗಳಿಸಿದ್ದ ಕೃನಾಲ್ ಪಾಂಡ್ಯ ನೂರ್ ಅಹಮದ್ಗೆ ವಿಕೆಟ್ ಕೊಟ್ಟರು. ನಂತರ ಬಂದ ಯಾವುದೇ ಬ್ಯಾಟರ್ ರಾಹುಲ್ಗೆ ಜೊತೆಯಾಟ ಮಾಡಲಿಲ್ಲ. ನಿಕೋಲ್ಸ್ ಪೂರನ್(1) ವಿಕೆಟ್ 110 ರನ್ ಆಗಿದ್ದಾಗ ಬಿದ್ದಿತ್ತು.
ಮ್ಯಾಜಿಕ್ ಮೋಹಿತ್ ಓವರ್: 20ನೇ ಓವರ್ನಲ್ಲಿ ಮ್ಯಾಜಿಕ್ ನಡೆಯಿತು ಎಂದರೆ ತಪ್ಪಾಗಲಾರದು. 6 ಬಾಲ್ಗೆ 12 ರನ್ನ ಅವಶ್ಯಕತೆ ಇತ್ತು. ಮೊದಲ ಬಾಲ್ಗೆ ಎರಡು ರನ್, ಎರಡನೇ ಬಾಲ್ನಲ್ಲಿ 68 ರನ್ ಗಳಿಸಿ ಆಡುತ್ತಿದ್ದ ಕೆಎಲ್ ರಾಹುಲ್ ವಿಕೆಟ್ ಬಿದ್ದಿತ್ತು. ಮೂರನೇ ಬಾಲ್ನಲ್ಲಿ ಮಾರ್ಕಸ್ ಸ್ಟೋನಿಸ್ (0) ಔಟ್ ಆದರು. ನಾಲ್ಕನೇ ಎಸೆತದಲ್ಲಿ ಆಯುಷ್ ಬದೋನಿ (8) ರನ್ ಔಟ್ ಆದರೆ, ಐದನೇ ಬಾಲ್ನಲ್ಲಿ ದೀಪಕ್ ಹೂಡಾ (2) ರನ್ ಔಟ್ಗೆ ಬಲಿಯಾದರು. ಕೊನೆಯ ಓವರ್ನಲ್ಲಿ 4 ವಿಕೆಟ್ ಬಿದ್ದು, 4 ರನ್ ಮಾತ್ರ ಮೋಹಿತ್ ಶರ್ಮಾ ಬಿಟ್ಟುಕೊಟ್ಟರು.
ವ್ಯರ್ಥವಾದ ಅರ್ಧಶತಕ:ಆರಂಭದಿಂದ ಇಬ್ಬರ ಜೊತೆ 50 ರನ್ನ ಜೊತೆಯಾಟ ಮಾಡಿದ ನಾಯಕ ಕೆಎಲ್ ರಾಹುಲ್ ನಿಧಾನ ಗತಿಯ ಅರ್ಧಶತಕ ದಾಖಲಿಸಿದರು. ಇದು ಅವರ ಐಪಿಎಲ್ನ 32 ನೇ ಅರ್ಧಶತಕವಾಗಿದೆ. ಈ ಇನ್ನಿಂಗ್ಸ್ನಲ್ಲಿ ಅವರು 61 ಬಾಲ್ ಎದುರಿಸಿ 8 ಬೌಂಡರಿಯಿಂದ 68ರನ್ ಗಳಿಸಿದರು. ಒಂದೇ ಒಂದು ಸಿಕ್ಸ್ ಬಾರಿಸದ ರಾಹುಲ್ 111.48 ರ ಏಕದಿನ ಸ್ಟ್ರೈಕ್ ರೇಟ್ ಕಾಯ್ದುಕೊಂಡರು.